22.3 C
Bengaluru
Thursday, June 20, 2024

ಜನಸ್ನೇಹಿ ರೈಲ್ವೆ ಪೊಲೀಸ್ ಇವರು-ಅನಾಥ ಶವಗಳ ಅಂತ್ಯ ಸಂಸ್ಕಾರ

Date:

ರೈಲ್ವೆ ಪೊಲೀಸರ ಕಾರ್ಯ ವೈಖರಿ, ಕಾರ್ಯ ವ್ಯಾಪ್ತಿ, ಕಾರ್ಯ ಕ್ಷಮತೆ ಇವುಗಳ ಮಾಹಿತಿಯ ಕೊರತೆ ಹೆಚ್ಚು ಎಂದು ಹೇಳಬಹುದು ಗೃಹ ಇಲಾಖೆಯ ಮತ್ತೊಂದು ಅಂಗವಾಗಿಯೇ ಕಾರ್ಯ ನಿರ್ವಹಿಸುತ್ತುರುವ ರೈಲ್ವೆ ಪೊಲೀಸರು ತಮ್ಮ ಕಾರ್ಯವನ್ನು ಬಹಳಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಅವರ ಬಗೆಗಿನ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಆದರೆ ದಿನಂ ಪ್ರತಿ ಸಾವಿರಾರು ಜನರ ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತವರು ಈ ನಮ್ಮ ರೈಲ್ವೆ ಪೊಲೀಸರು. ನಗರಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ಅಪರಾಧ ಪ್ರಕರಣಗಳು ರೈಲ್ವೆ ಪೊಲೀಸರಿಗೆ ಕಾಣ ಸಿಗುತ್ತವೆ, ಆದರೆ ಅಂತಹ ಪ್ರಕರಣಗಳಬಗ್ಗೆ ವಿಶೇಷ ಗಮನ ಹರಿಸಿ ಪ್ರಕರಣ ಮರುಕಳಿಸದಂತೆ ನಿಗಾ ವಹಿಸಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿ ಇಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯದಲ್ಲೂ ತಾವೇ ಮುಂದು ಎಂಬುದನ್ನು ರೈಲ್ವೆ ಪೊಲೀಸರು ಈಗಾಗಲೇ ಸಾಬೀತು ಪಡಿಸಿದ್ದಾರೆ.
ರೈಲಿನಲ್ಲಿ ಸಂಚರಿಸುವ ಜನರ ಮಾನ ಪ್ರಾಣ ಆಸ್ತಿಯ ರಕ್ಷಣೆಯ ಹೊಣೆಗಾರಿಕೆ ಇವರದ್ದು. ಸದ್ದು ಗದ್ದಲವಿಲ್ಲದೆ ತಮ್ಮ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡುತ್ತಿರುವ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗ ರೈಲ್ವೆ ಪೊಲೀಸ್.
ಆದರೆ ಈ ರೈಲ್ವೆ ಪೊಲೀಸರ ದಿನ ನಿತ್ಯದ ಕೆಲಸದ ಬಗ್ಗೆ ಆಳವಾಗಿ ತಿಳಿದು ಕೊಳ್ಳಲು ಹೊರಟರೆ, ಇವರ ಕಾರ್ಯ ವೈಖರಿಯಾ ಬಗ್ಗೆ ಹೆಮ್ಮೆ ಎನಿಸುತ್ತದೆ ಹಾಗೆಯೆ ಈ ಪೊಲೀಸರ ಬಗ್ಗೆ ಅದೇಕೋ ಒಂದು ರೀತಿಯ ಅನುಕಂಪವೂ ಉಂಟಾಗುತ್ತದೆ. ಅರೇ ! ಇದೇನು ಪೊಲೀಸರಿಗೆ ಅನುಕಂಪವೇ?
ಹೌದು ಇದೆ ರೈಲ್ವೆ ಪೊಲೀಸ್
ಹೌದು ಪ್ರತಿನಿತ್ಯ ಒಂದಿಲ್ಲೊಂದು ಕಾರಣಗಳಿಂದ ಸಾವಿಗೀಡಾದ ಛಿದ್ರ ಛಿದ್ರ ಗೊಂಡ ದೇಹಗಳನ್ನು ಆಯ್ದು, ಒಟ್ಟುಗೂಡಿಸಿ, ಬಾಡಿ ಬ್ಯಾಗ್ ಗೆ ಸೇರಿಸುವ ಕಾರ್ಯ ಇವರದು. ನಾವು ಯಾವತ್ತೋ ಒಂದು ದಿನ ಪರಿಚಿತರಅಥವಾ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದರೆ ಮೈಲಿಗೆ ಎಂದು ಸ್ನಾನ ಮಾಡುವ, ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದು ದೇಹ ನೋಡಿದ್ದರಿಂದ ಇಂದು ಮನಸ್ಸೇ ವಿಚಲಿತವಾಗಿದೆ ಯಾವ ಕೆಲಸ ಮಾಡಲೂ ಮನಸ್ಸೇ ಇಲ್ಲ ಎಂದು ಹೇಳುವ ಮಾತು ಸರ್ವೇ ಸಾಮಾನ್ಯ.
ಆದರೆ ಪ್ರತಿನಿತ್ಯ ಕನಿಷ್ಟ ಛಿದ್ರ ವಿಚಿದ್ರ ಗೊಂಡ ಒಂದು ದೇಹವನ್ನಾದರೂ ಆಯ್ದು ಬಾಡಿಬ್ಯಾಗ್‌ಗೆ ತುಂಬಿಸುವ ಕೆಲಸ ಮಾಡುತ್ತಿರುವ ಈ ನಮ್ಮ ರೈಲ್ವೆ ಪೊಲೀಸರ ಮನಃ ಸ್ಥಿತಿಯನ್ನು ಒಮ್ಮೆಯಾದರೂ ಆಲೋಚಿಸಲು ಸಾಧ್ಯವೇ.
ಇವರ ಇರುವಿಕೆಯನ್ನೇ ಗಮನಿಸದೆ ನಮ್ಮ ಪಾಡಿಗೆ ನಮ್ಮ ಗುರಿ ತಲುಪುವ,ಊರು ಸೇರುವ ತವಕ ಸಾರ್ವಜನಿಕರದ್ದು,ವೃತ್ತಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಇಂತಹ ಪೊಲೀಸ್ ಸಹೋದರ ಸಹೋದರಿಯರ ಕಾರ್ಯ ವೈಖರಿಗೆ ನಮ್ಮದೊಂದು ಸಲಾಂ.

ಆದರೆ ಇಂದು ನಾನು ನಿಮಗೆ ಪರಿಚಯಿಸುತ್ತಿರುವ
ಜನಸ್ನೇಹಿ ಪೊಲೀಸ್ : ಪ್ರಸುತ್ತ ಎಎಸ್ಐ ಆಗಿ ರೈಲ್ವೆ ಪೊಲೀಸ್ ನಲ್ಲಿ ಕೆಲಸ ಮಾಡುತ್ತಿರುವ ರವಿಯವರು ರವರು ಇಂದಿನ ಸಂಚಿಕೆಯ ಜನಸ್ನೇಹಿ ಪೊಲೀಸ್.
ಕನಕಪುರ ತಾಲ್ಲೂಕಿನ ಕುರುಪೇಟೆಯ ಗೂಳಪ್ಪ ಮತ್ತು ಸಿದ್ದಮ್ಮ ದಂಪತಿಗಳ ನಾಲ್ಕು ಜನ ಮಕ್ಕಳ ಪೈಕಿ ಏಕೈಕ ಗಂಡು ಮಗುವಾಗಿ ಜನಿಸಿದ ರವಿಯವರು ಬಡತನದ ನಡುವೆ ಬೆಳೆದು ಬಿ ಎಸ್ಸಿ , ಎಂ ಎಸ್ಸಿ ,ಬಿ ಎಡ್ ಡಬಲ್ ಗ್ರ್ಯಾಜುಯೆಟ್ ಆಗಿದ್ದರೂ ಸಹ 2001ರಲ್ಲಿ ರೈಲ್ವೆ ಕಾನ್ಸ್ಟೇಬಲ್ ಆಗಿ ಕೆಲಸಕ್ಕೆ ಸೇರ್ಪಡೆಯಾಗಿ, ಇಲಾಖೆಗೆ ಸೇರ್ಪಡೆಯಾದಾಗಿನಿಂದಲೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಎಷ್ಟೋ ಭಾರಿ ಅಪಘಾತದಿಂದಲೋ, ಆತ್ಮಹತ್ಯೆ ಯಿಂದಲೋ, ಕೊಲೆಯಾಗಿಯೋ ,
ರೈಲ್ವೆ ಟ್ರ್ಯಾಕ್ ಮೇಲೆ ಪೀಸ್ ಪೀಸ್ ಆಗಿ ಬಿದ್ದಂತಹ ದೇಹದ ಭಾಗಗಳನ್ನು ಆರಿಸಿ ಆಯ್ದು ಬಾಡಿ ಬ್ಯಾಗ್ಗೆ ತುಂಬಿಸಿ ಪ್ರಕರಣ ಭೇದಿಸುವ ಕಾರ್ಯ ಮಾಡಿರುವ ಹಿರಿಮೆ ಈ ನಮ್ಮ ಜನಸ್ನೇಹಿ ಪೊಲೀಸರದ್ದು,ನಾನು ಪೊಲೀಸ್ ಈ ಕಾರ್ಯ ನನ್ನದಲ್ಲ ಎಂದು ಯಾವತ್ತೂ ಕೈಕಟ್ಟಿ ಕೂರದೆ ಆಂಬುಲೆನ್ಸ್ ಬರಲು ಸ್ಥಳಾವಕಾಶ ವಿಲ್ಲದ ಕಡೆಗಳಲ್ಲಿ ರೈಲ್ವೆ ಹಳಿಗಳ ಮೇಲೆ ಬಿದ್ದ ಶವಗಳನ್ನು ಅಪಘಾತಕ್ಕೀಡಾದವರನ್ನು ರಕ್ಷಿಸಿ ಆಂಬುಲೆನ್ಸ್ ಗೆ ತಲುಪಿಸುವ ಕಾರ್ಯವನ್ನು ರವಿಯವರು ಯಾವುದೇ ಮುಜುಗರ ವಿಲ್ಲದೆ ಮಾಡಿದ್ದಾರೆ.
ಎಷ್ಟೋ ಭಾರಿ ಅಪರಿಚಿತ ಶವಗಳ ಸಂಸ್ಕಾರವೂ ಕೂಡ ನನ್ನದೇ ಜವಾಬ್ದಾರಿ ಎಂಬಂತೆ ಮಾಡಿದ್ದಾರೆ.
ರೈಲ್ವೆ ಪೊಲೀಸ್ ಇಲಾಖೆಯಲ್ಲಿ ಇಪ್ಪತ್ತೊಂದು ವರ್ಷ ಸೇವೆ ಸಲ್ಲಿಸಿರುವ ಕಾನ್ಸ್ಟೇಬಲ್ , ಹೆಡ್ ಕಾನ್ಸ್ಟೇಬಲ್, ಎಎಸ್ಐ, ತನಿಖಾ ಬರಹಗಾರರಾಗಿ ಹಲವು ಪ್ರಕರಣಗಳ ತನಿಖೆಗೆ ಪೂರಕ ಪ್ರೇರಕ ಶಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಮ್ಮದ್ದಲ್ಲದ ಕಾರ್ಯ, ಅತಿಯಾದ ಹೊಣೆ ಹೊರುವುದೇಕೆ ಎಂದು ಭಾವಿಸದೆ ಸದಾ ಸಾರ್ವಜನಿಕರ ಸುರಕ್ಷತೆ ಹಾಗೂ ರಕ್ಷಣೆಯ ಗುರಿ ಹೊತ್ತಿರುವ ರೈಲ್ವೆ ಪೊಲೀಸರಿಗೆ ನಮ್ಮದೊಂದು ಸಲಾಂ.

Latest Stories

LEAVE A REPLY

Please enter your comment!
Please enter your name here