ನೂತನ ಸಾರಥಿಯ ಜವಾಬ್ದಾರಿಯುತ ಕಾರ್ಯವೈಖರಿ
ಬೆಂಗಳೂರು ನಗರ ಪೊಲೀಸರಿಗೆ ನೂತನ ಸಾರಥಿ ಯಾಗಿರುವ ನೂತನ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ರವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ಕರ್ತವ್ಯ ಸ್ವೀಕರಿಸಿದ ದಿನದಿಂದಲೇ ಬೆಂಗಳೂರಿಗರ ರಕ್ಷಣೆ ಜವಾಬ್ದಾರಿ ನಮ್ಮದು ಎಂಬುದನ್ನು ನಿರೂಪಿಸಿದ್ದಾರೆ. ತಮ್ಮ ಟ್ವಿಟ್ಟರ್ರ್ನಲ್ಲಿ ತಾವೇ ಹೇಳಿಕೊಂಡಿರುವಂತೆ ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್ ಎಂಬಂತೆಯೇ ನಡೆದುಕೊಂಡಿದ್ದಾರೆ.ಕಮಿಷನರ್ ಆಗಿ ಚಾರ್ಜ್ ಸ್ವೀಕರಿಸಿ ಕಮಿಷನರ್ ಕಚೇರಿಯಲ್ಲಿಯೇ ಕುಳಿತು ಕರ್ತವ್ಯ ನಿರ್ವಹಿಸದೇ ಸ್ವತಃ ತಾವೇ ಗಸ್ತು ವಾಹನದಲ್ಲಿ ಕುಳಿತು ಬೆಂಗಳೂರು ರೌಂಡ್ಸ್ ಮಾಡಿದ್ದಾರೆ.
ಹೊಯ್ಸಳ ಪೆಟ್ರೋಲಿಂಗ್ ವಾಹನದಲ್ಲಿ ಕುಳಿತು ಬಿಡುವಿಲ್ಲದ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳು ಹೇಗೆ ಕಾರ್ಯನಿರ್ವಹಿಸುತ್ತಾರೆಹಾಗೂ ಪೆಟ್ರೋಲಿಂಗ್ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಸ್ವತಃ ತಾವೇ ಖುದ್ದು ಪರಿಶೀಲನೆ ನಡೆಸಿದ್ದಾರೆ.
112ನ ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಮ್ ಅನ್ನೂ ಸಹ ಸ್ವತಃ ಪೊಲೀಸ್ ಕಮಿಷನರ್ರವರೆ ಪರಿಶೀಲನೆ ನಡೆಸಿರುತ್ತಾರೆ.
ನೂತನ ಸಾರಥಿಯ ವಿನೂತನ, ಕ್ರಿಯಾಶೀಲ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
*ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮೀಷನರ್ *

Date: