ಹೈ ಎಂಡ್ ಕಾರುಗಳ ಖರೀದಿ ನೆಪದಲ್ಲಿ,ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರಿಂದ ಸೈಯಾದ್ ಜಿಬ್ರಾನ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.
ಬಂಧಿತನಿಂದ 10 ಕೋಟಿ ಮೌಲ್ಯದ 9 ಹೈ ಎಂಡ್ ಕಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಉದ್ಯಮಿಗಳನ್ನ ಪರಿಚಯ ಮಾಡಿಕೊಂಡು ಹೈ ಎಂಡ್ ಕಾರುಗಳನ್ನು ಪಡೆಯುತ್ತಿದ್ದ ಹಾಗೂ ಕಾರುಗಳನ್ನ ಒಳ್ಳೆಯ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿ ವಂಚಿಸುತ್ತಿದ್ದ.
ಆಡಿ, ಬೆನ್ಜ್, ಮಹೀಂದ್ರ ಥಾರ್, ರೇಂಜ್ ರೋವರ್, ಇನೋವಾ ಸೇರಿ ದುಬಾರಿ ಬೆಲೆಯ ಕಾರುಗಳನ್ನ ಪಡೆದು ವಂಚನೆ ಮಾಡಿದ್ದಾನೆ.
ಉದ್ಯಮಿ ರಾಜು ಎಂಬಾತನ ರೇಂಜ್ ರೋವರ್ ಕಾರನ್ನು 18 ಲಕ್ಷಕ್ಕೆ ಖರೀದಿ ಮಾಡಿ,ಹಣ ನೀಡದೆ ಸತಾಯಿಸುತ್ತಿದ್ದ
ಹಣ ನೀಡುವಂತೆ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದ,
ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಉದ್ಯಮಿ ರಾಜು ದೂರು ನೀಡಿದ್ದರು.
ರಾಜು ದೂರಿನ ಮೇರೆಗೆ ,ಕಬ್ಬನ್ ಪಾರ್ಕ್ ಪೊಲೀಸರು ಸೈಯ್ಯದ್ ಜಿಬ್ರಾನ್ ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಭೇದಿಸುವಲ್ಲಿ ಕೇಂದ್ರ ವಿಭಾಗದ ಉಪಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ, ನೇತೃತ್ವದಲ್ಲಿ
ಸವರಿ ಎರಡೂ ಪ್ರಕರಣದಲ್ಲಿ ದಸ್ತಗಿರಿ ಮಾಡಿದ ಇಬ್ಬರು ಆರೋಪಿಗಳಿಂದ ಒಟ್ಟು 8 ಕೋಟಿ 92 ಲಕ್ಷ ಬೆಲೆ ಬಾಳುವ 12 ವಿವಿಧ ಕಂಪನಿಯ ಕಾರುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಉಳಿದ ಆರೋಪಿಗಳ ಪತ್ತಿಕಾರ್ಯ ಹಾಗೂ ಇನ್ನೂ ತಲೆತಪ್ಪಿಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರವರಾದ ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ.ಡಿ.ಎಸ್. ರಾಜೇಂದ್ರರವರ ಮಾರ್ಗದರ್ಶನದಲ್ಲಿ ಕಬ್ಬನ್‌ಪಾರ್ಕ್ ಪೊಲೀಸ್ ಉಣೆಯ ಪೊಲೀಸ್ ಇನ್ಸ್‌ಪೆಕ್ಟ ಶ್ರೀ ಚೈತನ್ಯಸಿ ರವರ ನೇತೃತ್ವದಲ್ಲಿ ಅಶೋಕನಗರ ಪೊಲೀಸ್ ಠಾಣೆಯ ಶ್ರೀಮತಿ ಅಶ್ವಿನಿ ಪಿ.ಎಸ್.ಐ. ಶ್ರೀ ಹರಿಚಂದ್ರ ಎ.ಎಸ್.ಐ. ಶ್ರೀ ವಸಂತಪ್ಪ,ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಶ್ರೀ ಕೃಷ್ಣಮೂರ್ತಿ ಎ.ಎಸ್.ಐ. ಶ್ರೀ ಕುಮಾರ್ ಎ.ಎಸ್.ಐ ಶ್ರೀ ಜಹಂಗೀರ್ ಸಾಬ್ ,ಶ್ರೀಶಬೀಉಲ್ಲಾ,ಶ್ರೀ ಪ್ರಮೋದ, ಶ್ರೀ ಮಣಿಕಂಠನಾಯಕ,ಶ್ರೀ ಸೋಮಪ್ಪ ಲಮಾಣಿ,ವಿವೇಕನಗರ ಠಾಣೆಯ ಲೋಕೇಶ್, ತಾಂತ್ರಿಕ ವಿಭಾಗದ ಸಿಬ್ಬಂದಿ ಶ್ರೀ ರಂಗನಾಥ್, ಕವಿಯಾ ಸಹಾಯಕ ಸಿಬ್ಬಂದಿ ಶ್ರೀ ವಿನಯ್ ಕುಮಾರ್ ಅವರುಗಳ ತಂಡ ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿ ಕಳವು ಮೋಸದಿಂದ ಮಾರಾಟ ಮಾಡಿದ ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕಬ್ಬನ್ ಪಾರ್ಕ್ ಪೊಲೀಸರ ಕಾರ್ಯಾಚರಣೆ
Date: