ಈಗಾಗಲೇ ಮಹಿಳಾ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ, ಎಂದು ಹೇಳಿರುವ ನಮ್ಮ ಪೊಲೀಸ್ ಕಮಿಷನರ್ ಬಿ. ದಯಾನಂದ್ ರವರು, ಮಹಿಳಾ ಸುರಕ್ಷತೆಗೆ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಖುದ್ದು ಪೊಲೀಸ್ ಕಮಿಷನರ್ ರವರೇ ಬಿಎಂಟಿಸಿ ಬಸ್ ಹತ್ತಿದ್ದಾರೆ.
ಇದೇನಿದು ಪೊಲೀಸ್ ಕಮಿಷನರ್ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿದ್ರಾ ಅಂದ್ರ ? ಹೌದು *ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್ *ಎಂದೇ ಕರೆಸಿಕೊಳ್ಳುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ರಿಂದ ಹಿಡಿದು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಎಸಿಪಿ ಇನ್ಸ್ಪೆಕ್ಟರ್ , ಆದಿಯಾಗಿ ಎಲ್ಲರೂ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಕುಂದು ಕೊರತೆಗಳನ್ನು ಆಲಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.
ಮಹಿಳೆಯರ ಬಳಿ ಕುದ್ದು ನಾವೇ ಮಾತನಾಡಿ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯರಿಗೆ ತೊಂದರೆಯಾದಾಗ ಏನು ಮಾಡಬೇಕು,ಸೇಫ್ಟಿ ಐ ಲ್ಯಾಂಡ್ ಗಳಲ್ಲಿ ಪ್ಯಾನಿಕ್ ಬಟನ್ ಬಳಸೋದು ಹೇಗೆ?
ತೊಂದರೆಯಾದಾಗ 112 ಕರೆ ಮಾಡುವುದು,
ಸುರಕ್ಷಾ ಆಪ್ ಬಳಕೆ ಮಾಡುವ ವಿಧಾನ ಹೀಗೆ ಹಲವು ಮಾಹಿತಿಯನ್ನ ಮಹಿಳೆಯರಿಗೆ ನೀಡಿದ್ದಾರೆ.
ಪೊಲೀಸ್ ಆಯುಕ್ತರು ಶಿವಾಜಿನಗರದಿಂದ ದೇವನಹಳ್ಳಿಯವರೆಗೂ ಪ್ರಯಾಣ ಮಾಡಿ ಶಕ್ತಿ ಯೋಜನೆಯ ಮಹಿಳಾ ಶಕ್ತಿಗಳಲ್ಲಿ ಮತ್ತಷ್ಟು ಶಕ್ತಿ ಹೆಚ್ಚುವಂತೆ ಮಾಡಿದ್ದಾರೆ.
ಸಾರ್ವಜನಿಕರು ನಮ್ಮ ಬಳಿ ಬರೋದಕ್ಕಿಂತ ನಾವೇ ಅವರ ಬಳಿ ಹೋಗೋದು ಒಳ್ಳೆಯದುಎಂಬುದು ಬೆಂಗಳೂರು ಪೊಲೀಸ್ ಆಯುಕ್ತರ ಅಭಿಪ್ರಾಯ ಪೊಲೀಸರ ಈ ವಿನೂತನ ಕಾರ್ಯಕ್ರಮಕ್ಕೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.
*ಯತ್ರ ನಾರ್ಯಸ್ತು ಪೂಜ್ಯತೇ ರಮಂತೇ ತತ್ರ ದೇವತಃ *
Date: