21 C
Bengaluru
Thursday, November 7, 2024

ಜನಸ್ನೇಹಿ ಡಿಸಿಪಿ:ಸಿ.ಕೆ.ಬಾಬಾ

Date:

“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬಂತೆ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರೇ ಹೀರೋ ಗಳು ” ಅರೆರೇ ಏನಿದು ಸಾರ್ವಜನಿಕರು ಹೀರೋಗಳ? ಈ ಮಾತನ್ನ ನಾವ್ ಹೇಳ್ತಾ ಇಲ್ಲ ನಮ್ಮ ಜನಸ್ನೇಹಿ ಪೊಲೀಸ್ ಹೀರೋ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರ ಕಾರ್ಯ ವೈಖರಿ ಹೇಳ್ತಾ ಇದೆ.
ಈಗಾಗಲೇ ಪೊಲೀಸ್ ಠಾಣೆಗಳು ಜನಸ್ನೇಹಿ ಪೊಲೀಸ್ ಠಾಣೆಗಳಾಗಿ ಕಾರ್ಯ ನಿರ್ವಹಿಸ ಬೇಕೆಂಬ ನಿಟ್ಟಿನಲ್ಲಿ, ಡಿಸಿಪಿ ಬಾಬಾ ರವರು ಅವರ ವಿಭಾಗದ ಠಾಣೆಗಳಲ್ಲಿ ಗ್ರಂಥಾಲಯ ನಿರ್ಮಿಸಿ ಸಾರ್ವಜನಿಕರ ಸಮಯ ಹಾಗೂ ಬುದ್ದಿ ಮತ್ತೆಯ ಉಳಿವಿಗಾಗಿ ಠಾಣೆಗಳಲ್ಲಿ ಗ್ರಂಥಾಲಯ ನಿರ್ಮಿಸಿ, ಪೊಲೀಸ್ ಠಾಣೆಗಳು ಜನಸ್ನೇಹಿ ಠಾಣೆಗಳಾಗುವತ್ತ ಮುಂದಡಿ ಇಟ್ಟಿದ್ದರು.
ಈಗ ಮತ್ತೆ ಠಾಣೆಗಳು ಹಾಗೂ ಪೊಲೀಸರು ಜನಸ್ನೇಹಿ ಗಳಾಗಿ ಕಾರ್ಯ ನಿರ್ವಹಿಸುವಂತೆ ತಿಳಿ ಹೇಳಿ ಪೊಲೀಸ್ ಠಾಣೆಗಳಿಗೆ ತಮ್ಮ ದೂರು ದುಮ್ಮಾನ ಹೊತ್ತು ಬರುವ ಸಾರ್ವಜನಿಕರಿಗೆ ಮುಕ್ತ ಹಾಗೂ ನ್ಯಾಯಪರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಡಿಸಿಪಿ ಬಾಬಾ ರವರು ಆಗ್ನೇಯ ವಿಭಾಗದ ಪ್ರತಿ ಠಾಣೆಗಳಲ್ಲಿ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಅನ್ನು ಜಾರಿಗೆ ತಂದಿದ್ದಾರೆ.
ಏನಿದು ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಅಂದ್ರೆ ಈಗಾಗಲೇ ಹದಿನಾಲ್ಕು ಠಾಣೆಯ ಬಾಗಿಲಿನಲ್ಲಿ ಕ್ಯೂ ಆರ್ ಕೋಡ್ ಬೋರ್ಡ್ ಅನ್ನು ಹಾಕಲಾಗಿದೆ.ಠಾಣೆಗೆ ಭೇಟಿ ನೀಡಿದ್ದ ಪ್ರತಿಯೊಬ್ಬರೂ ಪ್ರವೇಶ ದ್ವಾರ ದಲ್ಲಿ ಅಳವಡಿಸಿರುವ ಕ್ಯೂ ಆರ್ ಕೋಡ್ ಮುಕಾಂತರ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
ಠಾಣೆಗೆ ಭೇಟಿ ನೀಡುವವವರು, ಪೊಲೀಸರು ವಿವರ ಪಡೆದ ನಂತರ ಕ್ಯೂ ಆರ್ ಕೋಡ್ ಅನ್ನು ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಬೇಕು ತದ ನಂತರ ಒಂದು ಅಲ್ಲಿ ಒಂದು ಲಿಂಕ್ ಲಭ್ಯವಾಗಿ ಅಲ್ಲಿ ಕೇಳುವ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯ ಬರೆಯಬೇಕು.
ಭ್ರಷ್ಟಾಚಾರ ತಡೆಗೆ ಆಗ್ನೇಯ ವಿಭಾಗದಲ್ಲಿ ಇದೊಂದು ವಿನೂತನ ಕ್ರಮ,ಹದಿನಾಲ್ಕು ಠಾಣೆಬಾಗಿಲಿಗೆ ಕೋಡ್ ಬೋರ್ಡ್ ಅಳವಡಿಸಲಾಗಿದ್ದು,
ಪೊಲೀಸರ ಕರ್ತವ್ಯ ನಿರ್ವಹಣೆ ಹಾಗೂ ನಡವಳಿಕೆ ಕುರಿತು ಈ ಕ್ಯೂ ಆರ್ ಕೋಡ್ ಮುಕಾಂತರ ತಿಳಿಸಬಹುದಾಗಿದೆ.ಎಸಿಪಿ ಕಚೇರಿಗಳಲ್ಲಿ ಕೂಡ ಕ್ಯೂಆರ್ ಕೋಡ್’ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚೆಗೆ ಭ್ರಷ್ಟಾಚಾರ ಆರೋಪದು ಇಬ್ಬರು ಕಾನ್‌ಸ್ಟೇಬಲ್ ಗಳನ್ನು ಡಿಸಿಪಿ ಡಾ| ಸಿ.ಕೆ.ಬಾಬಾ ಅಮಾನತುಗೊಳಿಸಿದ್ದರು.
ಈ ಹಿನ್ನೆಲೆಯಲ್ಲಿ ಜನಸ್ನೇಹಿ ವ್ಯವಹರಿಸಲು ಜಾರಿಗೊಳಿಸಲು ಆಗ್ನೆಯ ವಿಭಾಗದ ಎಲ್ಲ 14 ಠಾಣೆಗಳಲ್ಲಿ ,ಎಸಿಪಿ ಕಚೇರಿಗಳಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೆ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದೆ.
ದೂರು ಸ್ವೀಕರಿಸಲು ನಿರಾಕರಿಸಿದರೆ ಅಥವಾ ತಡಮಾಡಿದರೆ ,ಎಫ್‌ಐಆರ್ ದಾಖಲಿಸಲು ಪೊಲೀಸರು ಲಂಚ ಕೇಳಿದರೇ?
ಅಹವಾಲು ಸಲ್ಲಿಸಲು ತೆರಳಿದ್ದಾಗ ಪೊಲೀಸರ ವರ್ತನೆ ಹೇಗಿತ್ತು ಎಂಬ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು,
ಅಲ್ಲದೆ ಠಾಣೆ ವ್ಯವಸ್ಥೆ ಹಾಗೂ ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಸಲಹೆಯನ್ನು ನಾಗರಿಕರು ತಿಳಿಸಬಹುದಾಗಿದೆ.
ಈ ವೇಳೆ ಪೊಲೀಸರ ಮೇಲೆ ಆರೋಪಗಳು ಕೇಳಿ ಬಂದರೆ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಾ||ಸಿ.ಕೆ.ಬಾಬಾ ತಿಳಿಸಿದ್ದಾರೆ.
ಈಗಾಗಲೇ ಕ್ಯೂ ಆರ್ ಕೋಡ್ ಮೂಲಕ 1573ಮಂದಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
173ದೂರುದಾರರು 4ಸ್ಟಾರ್ ರೇಟಿಂಗ್ ನೀಡಿದ್ದಾರೆ.ಹದಿನೈದು ಮಂದಿ ಮಾತ್ರ ಠಾಣೆಯ ವಾತಾವರಣಕ್ಕೆ ರೆಡ್ ಸಿಗ್ನಲ್ ಕೊಟ್ಟಿದ್ದಾರೆ,ಜನಪರ ಜನಸ್ನೇಹಿ ಠಾಣೆಗಳಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಡಿಸಿಪಿ ಯವರ ಪಾತ್ರ ಅಗ್ರಗಣ್ಯ.
ಈಗಾಗಲೇ ಬಂಡೆಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ರಾಜೇಶ್ ರವರು ಕಳೆದ ಹತ್ತು ತಿಂಗಳ ಹಿಂದೆಯೇ ಠಾಣೆಗೆ ಭೇಟಿ ಕೊಟ್ಟ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ಅದರಲ್ಲೇನಾದರೂ ಲೋಪದೋಷಗಳು ಕಂಡುಬಂದರೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಅಭಿಪ್ರಾಯ ಸಂಗ್ರಹಕ್ಕಾಗಿ ಒಂದು ಪುಸ್ತಕದಲ್ಲಿ ಠಾಣೆಯ ಬಗ್ಗೆ, ಸಿಬ್ಬಂದಿಗಳ ಬಗ್ಗೆ ದೂರು ದುಮ್ಮಾನಗಳಿದ್ದರೆ, ಅದನ್ನು ನಮೂದಿಸುವಂತೆ ತಿಳಿಸಿದ್ದರು.
ಅದರ ಮುಕಾಂತರ ಏನಾದರು ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.
ಆದರೆ ಡಿಸಿಪಿ ಬಾಬಾ ರವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸ್ಕ್ಯಾನರ್ ಕೋಡ್ ಗಳನ್ನೂ ಎಲ್ಲಾ ಠಾಣೆಗಳಲ್ಲಿ ಅಳವಡಿಸುವ ಮುಕೇನ , ಹಾಗೂ ಸಾರ್ವಜನಿಕರಿಂದ ಸಂಗ್ರಹಿತವಾದ ಅಭಿಪ್ರಾಯಗಳನ್ನು ಸ್ವತಃ ಡಿಸಿಪಿ ಯವರೇ ಅವಲೋಕಿಸುತ್ತಿರುವುದರಿಂದ, ನಿರ್ಮುಕ್ತ, ನಿರ್ಭಯದ ವಾತಾವರಣ ನಿರ್ಮಾಣ ವಾಗುವುದಕ್ಕೆ ಇದು ಸಹಾಯಕವಾಗಿದೆ.
ವಿಭಿನ್ನ ಪ್ರಯತ್ನದ ಜನಸ್ನೇಹಿ ಠಾಣೆ ಹಾಗೂ ಜನಸ್ನೇಹಿ ಸಿಬ್ಬಂದಿಗಳನ್ನು ನಿರ್ಮಿಸುತ್ತಿರುವ ಡಿಸಿಪಿ ಬಾಬಾ ರವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
helpus,to help youನಮ್ಮ ನಡಿಗೆ ನಿಮ್ಮೊಂದಿಗೆ *
ಎಂಬುದು ಡಿಸಿಪಿ ಯವರ ದ್ಯೇಯ ವಾಕ್ಯವಾಗಿದೆ.
ಕ್ಯೂಆರ್ ಕೋಡ್ ಇರುವ ಠಾಣೆಗಳು
ಮಡಿವಾಳ ಉಪ ವಿಭಾಗ-
ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್,
ಮೈಕೋ ಲೇಔಟ್ ಉಪ ವಿಭಾಗ-
ತಿಲಕನಗರ, ಮೈಕೋ ಲೇಔಟ್, ಬೊಮ್ಮನಹಳ್ಳಿ, ಸದ್ದುಗುಂಟೆಪಾಳ್ಯ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗ- ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಬೇಗೂರು ಹಾಗೂ ಪರಪ್ಪನ ಅಗ್ರಹಾರ.

Latest Stories

LEAVE A REPLY

Please enter your comment!
Please enter your name here