23 C
Bengaluru
Friday, December 13, 2024

ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ

Date:

ಕಾರುಗಳನ್ನು ಹಾಗೂ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ, ಬಂಧಿತನಿಂದ ಸುಮಾರು 5,15,000/- ರೂ ಬೆಲೆಬಾಳುವ ಮೂರು ಕಾರುಗಳುಮತ್ತು ಎರಡು ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ದೊಡ್ಡಬೆಟ್ಟಹಳ್ಳಿ ನಿವಾಸಿಯಾದ ಶ್ರೀ ಕಂಡ ರಡ್ಡಿಗಾಗಿ ಜರ್ನಾಧನ್ ಆನ್ ರಾಮಮೋಹನ ರೆಡ್ಡಿ ರವರುತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ತಮ್ಮ ಮಾರುತಿ ಸುಜುಕಿ ಕಾರ್ ರಿ.ನಂ ಕೆಎ-೦೮ ಎನ್-9475ನ್ನು ನಿಲ್ಲಸಿ ತಮ್ಮ ಸ್ವಂತ ಊರಿಗೆ ಹೋಗಿ ದಿನಾಂಕ 23.11.2022 ರಂದು ಬಂದು ನೋಡಿದಾಗ ಸದರಿಯವರು ನಿಲ್ಲಸಿದ ಕಾರನ್ನು ಯಾರೋ ಆಸಾಮಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿಯ ಪತ್ತೆ ಕಾರ್ಯವನ್ನು ಮೇಲಾಧಿಕಾರಿಗಳಾದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಅನೂಪ್ ಶೆಟ್ಟಿ ಐಪಿಎಸ್ ರವರ ಸೂಚನೆಯಂತೆ, ಮಾನ್ಯ ಶ್ರೀ ಮಂಜುನಾಥ್, ಆರ್, ಎ.ಸಿ.ಪಿ. ಯಲಹಂಕ ಉಪ-ವಿಭಾಗ ರವರ ಸಲಹೆಯಂತೆ ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸುಂದರ ರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಭು ಕೆ.ಎಲ್, ಪಿಎಸ್‌ಐ ರವರ ನೇತೃತ್ವದಲ್ಲಿ ಅಪರಾಧ ಪತ್ತೆ ವಿಭಾಗದ ಶ್ರೀ ನಂದೀಶ್ ,ಶ್ರೀ ಶಶಿಕುಮಾರ್,ಶ್ರೀ ಶಿವಪ್ರಸಾದ್ ,ಶ್ರೀಮತಿ ಸುನೀತ ಆರ್ ,ಶ್ರೀ ಪುರುಷೋತ್ತಮ ,ಶ್ರೀ ಮುದಸ್ಟರ್ ನಜರ್ ,ಶ್ರೀ ವಿ ದೇವರಾಜ ನಾಯ್ಕ, ಶ್ರೀ ಗಣವಸಿ ಖವಾಸಿ,ಶ್ರೀ ಪ್ರಸಾದ್ ,ಶ್ರೀ ಹೊನ್ನೇಶ ಆರ್.
ಶ್ರೀ ಬಾಬು ಎಎಸ್‌ಐ, ಶ್ರೀ ರವಿಚಂದ್ರನ್ ರವರುಗಳ ತಂಡವನ್ನು ರಚಿಸಿರುತ್ತದೆ ಅದರಂತೆ ಪ್ರಕರಣದ ತನಿಖೆಯನ್ನು ಕೈಗೊಂಡು ಭಾತ್ಮೀದಾರರಿಂದ ಮಾಹಿತಿಯನ್ನು ಸಂಗ್ರಹಿಸಿ ವಿದ್ಯಾರಣ್ಯ ಪುರ ,ಬಾಗಲಗುಂಟೆ, ಅನ್ನಪೂರ್ಣೇಶ್ವರಿ ನಗರ ಕಡೆಗಳಲ್ಲಿ ಕಾರುಗಳನ್ನು ಹಾಗೂ ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಮತ್ತು ಈಗಾಗಲೇ ಹೊಸದುರ್ಗ, ಹಿರಿಯೂರು, ದೊಡ್ಡಪೇಟೆ, ಚಿಕ್ಕನಾಯಕನಹಳ್ಳಿ, ತುಮಕೂರು, ಚಿಕ್ಕಮಗಳೂರು, ತರೀಕೆರೆ, ಮಾದನಾಯಕನಹಳ್ಳಿ, ವಿಶ್ವನಾಥಪುರ ಪೊಲೀಸ್ ಠಾಣಿಗಳಲ್ಲಿ ವಾಹನ ಕಳ್ಳತನದ
ಪ್ರಕರಣಗಳಲ್ಲಿ ಬಾಗಿಯಾಗಿದ್ದ ಚಿತ್ರದುರ್ಗ ಜಿಲ್ಲೆ ವಾಸಿಯಾದ ಎಂ ಸದ್ಧ ಹಸನ್ & ಬ್ರೇಜ್ 3 ಸದ್ದಾಂ ಅನ್ ಲೇಟ್ ಗೆ ಮುನ್ನಾ, 30 ವರ್ಷ, ಎಂಬ ಆರೋಪಿಯನ್ನು ದಸ್ತಗಿರಿ ಪಡಿಸಿ ಈತನಿಂದ

  1. ವಿದ್ಯಾರಣ್ಯಪುರ ಪೊಲೀಸ್ ಠಾಯ-02 ಪ್ರಕರಣಗಳು 2. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ -01 ಪ್ರಕರಣ
  2. ಬಾಗಲಗುಂಟೆ ಪೊಲೀಸ್ ಠಾಣೆಯ -01 ಪ್ರಕರಣ ಸೇರಿದಂತೆ
    ಸುಮಾರು 5.5,000/- ರೂ ಬೆಲೆ ಬಾಳುವ ಮೂರು ಕಾರುಗಳು ಮತ್ತು ಎರಡು ದ್ವಿ-ವಕ್ರ ವಾಹನಗಳನ್ನು ಆರೋಪಿಯಿಂದ ವಶಪಡಿಸಿಕೊಂಡು ತನಿಖೆ ಮುಂದುವರೆಸಿರುತ್ತದೆ. ಬಗ್ಗೆ ಮೇಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

Latest Stories

LEAVE A REPLY

Please enter your comment!
Please enter your name here