ಆಸಿಡ್ ಅಟ್ಯಾಕ್* ಅಬ್ಭಾ ಈ ಶಬ್ದವೇ ಎದೆ ನಡುಗಿಸುತ್ತದೆ. ಮನುಷ್ಯ ಇಂತಹ ಕ್ರೌರ್ಯಕ್ಕೆ ಮುಂದಾಗಲು ಕಾರಣವೇನು? ಆತನಲ್ಲಿ ಇರುವ ಮೃಗೀಯ ಗುಣ ಆತ ಮನುಷ್ಯ ಎಂಬುದನ್ನೇ ಮರೆಸಿಬಿಡುತ್ತದೆಯೇ ? ಎಂಬೆಲ್ಲ ಅನೇಕ ಪ್ರಶ್ನೆಗಳು ನಮ್ಮನ್ನು ಕಾಡಲಾರಂಭಿಸುತ್ತದೆ.
ಎದುರಿಗೆ ನಿಂತು ಹೋರಾಡಲು ಅಸಮರ್ತನಾದವ ಅಸಹಾಯಕ ಹೆಣ್ಣು ಮಗಳ ಮೇಲೆ ಹೊಂಚು ಹಾಕಿ ಆಸಿಡ್ ದಾಳಿ ನಡೆಸುತ್ತಾನೆ ಎಂದರೆ ಅದು ಆತನ ಕ್ರೌರ್ಯ ಹಾಗೂ ಹೇಡಿತನವನ್ನು ತೋರಿಸುತ್ತದೆ.
ಇಂತಹ ಮನುಷ್ಯ ರೂಪದ ರಾಕ್ಷಸನ ಕ್ರೌರ್ಯಕ್ಕೆ ಬಲಿಯಾದ ಹೆಣ್ಣು ಮಗಳೇ ಶೃಂಗೇರಿಯ ಸಹನಾ (ಹೆಸರು ಬದಲಿಸಲಾಗಿದೆ).
ಹೆಣ್ಣಿಗೆ ಆಕೆಯ ಸೌಂದರ್ಯವೇ ಶತ್ರು ಎಂಬ ಚಾಣಕ್ಯನ ಮಾತಿನಂತೆ, ಅತೀ ರೂಪವತಿಯಾಗಿದ್ದ ಸಹನಾಳ ಹಿಂದೆ ಮದುವೆಯಾಗುವಂತೆ ಪೀಡಿಸತೊಡಗಿ, ಆಕೆ ಅದಕ್ಕೆ ಒಪ್ಪದಿದ್ದಾಗ ತನ್ನ ಸಹಚರರೊಂದಿಗೆ ಸೇರಿ ಆಸಿಡ್ ದಾಳಿ ನಡೆಸಿದ ಕ್ರೂರಿ ಗಳೇ
….
2015ರಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ್ದ ಆರೋಪಿಗಳನ್ನು ಪತ್ತೆ ಹಚ್ಚುವ ಜವಾಬ್ದಾರಿ ಹೊತ್ತವರು ಅಂದಿನ ಶೃಂಗೇರಿಯ ಇನ್ಸ್ಪೆಕ್ಟರ್ ಆಗಿದ್ದಂತಹ ನಿಷ್ಠಾವಂತ ಜವಾಬ್ದಾರಿಯುತ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆ. ಶೃಂಗೇರಿ ಬಳಿಯ ಚಿಕ್ಕ ಗ್ರಾಮದಲ್ಲಿ ಏಕಾಏಕಿ ಮಹಿಳೆ ಮೇಲಿನ ಆಸಿಡ್ ದಾಳಿ ಒಂದು ಕ್ಷಣ ಪೊಲೀಸರ ಕಾರ್ಯ ವೈಕರಿಯನ್ನೇ ಪ್ರಶ್ನಿಸುವಂತಾಗಿತ್ತು.
ಆದರೆ ದಾಳಿಗಾಗಿ ಬಳಸಿದ್ದ ಅತ್ಯಂತ ಪರಿಣಾಮಕಾರಿಯಾದ ಆಸಿಡ್ ಬಳಕೆ ಪೊಲೀಸ್ ಇನ್ಸ್ಪೆಕ್ಟರ್ ರ ನಿದ್ದೆಗೆಡಿಸಿತ್ತು.
ಇಂತಹ ಹಳ್ಳಿಗಾಡಿನಲ್ಲಿ ಅಂತಹ ಪರಿಣಾಮಕಾರಿ ಆಸಿಡ್ ದೊರೆತ್ತದಾದರೂ ಎಲ್ಲಿ? ದಾಳಿ ಮಾಡಿದವರಾರು? ಇಂತೆಲ್ಲ ಆಲೋಚನೆಗೆ ಸುಳಿವು ನೀಡಿತ್ತು ಸಂತ್ರಸ್ತೆ ಹೇಳಿದ್ದ ಆ ಒಂದು ಹೆಸರು, ಸುಳಿವಿನ ಜಾಡು ಹಿಡಿದು ಹೊರಟ ಸುಧೀರ್ ಹೆಗ್ಡೆಯವರು ಕೇವಲ ಆರು ಗಂಟೆಗಳಲ್ಲಿ ಆರೋಪಿಗಳಾದ ಕಬೀರ್ ,ಮಜೀದ್, ವಿನೋದ್ ಹೆಡೆಮುರಿ ಕಟ್ಟಿದ್ದರು.
ಆರೋಪಿಗಳ ಹೆಡೆಮುರಿ ಕಟ್ಟಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು.
ಅಲ್ಲಿಗೆ ಪೊಲೀಸರ ಕಾರ್ಯ ಅಂತ್ಯವಾಯಿತು.ಇನ್ನುಳಿದದ್ದು ನ್ಯಾಯಾಲಯದ ಕಾರ್ಯವ್ಯಾಪ್ತಿಗೆ ಒಳಪಟ್ಟಿದ್ದು, ಅದರಂತೆ ಪ್ರಕರಣದ ಚಾರ್ಜ್ ಶೀಟ್ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರು.
ಆದರೆ ಅದೊಂದು ದಿನ ಸುಧೀರ್ ಹೆಗ್ಡೆ ಯವರಿಗೆ ಕರೆ ಮಾಡಿದ ಸಂತ್ರಸ್ತೆ “ನಂಗೆ ಬದುಕಲು ಇಷ್ಟವಿಲ್ಲ ಸರ್,ನ್ಯಾಯಕ್ಕಾಗಿ ಇಷ್ಟೆಲ್ಲಾ ನೋವು ಅವಮಾನಗಳನ್ನು ಸಹಿಸಿಕೊಂಡೆ ಆದರೆ ನಿಮ್ಮಿಂದ ನನಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ,ಎಲ್ಲರೂ ಹೇಳಿದ್ದರು ಪೊಲೀಸರಿಂದ ನ್ಯಾಯದ ನಿರೀಕ್ಷೆ ಸುಳ್ಳು ಎಂದು ಹಾಗೆ ಆಯಿತು,ನಾನಿನ್ನು ಬದುಕುವುದಿಲ್ಲ.” ಸಂತ್ರಸ್ತೆಯ ಈ ಮಾತುಗಳು ಒಂದು ಕ್ಷಣ ನಿಷ್ಠಾವಂತ ಅಧಿಕಾರಿ ಸುಧೀರ್ ಹೆಗ್ಡೆಯವರನ್ನು ವಿಚಲಿತ ಗೊಳಿಸಿತಾದರೂ, ವಿಚಲಿತರಾಗದೆ, ಸಂತ್ರಸ್ತೆಗೆ ಧೈರ್ಯ ತುಂಬಿದರು, ಬದುಕಿನ ಬಗ್ಗೆ ನಿರಾಸಕ್ತಿ ಹೊಂದದಂತೆ, ತಮ್ಮ ಸಹೋದರಿಯಂತೆ ಸಂತೈಸಿದರು, ಆರೋಪಿಗಳಿಗೆ ಜಾಮೀನು ದೊರೆತ ಮಾತ್ರಕ್ಕೆ ನಿರಾಶಾವಾದಿಯಾಗಬೇಡ ಎದೆ ಗುಂದಬೇಡ ಎಂದು ಹುರಿದುಂಬಿಸಿದರು. ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಧೈರ್ಯ ತುಂಬಿದರು.
ಸಂತ್ರಸ್ತೆಯ ಹೇಳಿಕೆ : ಪ್ರಹರಿ ಸಂತ್ರಸ್ತೆಯನ್ನು ಪ್ರಕರಣದ ಕುರಿತು ಕೇಳಿದಾಗ ಸಂತ್ರಸ್ತೆಯ ಮನದಾಳದ ಮಾತುಗಳನ್ನು ಕೇಳಿದಾಗ ಒಂದು ಕ್ಷಣ ಕ್ರೌರ್ಯಕ್ಕೆ ಒಳಗಾದ ಹೆಣ್ಣಿನ ಮನಸ್ಸು ಎಷ್ಟು ನೊಂದಿತ್ತು ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ಸಂತ್ರಸ್ತೆಯ ಅಂದವೇ ಆಕೆಯ ಬಾಳಿಗೆ ಮುಳುವಾಗಿತ್ತು ಅಂದರೆ ತಪ್ಪಾಗಲಾರದು, 7ವರ್ಷದ ಮಗನನ್ನು ಹೊಂದಿದ್ದ ಸಂತ್ರಸ್ತೆಗೆ ಗಂಡನಿಂದ ವಿಚ್ಚೇದನ ಕೊಡಿಸುವಲ್ಲಿಯೂ ಕೂಡ ಆರೋಪಿ ಗಣೇಶ ಯಶಸ್ವಿಯಾಗಿದ್ದ. ಇಲ್ಲಸಲ್ಲದ ಆರೋಪಗಳನ್ನು ಸಂತ್ರಸ್ತೆಯ ಮೇಲೆ ಹೊರಿಸಿ ಆಕೆಯ ಗಂಡನ ಮನಸ್ಸನ್ನು ಕೆಡಿಸಿ ಸಂತ್ರಸ್ತೆಯನ್ನು ಗಂಡನಿಂದ ಬೇರ್ಪಡಿಸಿದ್ದ. ಈ ರೀತಿಯಲ್ಲಾದರೂ ಸಂತ್ರಸ್ತೆಯನ್ನು ಪಡೆದುಕೊಳ್ಳುತ್ತೇನೆಂಬ ಹೆಬ್ಬಯಕೆ ಅವನದಾಗಿತ್ತು. ಅವನ ಈ ದುರಾಲೋಚನೆ ಕೈಗೂಡದೆ ಸಂತ್ರಸ್ತೆ ಅವನಿಗೆ ದೊರೆಯುವುದಿಲ್ಲ ಎಂದು ಅರಿತಾಗ ಆಕೆಯ ಮೇಲೆ ದೌರ್ಜನ್ಯವೆಸಗಿ ಆಕೆಯ ಬಾಳಿಗೆ ಮುಳುವಾದ. ಆಸಿಡ್ ದಾಳಿಯಿಂದ ಆಕೆಯ ಸೌಂದರ್ಯವನ್ನು ಕಸಿದು ಕೊಂಡಿದ್ದ ಆದರೆ ಆಕೆಯ ನೈತಿಕತೆಯನ್ನಾಗಲಿ, ದೈರ್ಯವನ್ನಾಗಲಿ , ಸ್ವಾಭಿಮಾನವನ್ನಾಗಲಿ, ದಿಟ್ಟತೆಯನ್ನಾಗಲಿ ಆತನಿಂದ ಕಸಿದುಕೊಳ್ಳಲಾಗಲಿಲ್ಲ. ಆರೋಪಿಗಳಿಗೆ ಜಾಮೀನು ದೊರೆತಾಗ ಬದುಕಲೇ ಬಾರದೆಂಬ ನಿರ್ಧಾರಕ್ಕೆ ಬಂದಿದ್ದ ಸಂತ್ರಸ್ತೆ, ಪೊಲೀಸರೆಂದರೆ, ಮೋಸ ಆರೋಪಿಗಳಿಂದ ಹಣ ಪಡೆದು, ಅವರುಗಳಿಗೆ ಜಾಮೀನು ದೊರಕುವಂತೆ ಮಾಡಿದ್ದಾರೆ ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದಳಂತೆ ಆದರೆ ಸುಧೀರ್ ಹೆಗ್ಡೆಯವರ ಸಾಂತ್ವನದ ಮಾತುಗಳು,ಆಕೆಯಲ್ಲಿನ ನಂಬಿಕೆ ಹಾಗೂ ನ್ಯಾಯದ ನಿರೀಕ್ಷೆಯನ್ನು ಹೆಚ್ಚು ಮಾಡಿತ್ತು.
ಸಂತ್ರಸ್ತೆ ಇಂದು ಒಬ್ಬ ಪೊಲೀಸ್ ಅಧಿಕಾರಿಯನ್ನು ಗುರು, ದೈವ, ಗೈಡ್ , ಸಹೋದರ, ಎಲ್ಲಕಿಂತ ಹೆಚ್ಚಾಗಿ ನನ್ನ ಪಾಲಿನ ಬಾಹುಬಲಿ ಎಂದಿದ್ದಾರೆ.
ಸಂತ್ರಸ್ತೆ ತಮ್ಮ ಮನೆಯಲ್ಲಿ ದೇವರ ಫೋಟೋ ಜೊತೆಗೆ ಪೊಲೀಸ್ ಅಧಿಕಾರಿ ಸುಧೀರ್ ಹೆಗ್ಡೆ ಯವರ ಫೋಟೋ ಇಟ್ಟು ಪೂಜಿಸುತ್ತೇನೆ ಎಂದರೆ ಇದಲ್ಲವೇ ಪ್ರಾಮಾಣಿಕತೆಗೆ ಸಂದ ಗೌರವ.
ಖಾಕಿಯೊಳಗಿನ ಮಾನವೀಯ ಮನಸ್ಸುಗಳು ಈಕೆಗೆ ಸ್ಪಂದಿಸಿದ ರೀತಿಯೇ ಪೊಲೀಸರಲ್ಲೂ ಮಾನವೀಯ ಮೂರ್ತಿಗಳಿದ್ದಾರೆ ಎಂಬುದ್ದನ್ನು ಸಾರಿದಂತಿದೆ.
ಆಸಿಡ್ ದಾಳಿಯಾದಾಗ ಆಕೆಯ ಮಗುವಿನ ವಿದ್ಯಾಭ್ಯಾಸದ ಖರ್ಚನ್ನು ಅಂದಿನ ಚಿಕ್ಕಮಗಳೂರು ಎಸ್ಪಿ ಶ್ರುತಿ ಯವರು ಭರಿಸಿದ್ದಾರೆ.
ನಂತರದ ಎಸ್ಪಿಯಾಗಿ ಬಂದಂತಹ ಸಂಜೀವ್ ಪಾಟೀಲ್ರವರು ಆಕೆಯನ್ನು ಬಾಂಬೆಗೆ ಕಳುಹಿಸಿ ಆಕೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸುವಲ್ಲಿ ನೆರವಾಗಿದ್ದಾರೆ , ಇಲಾಖೆಯ ಅನೇಕ ಕಾಣದ ಕೈಗಳು ಸಂತ್ರಸ್ತೆಯ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ.
ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಮತಾ ಅವರ ಕಾರ್ಯ ಅವಿಸ್ಮರಣೀಯ.
ಆದರೆ ಬಾಹುಬಲಿ ಅಂದ್ರೆ ಯಾರು ಎಂಬ ಪ್ರಶ್ನೆಗೆ ಉತ್ತರ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಸುಧೀರ್ ಹೆಗ್ಡೆ.
ಸಂತ್ರಸ್ತೆಗೆ ನ್ಯಾಯ ಮಾತ್ರವಲ್ಲ ಆಕೆಯ ಸಹೋದರ,ತಂದೆ, ದೇವರು, ಗೈಡ್ ವೆಲ್ವಿಷರ್, ಆಗಿ ಆಕೆಗೆ ಮರುಜನ್ಮವೇ ನೀಡಿರುವ ಸುಧೀರ್ ಹೆಗ್ಡೆಯವರು. ಸಹನಾ ಹೇಳುವಂತೆ ನಾನಿನ್ನು ಜೀವಂತವಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಸುಧೀರ್ ಹೆಗ್ಡೆಯವರು. ಅಂದು ನಾನು ಪೊಲೀಸರ ಬಗ್ಗೆ ಭರವಸೆಯನ್ನೇ ಸಂಪೂರ್ಣವಾಗಿ ಬಿಟ್ಟು ಬಿಟ್ಟಿದ್ದೆ, ಪೊಲೀಸರಲ್ಲೂ ಇಂತಹ ಮಾನವೀಯ ಗುಣಗಳಿರುತ್ತವೆ ಎಂಬುದರ ಅರಿವಾಗಿದ್ದೆ ಹೆಗ್ಡೆ ಸಾಹೇಬರನ್ನು ಭೇಟಿಯಾಗಿ ಅವರು ನನ್ನನ್ನು ನಡೆಸಿಕೊಂಡ ರೀತಿಯಿಂದ, ನಾನು ದೇವಸ್ಥಾನಕ್ಕೆ ಹೋದಾಗ ಕೇಳಿಕೊಳ್ಳುವುದು ಸುಧೀರ್ ಹೆಗ್ಡೆ ಸಾಹೇಬರಿಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡು ಭಗವಂತ ಎಂದು.ನನ್ನ ಜೀವನದ ಅತೀ ದೊಡ್ಡ ಕನಸೆಂದರೆ ಹೆಗ್ಡೆ ಯವರಿಗೆ ಏನಾದರೂ ನೆನಪಿನ ಕಾಣಿಕೆ ನೀಡಬೇಕೆಂಬುದು ಆದರೆ ಅವರು ಏನನ್ನೂ ನೀರಿಕ್ಷಿಸದ ,ಸ್ವೀಕರಿಸದ, ಖಡಕ್ ಅಧಿಕಾರಿ ಏನಾದರಾಗಲಿ ಎಂದು ನನ್ನ ಹಲವು ವರ್ಷಗಳ ಉಳಿತಾಯದಲ್ಲಿ ಅವರಿಗಾಗಿ ಈ ರಕ್ಷಾಬಂಧನವನ್ನು ಖರೀದಿಸಿ ಅವರನ್ನು ನೋಡಲೇ ಬೇಕೆಂದು ಬೆಂಗಳೂರಿಗೆ ಹೊರಟೆ ನಂಗೆ ಬಹಳ ಹೊತ್ತು ಬಸ್ಸಿನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಆದರೆ ಏನಾದರಾಗಲಿ ನನ್ನ ದೇವರನ್ನು ನೋಡಲೇಬೇಕೆಂಬ ಹೆಬ್ಬಯಕೆ ಇಂದ ಅವರ ಆಫಿಸನ್ನು ತಲುಪಿದೆ,ನನ್ನನ್ನು ಕಂಡು ಆಶ್ಚರ್ಯ ಪಟ್ಟರು ಅವರ ಕೈಗೆ ನಾ ತಂದಿದ್ದ ಬಾಹುಬಲಿ ರಾಖಿಯನ್ನು ಕಟ್ಟಿದೆ. ಇದು ನನ್ನ ಬದುಕಿನ ಸಾರ್ಥಕಹಾಗೂ ಎಂದು ಮರೆಯಲಾಗದ ದಿನ. ಆದರೆ ಎಂತಹ ಅದೃಷ್ಟದ ದಿನ ನಾನು ಅವರನ್ನು ಭೇಟಿಯಾದೆನೆಂದರೆ, ಅಂದು ಅದು ಅವರ ಜನ್ಮದಿನವಾಗಿತ್ತು, ಈ ನನ್ನ ಪಾಲಿನ ಬಾಹುಬಲಿಗೆ ನೂರು ವರುಷ ಆಯಸ್ಸು ಅರೋಗ್ಯ ಕೊಡು ಭಗವಂತ ಎಂದು ಭೇಡಿಕೊಂಡು ಬಂದೆ.
ನನ್ನ ಬದುಕಿನ ಬಾಹುಬಲಿ ಸುಧೀರ್ ಹೆಗ್ಡೆ.
ಪೊಲೀಸ್ ಅಧಿಕಾರಿಯೊಬ್ಬರು ಅಸಹಾಯಕ ಹೆಣ್ಣು ಮಗಳ ಬಾಳಿಗೆ ಬಾಹುಬಲಿ ಯಾದರೆಂದರೆ ಇದಕ್ಕಿಂತ ಮತ್ತೊಂದು ಸಾಧನೆ ಯುಂಟೇ ?? ಹಾಟ್ಸ್ ಆಫ್ ಟು ಯು ಬಾಹುಬಲಿ
ಆಸಿಡ್ ಅಟ್ಯಾಕ್ ಆದ ಮಹಿಳೆಗೆ ಧೈರ್ಯ ತುಂಬಿ ಬಾಹುಬಲಿಯಾದ ಅಧಿಕಾರಿ ಕಥೆ ಇದು..
Date: