ಅಶೋಕ್ ನಗರ ಸಂಚಾರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾವ್ ಗಣೇಶ ಜನಾರ್ಧನ ರವರ ಹುಟ್ಟು ಹಬ್ಬದ ಪ್ರಯುಕ್ತ ಠಾಣೆಯಲ್ಲಿ “ಲಯನ್ಸ್ ರಕ್ತದಾನ ಸಂಸ್ಥೆ” ರವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಅಶೋಕ ನಗರ ಸಂಚಾರ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದರು ,ಇದರಲ್ಲಿ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕಾನೂನು ಸುವ್ಯವಸ್ಥೆಯ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಬಂದು ರಕ್ತ ದಾನಮಾಡಿದರು.ಈ ರಕ್ತವು “ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆ”ಗಾಗಿ ನೀಡಲಾಗಿದೆ.
ಸಾಮಾಜಿಕ ಕಳಕಳಿಯ ಹುಟ್ಟುಹಬ್ಬದ ಆಚರಣೆ
ಭೂಮಿಯ ಮೇಲಿರುವ ಪ್ರತಿಯೊಂದು ಜೀವವು ಅತ್ಯಮೂಲ್ಯವಾಗಿದ್ದು ಅವುಗಳ ಜೀವ ಉಳಿಸುವ ಸಲುವಾಗಿ ರಕ್ತ ದಾನ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ವಾಗಿದ್ದು ಇಂತಹ ಹೆಮ್ಮೆಯ ವಿನೂತನ ಕಾರ್ಯಕ್ಕೆ ಸಾಕ್ಷಿಯಾಗಿದ್ದು ಅಶೋಕ ನಗರ ಸಂಚಾರ ಪೊಲೀಸ್ ಸಿಬ್ಬಂದಿಗಳು. ಹುಟ್ಟು ಹಬ್ಬದ ಆಚರಣೆಗೆ ಯಾವುದೇ ಸಂಭ್ರಮ ಸಡಗರ ದುಂದುವೆಚ್ಚ ಮಾಡದೇ ಕುದ್ದು ಹುಟ್ಟು ಹಬದಂದು ರಕ್ತ ದಾನ ಮಾಡುವ ಮುಕಾಂತರ ಸಾಮಾಜಿಕ ಕಳಕಳಿಯ ಹುಟ್ಟು ಹಬ್ಬ ಆಚರಿಸಿಕೊಂಡು ಮಾದರಿ ಇನ್ಸ್ಪೆಕ್ಟರ್ ಎನಿಸಿಕೊಂಡವರು ಶ್ರೀ ರಾವ್ ಗಣೇಶ್ ಜನಾರ್ಧನ ರವರು.ಈ ವಿನೂತನ ರೀತಿಯ ಹುಟ್ಟು ಹಬ್ಬ ಆಚರಣೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕ ವಲಯದಿಂದ ಶ್ಲಾಘನೆ ಹಾಗೂ ಪ್ರಶಂಸೆ ವ್ಯಕ್ತವಾಗಿರುತ್ತದೆ.
ರಕ್ತ ದಾನ:ಮಹಾದಾನ -ಹುಟ್ಟಿದ ಹಬ್ಬವನ್ನು ರಕ್ತದಾನ ಮಾಡುವ ಮೂಲಕ ಆಚರಿಸಿಕೊಂಡ ಇನ್ಸ್ ಪೆಕ್ಟರ್
Date: