28.6 C
Bengaluru
Friday, October 4, 2024

ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್

Date:


ಎನ್ ಡಿಎ ಮಾದರಿಯಲ್ಲಿ ಮಧ್ಯಮ ಹಂತದ ಪೊಲೀಸರಿಗೆ ತರಬೇತಿ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಸಮಾರಂಭ – 2022ರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರೊಂದಿಗೆ ಪಾಲ್ಗೊಂಡು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು
ತಳ ಹಂತದ ಪೊಲೀಸರು ಹಾಗೂ ಐಪಿಎಸ್ ಗಳ ತರಬೇತಿ ಚೆನ್ನಾಗಿ ಆಗುತ್ತಿದೆ. ಆದರೆ ಮಧ್ಯಮ ಹಂತದಲ್ಲಿ ಪೊಲೀಸರ ತರಬೇತಿ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ. ಇದಕ್ಕೆ ಪ್ರತ್ಯೇಕ ತರಬೇತಿ ಸಂಸ್ಥೆ, ಪಠ್ಯ ಹಾಗೂ ವಿವಿಧ ಕೋರ್ಸುಗಳ ಮೂಲಕ ಅವರು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸಹಾಯವಾಗುತ್ತದೆ ಎಂದರು.
ಪೊಲೀಸರು ಬಳಸುವ ತಂತ್ರಜ್ಞಾನ ಬಲಪಡಿಸುವ ವಿಶೇಷ ಕಾರ್ಯಕ್ರಮ :
ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ. ತಂತ್ರಜ್ಞಾನ ದ ಮೂಲಕ ಅಪರಾಧಗಳು ಹೆಚ್ಚಾಗುತ್ತಿವೆ. ಅದೇ ತಂತ್ರಜ್ಞಾನ ದಲ್ಲಿ ಸಾಕ್ಚಿಗಳನ್ನು ಬಿಟ್ಡು ಹೋಗಿರುತ್ತಾರೆ. ಗೃಹ ಇಲಾಖೆ ಪೊಲೀಸರು ಬಳಸುವ ತಂತ್ರಜ್ಞಾನ ವನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ರಮವನ್ನು ಮಾಡಬೇಕು. ಅದಕ್ಕೆ ಬೇಕಾದ ಪರಿಣಿತರನ್ನು ಬಳಸಿಕೊಂಡು, ಬೇಕಾದ ಅನುದಾನ ಮುಂದಿನ ಬಜೆಟ್ ನಲ್ಲಿ ನೀಡಲಾಗುವುದು ಎಂದರು.
ರಾಜ್ಯದ ಪ್ರತಿ ಪ್ರದೇಶದಲ್ಲಿ ಎರಡು ಫಾರೆನ್ಸಿಕ್ ಲ್ಯಾಬ್ :
ಪೊಲೀಸ್ ವ್ಯವಸ್ಥೆಯನ್ನು ಬಹಳ ಆಧುನಿಕರಣ ಮಾಡಿದ್ಧೇವೆ. ಫಾರೆನ್ಸಿಕ್ ಲ್ಯಾಬ್ ಆಧುನಿಕರಣ ಮಾಡಲಾಗಿದೆ. ಅಪರಾಧ ಶೋಧನೆಯಲ್ಲಿ ಆಧುನಿಕ ಫಾರೆನ್ಸಿಕ್ ಲ್ಯಾಬ್ ನ ಅವಶ್ಯಕತೆಯಿದ್ದು, ಹುಬ್ಬಳ್ಳಿ ಮತ್ತು ಬಳ್ಳಾರಿ ಯಲ್ಲಿ ಈ ಪ್ರಯೋಗಾಲಯಗಳನ್ನು ಮಾಡಲಾಗಿದೆ. ರಾಜ್ಯದ ಪ್ರತಿಯೊಂದು ಪ್ರದೇಶದಲ್ಲಿ ಕನಿಷ್ಟ ಎರಡು ಫಾರೆನ್ಸಿಕ್ ಲ್ಯಾಬ್ ಸ್ಥಾಪಿಸಬೇಕು. ಶೀಘ್ರ ಅಪರಾಧ ಪತ್ತೆಗೆ ಈ ಕ್ರಮ ಆಗಲೇಬೇಕು ಎಂದರು.
ಪೊಲೀಸ್ ನೇಮಕಾತಿ ಅಪರಾಧ ತಡೆಯಲು ಕಠಿಣ ಕ್ರಮ :
ಪೊಲೀಸ್ ನೇಮಕಾತಿಯಲ್ಲಿ ಆಗುತ್ತಿರುವ ಅಪರಾಧ ತಡೆಯಲು ಇನ್ನಷ್ಟು ಕನಿಷ್ಟ ಕ್ರಮ ಕೈಗೊಳ್ಳಲೇಬೇಕು. ಪೊಲಿಸ್ ನೇಮಕಾತಿಯಲ್ಲಿಯೇ ಅಕ್ರಮ ನಡೆದರೆ ಬೇರೆ ಅಪರಾಧ ತಡೆಯುವುದು ಸಾಧ್ಯವಿದೆಯೇ?. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಗಮನಹರಿಸಬೇಕು. ಅದಕ್ಕೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್ :*
ಪೊಲೀಸ್ ಸೇವೆ ವಿಶಿಷ್ಟ ಸೇವೆಯಾಗಿದ್ದು, ಅವರು ತಮ್ಮ ಬದುಕಿನಲ್ಲಿ ಬಹಳ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹತ್ತು ಹಲವಾರು ಒತ್ತಡಗಳ ನಡುವೆ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಒತ್ತಡಗಳ ನಡುವೆ ಕರ್ನಾಟಕ ಪೊಲಿಸ್ ಉತ್ತಮ ಕೆಲಸ ಮಾಡುತ್ತಿದೆ. ದೇಶದಲ್ಲಿಯೇ ಕರ್ನಾಟಕ ಪೊಲೀಸ್ ನಂಬರ್ ಒನ್ ಆಗಿದ್ದು, ಶ್ರೇಷ್ಠ ಸೇವೆಯನ್ನು ಸಲ್ಲಿಸುತ್ತಿದೆ ಎಂಬ ಹೆಮ್ಮೆ ಇದೆ. ಪೊಲೀಸರಿಗೆ ಕಾನೂನು ತಂದೆ ಇದ್ದಂತೆ, ಕರ್ತವ್ಯ ತಾಯಿ ಇದ್ದಂತೆ. ಕರ್ನಾಟಕ ಪೊಲೀಸರು ಯಾವುದೇ ಹೊಸ ತಂತ್ರಜ್ಞಾನದಿಂದ ಹೊರಗುಳಿಯಬಾರು. ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸುದೀರ್ಘ ಸೇವೆಯಲ್ಲಿ ರಾಷ್ಟ್ರಪತಿಗಳನ್ನು ನಿಮ್ಮನ್ನು ಗುರುತಿಸುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ತಾವು ಉತ್ತಮ ಕೆಲಸ ಮಾಡಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸುತ್ತವೆ‌. ಪ್ರಶಸ್ತಿ ಪಡೆದವರೆಲ್ಲರೂ ಈ ಪದಕಗಳಿಗೆ ಅರ್ಹರಾಗಿದ್ದು, ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest Stories

LEAVE A REPLY

Please enter your comment!
Please enter your name here