2021ರಲ್ಲಿ ತನ್ನ ಅಪ್ರಾಪ್ತ ಹೆಣ್ಣು ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಲು ಬಂದಿದ್ದ ಅಜ್ಜಿಯ ಅಳಲನ್ನು ಕೇಳಿ ತಕ್ಷಣ ಕಾರ್ಯ ಪ್ರವೃತ್ತರಾದವರು ಅಂದಿನ ಬನಶಂಕರಿ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಂತಹ ಪುಟ್ಟಸ್ವಾಮಿಯವರು. ದೂರಿನನ್ವಯ ಪ್ರಕರಣ ದಾಖಲಿಸಿ, ಅಪ್ರಾಪ್ತೆಯನ್ನು ಪತ್ತೆ ಹಚ್ಚಿ, ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿ ಯಾಗಿದ್ದರು.
ಕೇವಲ 23ದಿನದಲ್ಲಿ ಕೋರ್ಟ್ಗೆ ಚಾರ್ಜಶೀಟ್ ಸಲ್ಲಿಸಿದ್ದರು.
ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆ ಆರೋಪಿಗೆ ನ್ಯಾಯಾಲಯ 20ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದೂರುದಾರೆ ಅಜ್ಜಿ ತಮಗೆ ನ್ಯಾಯ ದೊರೆತ ತೃಪ್ತಿಯಲ್ಲಿ, ನ್ಯಾಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ ಪೊಲೀಸರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
ಅಜ್ಜಿಯ ಹೇಳಿಕೆ: ಪೊಲೀಸರೆಂದರೆ ಮೊದಮೊದಲು ನಂಗೂ ಬಹಳ ಭಯವಿತ್ತು, ಮೊಮ್ಮಗಳು ಕಾಣೆಯಾದಾಗ ಬೇರೆ ದಾರಿ ಕಾಣದೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದೆ, ಜೀಪಿನಲ್ಲಿ ಬಂದಿಳಿದ ಇನ್ಸ್ಪೆಕ್ಟರ್ ಕಂಡು ಇನ್ನಷ್ಟು ಭಯಗೊಂಡಿದ್ದೆ, ಭಯದಿಂದಲೇ ಅವರ ಬಳಿ ತೆರಳಿ ನನ್ನ ದೂರನ್ನು ಹೇಳಲು ತಡವರಿಸುತ್ತಿದ್ದೆ, ಇದನ್ನು ಕಂಡ ಇನ್ಸ್ಪೆಕ್ಟರ್ ಪುಟ್ಟಸ್ವಾಮಿಯವರು ಮೊದಲು ನನ್ನನ್ನು ಕುಡಿಸಿ , ಸಮಾಧಾನದಿಂದ ಮಾತನಾಡಿಸಿ, ನನಗೆ ಧೈರ್ಯ, ತುಂಬಿ ಸಾಂತ್ವನ ಹೇಳಿದ್ದರು.
ದೂರು ದಾಖಲಾದಾಗಿನಿಂದ, ನನಗೆ ನ್ಯಾಯ ದೊರಕಿಸಿ ಕೊಡುವವರೆಗೆ ಪೊಲೀಸ್ ಸಿಬ್ಬಂದಿ ತೋರಿದ ಕಾಳಜಿ, ನನ್ನಲ್ಲಿ ಪೊಲೀಸರ ಮೇಲೆ ಇನ್ನಷ್ಟು ಧೈರ್ಯ ಮೂಡುವಂತೆ ಮಾಡಿದೆ , ಈಗ ಯಾವುದೇ ಅಂಜಿಕೆ ಇಲ್ಲದೆ ಠಾಣೆಗೆ ಬರುತ್ತೇನೆ, ಪೊಲೀಸರೆಂದರೆ ಭಯ ಪಡುವ ನನ್ನ ಅಕ್ಕ ಪಕ್ಕದ ಮನೆಯವರಿಗೂ ನನ್ನ ಅನುಭವ ತಿಳಿಸಿ ಧೈರ್ಯ ತುಂಬುತ್ತೇನೆ.
ಪೊಲೀಸರಿಲ್ಲದಿದ್ದರೆ ಇಂದು ನನಗೆ ನನ್ನ ಮೊಮ್ಮಗಳಿಗೆ ನ್ಯಾಯ ಸಿಗುತ್ತಿರಲಿಲ್ಲ.” ಅದಕ್ಕಾಗಿ ಅವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಲು ಡಿಸಿಪಿ ಯವರ ಕಚೇರಿಗೆ ಬಂದಿದ್ದು ಡಿಸಿಪಿಯವರು ನನ್ನನ್ನು ಮಾತನಾಡಿಸಿದ್ದನ್ನು ಕಂಡು ಪೊಲೀಸರ ಮೇಲಿನ ಗೌರವ ಹಿಮ್ಮಡಿಯಾಯಿತು, ಡಿಸಿಪಿ ಸಾಹೇಬರು ನನ್ನನ್ನು ಇಷ್ಟು ಚೆನ್ನಾಗಿ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ ಎಂದು ಭಾವಿಸಿರಲಿಲ್ಲ, ಖಂಡಿತವಾಗಿಯೂ ಪೊಲೀಸರೆಂದರೆ ಭಯ ಅಲ್ಲ ಭರವಸೆ
ನಾನೆಂದಿಗೂ ಅವರಿಗೆ ಚಿರಋಣಿ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶ್ರೀ ಕೃಷ್ಣಕಾಂತ್ ರವರು ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಮೇಲುಸ್ತುವಾರಿ ಅಧಿಕಾರಿಯಾದ ಎಸಿಪಿ ಶ್ರೀನಿವಾಸ್ .ಕೆ .ವಿ,ತನಿಖಾಧಿಕಾರಿಯಾದ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ.ಎಚ್ , ಉಸ್ತುವಾರಿ ಅಧಿಕಾರಿಯಾದ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ , ಪಿಎಸ್ಐ ನಂದಿನಿ.ಎಮ್,ಎಎಸ್ಐ ಸಿದ್ದರಾಮು.ಎಂ.ಎಸ್,ಎಎಸ್ ಐ ಮಲ್ಲಿಕಾರ್ಜುನ, ಶ್ರೀನಿವಾಸ್.ಎ.ಜೆ ತನಿಖಾ ಸಹಾಯಕರು,ಶಿವು.ಡಿ,ಶಿವರಾಮ, ಮಾದೇವಿಲಮಾಣಿ, ಕಿರಣಕುಮಾರ್.ವಿ.ಎಸ್,ವಿಜಯ್ ಕುಮಾರ್ ದಂಡಾವತಿ, ಮಾದಲಿಂಗ ಪೂಜಾರಿ,ಇವರುಗಳಿಗೆ ಬಹುಮಾನಕ್ಕೆ ಶಿಫಾರಸ್ಸು ಮಾಡಿದ್ದಾರೆ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.
ಕಾಫಿ ವಿಥ್ ಸೂಪರ್ ಕಾಪ್ಸ್*ಈ ಸಂಚಿಕೆಯ ಸೂಪರ್ ಕಾಪ್ಸ್ 2021ರ ಬನಶಂಕರಿ ಠಾಣೆಯ ಸಿಬ್ಬಂದಿಗಳು.
Date: