ಸುಣ್ಣ-ಬಣ್ಣ ಕಾಣ್ದೆ, ಸೌಲಭ್ಯಗಳೇ ಇಲ್ಲದ ಪೊಲೀಸ್ ಠಾಣೆಗೆ ಹೊಸ ರೂಪ ನೀಡಲಾಗಿದೆ.ರವೀಶ್ ಗೆ ಸ್ವಂತಂತ್ರವಾಗಿ ಸಿಕ್ಕ ಮೊದಲ ಪೊಲೀಸ್ ಠಾಣೆ ಇದಾಗಿದ್ದು ಮತ್ತೊಂದೆಡೆ ಎಲ್ಲಾ ಪೊಲೀಸ್ ಠಾಣೆಯಂತೆ ಇದು ಕೂಡ ಹಳೇ ಸ್ಟೇಷನ್ , ಸುಣ್ಣ ಬಣ್ಣ ಕಾಣದೆ ಅದೆಷ್ಟೋ ವರ್ಷಗಳೇ ಕಳೆದಿತ್ತು.ಆದ್ರೆ ಪಿ ಎಸ್ ಐ ಆಗಿ ಅಧಿಕಾರಿ ವಹಿಸಿಕೊಂಡ ಕೆಲವೇ ದಿನಗಳೇ ಠಾಣೆಯ ಸ್ವರೂಪವೇ ಬದಲಾವಣೆ ಆಗಿದೆ. ಬಣ್ಣ-ಬಣ್ಣದ ಚಿತ್ರ, ಗೋಡೆಬರಹಗಳಿಂದ ಜಿಗಿ-ಜಿಗಿ-ಜಗಮಗಿಸುತ್ತಾ ಯಾವ್ದೋ ಇತರೆ ಸರ್ಕಾರಿ ಕಛೇರಿ ತರ ಕಾಣ್ತಿದೆ.
ಠಾಣೆಗೆ ಹೈಟೆಕ್ ಸ್ಪರ್ಶ ನೀಡುವಲ್ಲಿ ರವೀಶ್ ರವರ ಕಾರ್ಯ ಪ್ರಮುಖವಾದದ್ದು.
ರವೀಶ್ ಇಲ್ಲಿಗೆ ಬಂದ ಮೇಲೆ ಕೆಲಸ ಮಾಡುವ ಜಾಗದ ವಾತಾವರಣ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತೆ ಎಂದು ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಯಾರ ಬಳಿಯೂ ಒಂದು ರೂಪಾಯಿ ಪಡೆದುಕೊಂಡಿಲ್ಲ. ನೀವೇ ಬಂದು ನೋಡಿ. ಕೆಲಸ ಮಾಡಿಸಿಕೊಡಿ ಎಂದು ಅವರಿಂದಲೇ ಎಲ್ಲಾ ಕೆಲಸ ಮಾಡಿಸಿದ್ದಾರೆ. ಇಂದು ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂಬ ಭಾವವೇ ಬರೋದಿಲ್ಲ ಅಷ್ಟರ ಮಟ್ಟಿಗೆ ಬದಲಿಸಿದ್ದಾರೆ. ಇವರ ಕೆಲಸಕ್ಕೆ ಸ್ಥಳಿಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.
ಗೋಡೆಬರಹದ ಮೂಲಕ ಜಾಗೃತಿ ಮೂಡಿಸುವ ಕೆಲಸ
ಇನ್ನು ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ, ಟ್ರಾಫಿಕ್ ರೂಲ್ಸ್, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನ ಕೆಲಸಕ್ಕೆ ಬಳಸುವುದು, ಬಾಲಾಪಾರಾದ ಸೇರಿದಂತೆ ಬಹುತೇಕ ಚಿತ್ರಗಳ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕಾಂಪೌಂಡ ಒಳಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹಾ ಚಿತ್ರಗಳನ್ನ ಬಿಡಿಸಿ ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ತಪ್ಪು ಮಾಡಿದವರಿಗೆ ಮನವರಿಕೆಯಾಗುವಂತೆ ಮಾಡಿದ್ದಾರೆ. ಜೊತೆಗೆ, ಠಾಣೆಯ ಆವರಣದಲ್ಲಿ ಪಾರ್ಕ್ ಕೂಡ ಮಾಡಿದ್ದಾರೆ. ಈ ಪೊಲೀಸ್ ಸ್ಟೇಷನ್ ಆವರಣದ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂದೇ ಅನ್ನಿಸದಂತೆ ಠಾಣೆ ಅಂದ್ರೆ ಇರುವ ಕಲ್ಪನೆಯನ್ನ ಸಂಪೂರ್ಣ ಬದಲಿಸಿದ್ದಾರೆ. ಪಿ.ಎಸ್.ಐ. ತಾನು ಕೆಲಸ ಮಾಡುವ ಜಾಗ ಹೇಗೆ ಇರಬೇಕೆಂದು ಅವರ ಭಾವನೆ ಇದೆಯೋ ಸ್ಥಳಿಯರು ಹಾಗೂ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಅದೇ ರೀತಿ ಬದಲಿಸಿದ್ದಾರೆ. ಇನ್ನು ಠಾಣೆಯಲ್ಲಿ ಲೈಬ್ರರಿ ಮಾಡಬೇಕೆಂದು ಇವರ ಬಯಕೆ. ಸ್ಥಳಿಯರು ಅದಕ್ಕೂ ಸಹಕಾರ ನೀಡೋದಾಗಿ ಹೇಳಿದ್ದಾರೆ. ಪಿ.ಎಸ್.ಐ. ರವೀಶ್ ಅವರ ಕೆಲಸವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಕೂಡ ಮೆಚ್ಚಿದ್ದಾರೆ. ಒಟ್ಟಾರೆ, ಸ್ಟೆಷನ್ ಏನೋ ನೋಡೋದಕ್ಕೆ ಸಖತ್ತಾಗಿದೆ. ಆದ್ರೆ, ಪೊಲೀಸ್ ಠಾಣೆಯ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳ ಮುಖ್ಯ. ಆ ಆಂತರಿಕ ಸೌಂದರ್ಯ ಸರಿ ಇಲ್ಲ ಎಂದೇ ಜನಸಮಾನ್ಯರು ಪೊಲೀಸರ ಮೇಲೆ ಕಿಡಿಕಾರುತ್ತಾರೆ. ಕಾನೂನು ಬಡವರಿಗೆ ದೂರದ ಬೆಟ್ಟ ಕಣ್ಣಿಗೆ ನುಣ್ಣು ಎಂಬಂತಾಗಿದೆ ಎಂದೇಲ್ಲಾ ಬಣ್ಣಿಸುತ್ತಾರೆ. ಆದ್ರೆ, ಈ ಠಾಣೆಯ ವಾತಾವರಣ ನೋಡಿದರೆ ಆ ರೀತಿ ಇಲ್ಲ ಎಂದು ಮೇಲ್ನೋಟಕ್ಕೆ ಕಾಣ್ಣುತ್ತಿದೆ. ಮುಂದಿನ ದಿನಗಳಲ್ಲೂ ಈ ಪೊಲೀಸ್ ಠಾಣೆ ಇನ್ನಷ್ಟು ಜನಸ್ನೇಹಿ ಬದಲಾವಣೆಯಾಗಲಿ ಎನ್ನುವುದು ನಾಗರೀಕರ ಆಶಯ.