ನಾವು ನಮ್ಮ ಬಿಡುವಿರದ ದಿನನಿತ್ಯದ ಕೆಲಸ ಕಾರ್ಯಗಳ ನಡುವೆ ಮಾನವೀಯ ಮೌಲ್ಯಗಳನ್ನೇ ಮರೆತು ಜೀವಿಸಲಾರಂಭಿಸಿದ್ದೇವೆ. ಸಮಯದ ಓಟದ ಒತ್ತಡದ ಜೀವನ ಪ್ರತಿಯೊಬ್ಬರನ್ನು ಅದರ ಸಮನಾಗಿ ಓಡುವಂತೆ ಮಾಡಿದೆ. ರಸ್ತೆ ಅಪಘಾತಕ್ಕೆ ಒಳಗಾದವರನ್ನು ರಕ್ಷಿಸಿ, ಅವರಿಗೆ ಸಹಾಯ ಮಾಡಿದರೆ ಯಾವುದೇ ಕಾನೂನು ಹೋರಾಟ ಎದುರಿಸುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದು ಅದೆಷ್ಟೇ ಹೇಳಿದರು ಸಾರ್ವಜನಿಕರು ಮುನ್ನಡಿ ಇಡಲು ಯೋಚಿಸುತ್ತಿದ್ದಾರೆ.
ಸನ್ಮಾನ್ಯ ಗೃಹ ಮಂತ್ರಿಗಳಾದ ಆರಗ ಜ್ಞಾನೇಂದ್ರ ರವರು ಕೆಲಸದ ನಿಮಿತ್ತ ರಸ್ತೆ ಪ್ರಯಾಣ ಮಾಡುತ್ತಿದ್ದಾಗ, ಅಕಸ್ಮಾತಾಗಿ ರಸ್ತೆ ಅಪಘಾತಕೊಳಗಾಗಿದ್ದ ವ್ಯಕ್ತಿಯನ್ನು ಕಂಡು ಕೂಡಲೇ ತಮ್ಮ ವಾಹನ ನಿಲ್ಲಿಸಿ ವ್ಯಕ್ತಿಯ ರಕ್ಷಣೆಗೆ ಮುಂದಾಗಿದ್ದಾರೆ. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಲು ಪ್ರಥಮ ಹೆಜ್ಜೆ ಇಟ್ಟಿದ್ದಾರೆ. ಸ್ವತಃ ತಮ್ಮ ಕೈಗಳಿಂದಲೇ ರಕ್ತದ ಮಾಡುವಿನಲ್ಲಿದ್ದ ವ್ಯಕ್ತಿಯ ರಕ್ತವನ್ನು ಒರೆಸಿ ರಕ್ಷಿಸಿ ತಾವೊಬ್ಬ ಗೃಹ ಮಂತ್ರಿ ಎಂಬುದಕ್ಕೂ ಹೆಚ್ಚಾಗಿ ಮಾನವೀಯ ಮೌಲ್ಯಗಳುಳ್ಳ ಮನುಷ್ಯ ನೆಂಬುದನ್ನು ಸಾಬೀತು ಪಡಿಸಿದ್ದಾರೆ.
ರಸ್ತೆ ಅಪಘಾತ ಕೊಳ್ಳಗಾದವರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ, ಒಂದು ಜೀವ ಉಳಿಸಲು ನಮಗೆ ಆ ಭಗವಂತ ನೀಡಿದ ಒಂದು ಸದಾವಕಾಶ ಎಂಬುದನ್ನು ಸಾರಿದ್ದಾರೆ.
ಜಾಲತಾಣದಲ್ಲಿ ಗೃಹ ಸಚಿವರ ಈ ಮಾನವೀಯ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

