21 C
Bengaluru
Thursday, November 7, 2024

ಪೊಲೀಸ್ ಇಲಾಖೆಯ ಮಹಿಳಾ ನಕ್ಷತ್ರ

Date:


ಈ ಸಂಚಿಕೆಯ ನಮ್ಮ ಮಹಿಳಾ ನಕ್ಷತ್ರ ಹಿರಿಯ ಐಪಿಎಸ್ ಅಧಿಕಾರಿ ಇಶಾ ಪಂಥ್.
ಪ್ರಸ್ತುತ ಕಲಬುರ್ಗಿಯ ಜಿಲ್ಲಾ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಮ್ಯಾಂಡ್ ಸೆಂಟರ್ ನ ಡಿಸಿಪಿ ಯಾಗಿಕಾರ್ಯನಿರ್ವಹಿಸುತ್ತಿದ್ದರು.ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಜನಿಸಿ, ಜಬಲ್‌ಪುರದಿಂದ ಬಂದು ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2009ರಲ್ಲಿ ಪರೀಕ್ಷೆ ಎದುರಿಸಿದರೂ ಸಂದರ್ಶನ ಹಂತದಲ್ಲಿ ವಿಫಲರಾದರು.ಅಷ್ಟಕ್ಕೇ ದೃತಿಗೆಡದೆ ಪುನಃ 2010ರಲ್ಲಿ ಮತ್ತೆ ಪರೀಕ್ಷೆ ಎದುರಿಸಿ 198 ನೇ ರಾಂಕ್‌ನೊಂದಿಗೆ ಮಧ್ಯಪ್ರದೇಶ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.ಜಬಲ್ ಪುರದಲ್ಲಿ ಆಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್(ಎಎಸ್ಸಿ) ಆಗಿ ಸೇವೆ ಪ್ರಾರಂಭಿಸಿದರು. ಗ್ವಾಲಿಯಾರ್ ನಲ್ಲಿ ಸುಮಾರು ಹತ್ತು ತಿಂಗಳ ಕಾಲ ಸೇವೆ ಸಲ್ಲಿಸಿ ನಂತರ 2016 ರಲ್ಲಿ ಗುಲ್ಬರ್ಗಾದ ಪೊಲೀಸ್ ಟ್ರೈನಿಂಗ್ ಕಾಲೇಜಿಗೆ ಎಸ್‌ಪಿಯಾಗಿ ವರ್ಗಾವಣೆಗೊಂಡರು. 2016 ರ ಡಿಸೆಂಬರ್ ತುಮಕೂರಿನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಗೊಂಡರು. ಇವರ ಪತಿ ಶವನ್ ಕೂಡ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ. ಇವರ ಜೀವನಾಧರಿತವಾಗಿ ಬಾಲಿವುಡ್‌ನಲ್ಲಿ ಜೈ ಗಂಗಾಜಲ್ ಎಂಬ ಸಿನಿಮಾ ಕೂಡ ಪ್ರದರ್ಶನವಾಯಿತು.ಕೆಲವೊಂದು ಸನ್ನಿವೇಶಗಳು ಮಾತ್ರ ನಿಜ ಜೀವನದ ನೈಜ ಘಟನೆಯಾಗಿದೆ. ಉಳಿದೆಲ್ಲಾ ಘಟನೆಗಳು ಕಾಲ್ಪನಿಕ ರೀತಿಯಲ್ಲಿವೆ ಎಂದಿದ್ದಾರೆ.

ಭೋಪಾಲ್‌ನ ಸೇಂಟ್ ಥೆರೇಸಾ ಬಾಲಕಿಯರ ಕಾನ್ವೆಂಟ್ ಶಾಲೆಯಲ್ಲಿ 1 ರಿಂದ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿದ ಇಶಾ ಪಂಥ್ ,ಪದವಿ ಶಿಕ್ಷಣಕ್ಕಾಗಿ ಅದೇ ಊರಿನ ಇನ್ಸ್‌ಟಿಟ್ಯೂಟ್ ಫಾರ್ ಹೈಯರ್ ಎಜುಕೇಷನ್‌ ಸೇರಿದರು. ಬಿ.ಎ ಸೈಕಾಲಜಿ ಹಾನರ್ಸ್ ಓದುತ್ತಿದ್ದ ಇವರು, ಇದೇ ಹಂತದಲ್ಲಿ ಆಮೆರಿಕ ಸರ್ಕಾರ ನೀಡುತ್ತಿದ್ದ ಶಿಷ್ಯವೇತನ ಪಡೆಯಲು ಪರೀಕ್ಷೆಯೊಂದನ್ನು ತೆಗೆದುಕೊಂಡಿದ್ದರು. ಶಿಷ್ಯವೇತನದ ಪರೀಕ್ಷೆ ಪಾಸು ಮಾಡಿ ಆಮೆರಿಕಾಕ್ಕೆ ತೆರಳಿ, ಇಂಟರ್‌ ನ್ಯಾಷನಲ್ ರಿಲೇಷನ್ಸ್ ವಿಷಯದಲ್ಲಿ ಬಿ.ಎ ಪದವಿ ಪೂರೈಸಿದರು.ಅಕ್ಕ ಸ್ಮಿತಾ ಪಂತ್ 2001 ರ ಬ್ಯಾಚ್ ನ ಐಎಫ್‌ಎಸ್‌ ಅಧಿಕಾರಿಯಾಗಿ ಆಯ್ಕೆಯಾದರು. ಅವರಂತೆ ತಾನೂ ಸಿವಿಲ್ ಸರ್ವೀಸ್ ಸೇರಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ವಿದೇಶದಿಂದ ಬಂದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಪ್ರಾರಂಭಿಸಿದರು.ಇವರ ತರಬೇತಿ ಸಮಯದಲ್ಲಿ ಬೆಸ್ಟ್ ಪ್ರೊಬೇಷನರ್ ಎಂಬ ಗೌರವವೂ ಸಿಕ್ಕಿದ. ತರಬೇತಿ ಅವಧಿಯಲ್ಲಿ 150 ಜನರಿದ್ದ ಬ್ಯಾಚ್ ನಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದ ಕಾರಣ ಗೃಹ ಮಂತ್ರಿಗಳ ರಿವಾಲ್ವರ್ ಸಹ ಸಿಕ್ಕಿದ.

ಸಿವಿಲ್‌ ಸರ್ವೀಸ್ ವಿದ್ಯಾರ್ಥಿಗಳಿಗೆ ಯೋಜನಾಬದ್ಧ ಅಭ್ಯಾಸವಿದ್ದರೆ ಯಶಸ್ಸು ಸಾಧಿಸಲು ಸಾಧ್ಯ ಎಂಬ ಸಲಹೆಯನ್ನು ನೀಡುತ್ತಾರೆ. ನಿರ್ದಿಷ್ಟವಾಗಿ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಅಧ್ಯಯನವನ್ನು ಪ್ರಾರಂಭಿಸಬೇಕು. ಒಂದು ಗಂಟೆಯಲ್ಲಿ ಒಂದು ಘಟಕವನ್ನು ಓದಿ ಮುಗಿಸುವುದು ನಮ್ಮಿಂದ ಸಾಧ್ಯವಿದ್ದಲ್ಲಿ ಮೂರು ಗಂಟೆಯಲ್ಲಿ ಮೂರು ಘಟಕವನ್ನು ಓದಿ ಮುಗಿಸುತ್ತೇನೆ ಎಂಬ ನಿಶ್ಚಯದೊಂದಿಗೆ ಒದಲು ಅತಿಯು ದಿನದಲ್ಲಿ 5 ಗಂಟೆಯನ್ನು ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆಗೆ ಮೀಸಲಿಡುವುದಾದರೆ ಈ ಅವಧಿಯಲ್ಲಿ ಎಷ್ಟು ಘಟಕಗಳನ್ನು ಓದಿ ಮುಗಿಸಬೇಕೆಂದು ಮೊದಲೇ ನಿಶ್ಚಯಿಸಿರಬೇಕು. ಇದರಲ್ಲಿ ಯಾವುದೇ ರಾಜಿ ಬೇಡ, ಇಂದು ಅಧ್ಯಯನ ಮಾಡಬೇಕು. ಅಂಡುಕೊಂಡದ್ದನ್ನು ಪೂರ್ತಿಗೊಳಿಸದೇ ನಾಳೆ ಓದಿದರಾಯಿತು ಎಂಬ ಅಲಸ್ಯದ ಮನೋಭಾವ ಸಲ್ಲದು, ಅಂದುಕೊಂಡದ್ದನ್ನು ಮಾಡಿಯೇ ತೀರುತ್ತೇನೆಂಬ ದೃಢ ಮನಸ್ಸಿನಿಂದ ಅಧ್ಯಯನ ನಡೆಸಿದರೆ ಖಂಡಿತ ಯಶಸ್ಸುಗಳಿಸಲು ಸಾಧ್ಯ. ಉದೆ – ನದಲ್ಲಿದ್ದುಕೊಂಡೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಸಾಧ್ಯವಿದೆ. ದಿನನಿತ್ಯ ನಾಲ್ಕೈದು ಗಂಟೆಗಳಷ್ಟು ಕಾಲ ಅಧ್ಯಯನಕ್ಕೆ ಮೀಸಲಿಡಬೇಕು. ಬಿಡುವಿನ ಸಮಯದಲ್ಲಿ ಓದಲು ಬಳಸಿಕೊಳ್ಳಬಹುದು. ನಮಗೆ ಲಭ್ಯವಿರುವ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಒಂದು ವೇಳಾ ಪಟ್ಟಿ ತರ ಅದಕ್ಕೆ ಬದ್ದವಾಗಿ ಅಭ್ಯಾಸ ಮುಂದುವರಿಸಿದರೆ ಯಶಸ್ಸು ಗಳಿಸುವುದು ಸಾಧ್ಯವಿದೆ ಎಂದಿದ್ದಾರೆ.

Latest Stories

LEAVE A REPLY

Please enter your comment!
Please enter your name here