ಹೊರಗಣ್ಣಿನಿಂದ ಮಾತ್ರವಲ್ಲದೆ ಹೊರಗಣ್ಣಿನಿಂದಲೂ ಕಾರ್ಯ ಪ್ರವೃತ್ತರಾಗಿರುವ ಪೊಲೀಸರು ಸಾರ್ಥಕತೆಯ ಜ್ಯೋತಿಕಾ ವಾಗಿದ್ದಾರೆ.
ವಿಜಯವಾಡದಿಂದ ಕಾಣೆಯಾಗಿದ್ದ, ಮುಖೇಶ್ ಎಂಬಾ ಬುದ್ಧಿಮಾಂದ್ಯ ಹುಡುಗ,ಇಂದು ಬೆಂಗಳೂರು ಪುಲಿಕೇಶಿ ನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಆಂಜಿನಪ್ಪ,,(HC )ಗಂಗಾಧರ್,ಆಶೀರ್ವಾದ ಲಕ್ಷ್ಮೀನಾರಾಯಣ ಹಾಗೂ PC ಪ್ರಕಾಶ್ ಅವರುಗಳಿಗೆ ಸಿಕ್ಕಿರುತ್ತಾನೆ.
ಅವನನ್ನು ರಕ್ಷಣೆ ಮಾಡಿದ ಸಿಬ್ಬಂದಿಗಳು, ಆತನಿಗೆ ಊಟ ಕೊಡಿಸಿ, ಆತನೊಂದಿಗೆ ಸಮಾಧಾನದಿಂದ ವರ್ತಿಸಿ ಅವನ ಪೋಷಕರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಕರೆ ಮಾಡಿದಾಗ, ಆತ ಕಾಣೆಯಾಗಿರುವುದು ಬೆಳಕಿಗೆ ಬಂದಿರುತ್ತದೆ, ನಂತರ ಆತನನ್ನು ತಮ್ಮ ಬಳಿಯೇ ಇರಿಸಿಕೊಂಡು, ಬಾಲಕನನ್ನು ಪೋಷಕರ ಸಂಬಂಧಿಕರಿಗೆ ಒಪ್ಪಿಸಿದ್ದಾರೆ ಪೋಷಕರ ಮಡಿಲಿಗೆ ಬುದ್ದಿ ಮಾಂದ್ಯ ಮಗುವನ್ನು ಸೇರಿಸಿದ ಸಾರ್ಥಕತೆಯ ಬದುಕು ಈ ನಮ್ಮ ಹೆಮ್ಮೆಯ ಪೊಲೀಸರದ್ದು.ಬಾಲಕನನ್ನು ತಂದೆ ತಾಯಿಯ ಮಡಿಲಿಗೆ ಒಪ್ಪಿಸಿದಾಗ,ಆ ತಂದೆ ತಾಯಿಗಳ ಖುಷಿ ಹೇಳತೀರದು.
ಟ್ರಾಫಿಕ್ ಪೊಲೀಸರ ಸಾರ್ಥಕ ಬದುಕು
Date: