ಮಾದಕ ವಸ್ತು ಪತ್ತೆ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ.ಕೃಷ್ಣಕಾಂತ್.ಪಿ., ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮಾನ್ಯ ಶ್ರೀ ಪವನ್.ಎನ್., ಕೆಎಸ್‌ಪಿಎಸ್, ಸಹಾಯಕ ಪೊಲೀಸ್ ಆಮೀಷನರ್ ಸುಬ್ರಮಣ್ಯಪುರ ಉಪವಿಭಾಗ ಬೆಂಗಳೂರು ನಗರ ರವರ ನೇತೃತ್ವದಲ್ಲಿ, ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟ ರವರಾದ ಶ್ರೀ ಶಿವಕುಮಾರ್.ಎಂ. ರವರ ಉಸ್ತುವಾರಿಯಲ್ಲಿ ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಬೆಂಗಳೂರು ನಗರ, ಕೋಣನಕುಂಟೆ ಪೊಲೀಸ್ ಠಾಣಾ ಸರಹದ್ದಿನ ಪಿಟ್ಟಿಗಾನಹಳ್ಳಿ ಡಿಪೋ, ಪಕ್ಕದಲ್ಲಿರುವ ಬಯಲು ಪ್ರದೇಶದಲ್ಲಿರುವ ಪಾಳುಬಿದ್ದ ಮನೆಯಲ್ಲಿ ಇಬ್ಬರು ಆಸಾಮಿಗಳು ತಮ್ಮ ವಶದಲ್ಲಿ ವಾಣಿಜ್ಯ ಪ್ರಮಾಣದ, ಗಾಂಜಾವಿರುವ ಮೂಟೆಗಳನ್ನು ಇಟ್ಟುಕೊಂಡು ಮಾರಾಟ ಸಾಗಾಣೆ ಮಾಡಲು ಪ್ರಯತ್ನಿಸಿರುವುದಾಗಿ ಭಾತ್ಮೀದಾರರಿಂದ ಬಂದ ಮಾಹಿತಿ ಮೇರೆಗೆ ಪಂಚರು, ಸಿಬ್ಬಂದಿಯವರ ಜೊತೆ ಸ್ಥಳಕ್ಕೆ ಹೋಗಿ ತಮ್ಮ ವಶದಲ್ಲಿ ಗಾಂಜಾ ಮೂಟೆಗಳನ್ನು ಇಟ್ಟುಕೊಂಡಿದ್ದ ಆರೋಪಿಗಳಾದ,
ಹಾಲ್ ಸೇಥಿ @ ಡಾಕಿಲ್ ಶೆಟ್ಟಿ,
ಮುರುಳಿ ಲೆಕ್ಕ @ ಮುರುಳಿ
ಎಂಬುವರನ್ನು ವಶಕ್ಕೆ ಪಡೆದು ಆರೋಪಿಗಳ ವಶದಲ್ಲಿದ್ದ 35,00,000/-5 ಬೆಲೆ ಬಾಳುವ 263) ಕೆ.ಜಿ, 200 ಗ್ರಾಂ, ತೂಕದ, ಗಾಂಜವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ತನಿಖಾ ಸಮಯದಲ್ಲಿ ಆರೋಪಿಗಳು ಗಾಂಜವನ್ನು ಒಡಿಸ್ಸಾ ಮತ್ತು ಆಂಧ್ರಪ್ರದೇಶ ರಾಜ್ಯದ ಗಡಿ ಪ್ರದೇಶದ ಕಾಡು ಜನರಿಂದ ಕಡಿಮೆ ಬೆಲೆಗೆ ಖರೀದಿಸಿ ಹೊಸ ವರ್ಷಾಚರಣೆಯಂದು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಂದಿದ್ದಾಗಿ ತಿಳಿದು ಬಂದಿರುತ್ತದೆ.
ಆರೋಪಿಗಳ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಪಿಎಸ್‌ಐ ಶ್ರೀ.ಅರುಣ್ ಕುಮಾರ್ ಎಂ., ಪಿ.ಎಸ್.ಐ. ಶ್ರೀ.ಸುಹಾಸ್ ಎನ್.ಆರ್, ಹಾಗೂ ಸಿಬ್ಬಂದಿಯವರಾದ ಶ್ರೀ ಸೈಯದ್ ಮುಸ್ತಾಫ, ಶ್ರೀ ಶಿವಸ್ವಾಮಿ, ಹೆಚ್.ಶ್ರೀ.ಇಲ್ಯಾಖಾನ್, ಶ್ರೀ ಶೈಲೇಶ್, ಶ್ರೀ.ದುಂಡಪ್ಪ ತಿಪ್ಪಾಶೆಟ್ಟಿ,
ಶ್ರೀ: ರಮೇಶ್, ಎನ್.ಆರ್. ಪಿಪಿ- ಶ್ರೀ ನರಸಿಂಹಬಾಬು, ಶ್ರೀ ಅನಿಲ್ ಕುಮಾರ್, ಶ್ರೀ.ಚೇತನ್ ಚವ್ಹಾಣ್, ಶ್ರೀ ಡಿಲ್ ಕುಮಾರ್, ಶ್ರೀ.ರಾಘವೇಂದ್ರ ಕಿಲಕ್ಕೆ ಮತ್ತು ರಮೇಶ್, ಎಂ.ಎಸ್. ರವರು ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ,
ಈ ಕಾರ್ಯಾಚಾರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಪ್ರತಾಪ್‌ರೆಡ್ಡಿ, ಐ.ಪಿ.ಎಸ್. ಮತ್ತು ಪಶ್ಚಿಮ ವಿಭಾಗ ಅವರ ಪೊಲೀಸ್ ಆಯುಕ್ತರಾದ ಶ್ರೀ ಸಂದೀಪ್ ಪಾಟೀಲ್ ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.