ಡ್ರಗ್ ಪೆಡ್ಲೆರ್ ಗಳು ಭವ್ಯ ಭಾರತದ ನಿರ್ಮಾಣಕ್ಕೆ ಒಂದು ಕುತ್ತು ಎಂದರೆ ತಪ್ಪಾಗಲಾರದು. ಭವ್ಯ ಭವಿಷ್ಯದ ಕನಸನ್ನು ಹೊತ್ತಿರುವ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಅವರ ಭವಿಷ್ಯವನ್ನು ನಾಶ ಮಾಡುವ ಕಾರ್ಯಕ್ಕೆ ಕೈ ಹಾಕುವವರೇ ಈ ಡ್ರಗ್ ಪೆಡ್ಲೆರ್ಗಳು. ಕೇವಲ ದುಡ್ಡು ಮಾಡುವ, ವಾಮ ಮಾರ್ಗದಲ್ಲಿ ಶ್ರೀಮಂತರಾಗುವ, ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಅನೇಕ ಯುವ ಪೀಳಿಗೆಯ ಭವಿಷ್ಯವನ್ನೇ ಹಾಳುಗೆಡವಲು ಈ ಡ್ರಗ್ ಪೆಡ್ಲೆರ್ ಗಳು ಸನ್ನದ್ಧರಾಗಿ ನಿಂತಿದ್ದಾರೆ.
ಪೊಲೀಸರು ಪ್ರತಿನಿತ್ಯ ಮಾದಕ ವಸ್ತು ಮಾರಾಟ ಮಾಡುವ ಪೆಡ್ಲೆರ್ ಗಳ ಮೇಲೆ ಸಮರವನ್ನೇ ಸಾರಿದ್ದಾರೆ.
ಆದರೂ ಈ ಪೆಡ್ಲೆರ್ಗಳಿಂದ ಇನ್ನೂ ಮುಕ್ತಿ ಸಿಕ್ಕಿಲ್ಲ. ಆದರೆ ಇಲ್ಲೊಬ್ಬರು ಖಡಕ್ ಅಧಿಕಾರಿ ಇಂತಹ ಪೆಡ್ಲೆರ್ ಗಳಿಗೆ ಸರಿಯಾಗಿಯೇ ಕಾನೂನಿನ ಪಾಠ ಕಲಿಸಿದ್ದಾರೆ.ಪ್ರಪ್ರಥಮ ಬಾರಿಗೆ ಕೇವಲ ಪೆಡ್ಲೆರ್ ಗಳನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸುವುದಷ್ಟೇ ಅಲ್ಲದೆ ಇಂತಹ ನೀಚ ಕಾರ್ಯದಿಂದ ಅವರು ಸಂಪಾದನೆ ಮಾಡಿಕೊಂಡಿದ್ದ, ಅವರ ಆಸ್ತಿಗೂ ಕುತ್ತು ತಂದಿದ್ದಾರೆ. ಪೆಡ್ಲೆರ್ ಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವ ಜೊತೆಗೆ ಅವರುಗಳು ಇಂತಹ ಕೆಲಸದಿಂದ ಸಂಪಾದನೆ ಮಾಡಿದ ಆಸ್ತಿಯನ್ನೂ ಕೂಡ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಈಗಾಗಲೇ ಇಬ್ಬರು ಡ್ರಗ್ ಪೆಡ್ಲೆರ್ ಗಳ ಆಸ್ತಿಯನ್ನು ಫ್ರೀಜ್ ಮಾಡಿಸುವ ಮುಖೆನ ಪೆಡ್ಲೆರ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಇಪ್ಪತ್ತೆಂಟು ಜನ ಡ್ರಗ್ ಪೆಡ್ಲೆರ್ಸ್ಗಳ ಗಡಿಪಾರು ಮಾಡಿಸಿದ್ದಾರೆ.
ಖಡಕ್ ಅಧಿಕಾರಿ :ಎಸಿಪಿ ರಾಮಚಂದ್ರ.ಬಿ
Date: