ರಾಷ್ಟ್ರೀಯ ಸುರಕ್ಷತಾ ಸಪ್ತಾಹ 2023ರ ಅಂಗವಾಗಿ ಕೆಂಗೇರಿ ಸಂಚಾರ ವಿಭಾಗದ ಇನ್ಸ್ಪೆಕ್ಟರ್ ನಾಗರಾಜ್ ರವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಕಾರ್ಯಾಗಾರವನ್ನು ಬೆಂಗಳೂರು ಸಾರಿಗೆ ಸಂಸ್ಥೆಯ ನೌಕರರಿಗಾಗಿ ಹಮ್ಮಿಕೊಳ್ಳಲಾಗಿತ್ತು.ಎಚ್ಚರಿಕೆ ಎಂಬುದು ಸುರಕ್ಷತೆ ಎಂಬ ಟ್ಯಾಗ್ ಲೈನ್ ನೊಂದಿಗೆ ಆರಂಭವಾದ ಕಾರ್ಯಾಗಾರ, ರಸ್ತೆ ಸುರಕ್ಷತೆಯ ಬಗ್ಗೆ ಹಲವು ಸುರಕ್ಷಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಇನ್ಸ್ಪೆಕ್ಟರ್ ನಾಗರಾಜ್ ರವರು ನೆರೆದಿದ್ದ ಸಾರಿಗೆ ನೌಕರರಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷಿತೆ ಎಂಬುದು ಎಚ್ಚರಿಕೆಯ ಕರೆ ಗಂಟೆ, ಅಚಾತುರ್ಯದಿಂದ, ನಡೆಯುವ ಘಟನೆಗಳಿಗೆ ಕೆಲವೊಮ್ಮೆ ಬಹು ದೊಡ್ಡ ಬೆಲೆಯನ್ನೇ ಕೆಲವೊಮ್ಮೆ ತೆರಬೇಕಾದೀತು, ತಾವು ಸಾರಿಗೆ ವಾಹನವನ್ನು ಚಲಾಯಿಸುವಾಗ ತಮ್ಮ ಪಕ್ಕದಲ್ಲಿಯೇ ಸಂಚರಿಸುವ ಸಣ್ಣ ವಾಹನಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು, ರಸ್ತೆಯಲ್ಲಿ ಸಂಚರಿಸುವಾಗ ಸಹ ಚಾಲಕರ ಅಚಾತುರ್ಯದಿಂದಾಗುವಂತ ಅನಾಹುತಗಳಿಂದಾಗುವ ಅನಾಹುತವನ್ನು ನಿಮ್ಮ ಜಾಗೃತ ವಾಹನ ಚಾಲನೆಯ ವಿಧಾನದಿಂದ ತಪ್ಪಿಸಬಹುದಾಗಿದೆ, ಒಂದು ಸಣ್ಣ ನಿರ್ಲಕ್ಷವೂ ಒಂದು ದೊಡ್ಡ ಅಚಾತುರ್ಯಕ್ಕೆ ಕಾರಣ ಒಂದು ಸಣ್ಣ ಕಿಡಿ ಮನೆಯನ್ನೇ ಹೊತ್ತಿ ಉರಿಸುವಂತೆ ಸಣ್ಣ ನಿರ್ಲಕ್ಷವೂ ಒಂದು ದೊಡ್ಡ ಪರಿಣಾಮವನ್ನು ಎದುರಿಸುವಂತೆ ಮಾಡುತ್ತದೆ ಎಂಬ ಸಂದೇಶವನ್ನು ನೀಡಿದರು.ನೀವು ಸಂಚಾರಿ ನಿಯಮ ಪಾಲನೆಯಿಂದ ಮಾತ್ರ ನಿಮ್ಮ ಮತ್ತು ನಿಮ್ಮ ಸಹ ಪ್ರಯಾಣಿಕರ ಹಾಗೂ ನಿಮಗಾಗಿ ಮನೆಯಲ್ಲಿ ನಿಮ್ಮನ್ನೇ ಅವಲಂಬಿಸಿರುವ ಜೀವಗಳ ರಕ್ಷಣೆ ಸಾಧ್ಯ ಎಂತಲೂ , ನಾವು ನಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸಲು fraction of second ಬೇಕು ಆದರೆ ಘಟನೆ ಘಟಿಸಲೂ fraction of second ಸಾಕು ಎಂಬ ಅತೀ ಮೆಚ್ಚುಗೆಯ ಮಾತನಾಡಿ ಅವರಿಗೆ ರಸ್ತೆ ಸುರಕ್ಷತೆಯ ವಾಹನ ಸವಾರರ ಸುರಕ್ಷತೆಯ ಬಗೆಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಕಾಳಜಿಯುತ ಜವಾಬ್ದಾರಿಯುತ ಮಾತುಗಳಿಂದ ನೆರೆದಿದ್ದ ಸಭಿಕರ ಮನ ಗೆದ್ದಿದ್ದಾರೆ. ಟ್ರಾಫಿಕ್ ಪೊಲೀಸರು ಇರುವುದೇ ನಮ್ಮಿಂದ ಹಣ ವಸೂಲಿಗೆ ಎಂಬ ಸಾರ್ವಜನಿಕರ ಆಪಾದನೆಗೆ ಪೂರ್ಣ ವಿರಾಮ ವಿಟ್ಟಿದ್ದಾರೆ.


