23.8 C
Bengaluru
Thursday, February 22, 2024

ಜಯನಗರ ಪೊಲೀಸರ ಕಾರ್ಯಾಚರಣೆ

Date:


ಕೋಟ್ಯಾಂತರ ರೂಪಾಯಿ ಸಾಲ ಕೊಡುವುದಾಗಿ ನಂಬಿಸಿ ಹಣ ಪಡೆದು ನಕಲಿ ನೋಟುಗಳನ್ನು ನೀಡಿ ವಂಚನೆ ಮಾಡುತ್ತಿದ್ದ ಮೂರು ಜನ ಖತರ್ನಾಕ್ ಆರೋಪಿಗಳನ್ನು ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಒಂದು ಜಾಗ್ವಾರ್ ಕಾರ್, ಒಂದು ಮಹಿಂದ್ರಾ ಕಾಲ್ಫ್, ಒಂದು ಕೆ.ಜಿ. ಚಿನ್ನದಂತಿರುವ ನಕಲಿ ಚಿನ್ನದ ಬಿಸ್ಕೆಟ್ ಗಳು, ಖತ್ತಿ, ನಕಲಿ ಬುಲೆಟ್ – ಸುಮಾರು 11 ಕೋಟಿ ಮೌಲ್ಯದ ಖೋಟಾ ನೋಟುಗಳು, 20 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಪಾರ್ಥಸಾರಥಿ ಎನ್ ರವರು ಬಾಣಸವಾಡಿಯಲ್ಲಿರುವ ಎನ್.ಐ.ಸಿ.ಹೆಚ್.ಎಫ್.ಎಲ್ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡಿದ್ದು,ಸಾಲವನ್ನು ಮರುಪಾವತಿ ಮಾಡಲು ಹಣದ ಅವಶ್ಯಕತೆ ಇದ್ದು , ಅದನ್ನು ಕೊಡಿಸುವುದಾಗಿ ಪಿರ್ಯಾದುದಾರರಿಗೆ ಪರಿಚಯವಾದ ಕರುಣ್ ಮನ್ನಾ, ವಿಷ್ಣು, ಆಶಾಲಕಾರಾವ್‌ ಮತ್ತು ಲಕ್ಷಣರಾವ್ ಮತ್ತು ತುಷಾರ್ ಎಂಬುವವರು ಪಿರ್ಯಾದುದಾರರಿಂದ ದಾಖಲಾತಿಗಳನ್ನು, ಚಿಕ್‌ಗಳನ್ನು ಪಡೆದು ಸಾಲ ಕೊಡಿಸುವ ಭರವಸೆಯನ್ನು ನೀಡಿ ನಂತರ ತನ್ನ ಬಳಿ 1 ಕೋಟಿ ರೂ ಹಣವಿದ್ದು, ಈ ಹಣವನ್ನು ಪೂರ್ತಿಯಾಗಿ ಪಡೆದುಕೊಂಡರೆ 50 ರಷ್ಟು ರಿಯಾಯಿತಿ ನೀಡುವುದಾಗಿ ನಂಬಿಸಿ ಅದಕ್ಕೆ ಸ್ಯಾಂಪ್ ಡ್ಯೂಟಿ ಹಣವನ್ನು ಕಟ್ಟಬೇಕೆಂದು ತಿಳಿಸಿ 27 ಲಕ್ಷ ರೂ ಹಣವನ್ನು ಪಡೆದುಕೊಂಡು ಒಂದು ಕೋಟಿ ರೂ ಮೌಲ್ಯದ ಖೋಟಾ ನೋಟುಗಳನ್ನು ನೀಡಿ ನಂಬಿಸಿ ಮೋಸ ಮಾಡಿರುವ ಶರುಣ್ ಮನ್ನಾ, ವಿಷ್ಣು, ಆಶಾಲತಾರಾವ್ ಮತ್ತು ಲಕ್ಷ್ಮಣರಾವ್, ಮತ್ತು ತುಷಾರ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಮನ್ನಾ ಶರುಣ ಮತ್ತು ವಿಷ್ಣುರಾಜನ್.ಆರ್,ಎಂ ಪ್ರವೀಣ್ ಕುಮಾರ್ ಎಂಬುವರನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ತನಿಖಾ ಕಾಲದಲ್ಲಿ 11 ಮಹೇಂದ್ರ ಕಾರ್, 01 ಜಾಗ್ವಾ‌ರ್ ಕಾರ್, 10 ಕೆ.ಜಿ. ಚಿನ್ನದಂತಿರುವ ಬಿಸ್ಕಟ್‌ಗಳು, ಸುಮಾರು 01 ಕೋಟಿ ಮೌಲ್ಯದ ಖೋಟಾ ನೋಟುಗಳು, 20 ಲಕ್ಷ ನಗದು, ಬಿಕ್ಕಿ ಹಾಗೂ ನಕಲಿ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಉಳಿದ “ಆರೋಪಿಗಳಾದ ಆಶಾಲತಾರಾವ್, ಲಕ್ಷ್ಮಣರಾವ್, ಮತ್ತು ತುಷಾರ್ ರವರ ಪತ್ತೆ ಕಾರ್ಯ ಮುಂದುವರೆದಿರುತ್ತದೆ.

ಆಯುಕ್ತರಾದ ಶ್ರೀ ಕೃಷ್ಣಕಾಂತ್.ಪಿ, ಐ.ಪಿ.ಎಸ್ ರವರ ದಕ್ಷಿಣ ವಿಭಾಗದ ಮಾನ್ಯ ಉಪ-ಪೊಲೀಸ್ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಮಂಜುನಾಥ.ಯು.ಆರ್, ಶ್ರೀ ಚಂದನ ಕಾಳಿ, ಶ್ರೀ ಲಕ್ಷ ಣಾಚಾ‌.ಕೆ.ಎ, ಶ್ರೀ . ಮಂಜುನಾಥ್‌, ಸುನೀಲ್ ಕುಮಾರ್, ಶ್ರೀ ಸಿದ್ದಪ್ಪ ಕಲ್ಲೂರ್, ಪಿ.ಸಿ.,ಶ್ರೀ ಸಂಜೀವ್ ತಳವಾರ್, ಎ.ಹೆಚ್.ಸಿ, ರವರು ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರ ಉತ್ತಮ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿರುತ್ತಾರೆ .

Latest Stories

LEAVE A REPLY

Please enter your comment!
Please enter your name here