ಬೆಂಗಳೂರು ನಗರ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ಬೆಂಗಳೂರು ನಗರದಲ್ಲಿ ಸೇಫ್ಟಿ ಐ ಲ್ಯಾಂಡ್ ಸಹಾಯವಾಣಿ ಕೇಂದ್ರಗಳನ್ನು ತೆರೆದಿದ್ದಾರೆ.
ಸೇಫ್ ಸಿಟಿ ಯೋಜನೆಯಡಿ ನಗರದ ಮೈಸೂರ್ ಬ್ಯಾಂಕ್ ವೃತ್ತ, ಇಂದಿರಾನಗರ, ಚಾಮರಾಜಪೇಟೆ, ಉಪ್ಪಾರಪೇಟೆ, ಎಂಜಿ ರಸ್ತೆ , ಸೇರಿದಂತೆ 30ಸ್ಥಳಗಳಲ್ಲಿ “ಮಹಿಳೆಯರ ಸುರಕ್ಷತೆಗೆ ಸುರಕ್ಷತಾ ದ್ವೀಪ”( ಸೇಫ್ಟಿ ಐ ಲ್ಯಾಂಡ್ )ಅನ್ನು ಸ್ಥಾಪಿಸಲಾಗಿದೆ.
ಈ ಸೇಫ್ಟಿ ಐ ಲ್ಯಾಂಡ್ ಗಳು 10ರಿಂದ 12ಅಡಿ ಎತ್ತರದ ನೀಲಿ ಬಣ್ಣದ ಯಂತ್ರವಾಗಿದ್ದು, ಈ ಯಂತ್ರದ ಮಧ್ಯ ಭಾಗದಲ್ಲಿ ಕೆಂಪು ಬಣ್ಣದ ಬಟನ್ ಅಳವಡಿಸಲಾಗಿದ್ದು, ಮಹಿಳೆಯರು ಅಪಾಯಕ್ಕೆ ಸಿಲುಕಿದಾಗ ಆ ಕೆಂಪು ಬಣ್ಣದ ಬಟನ್ ಒತ್ತಿದ ಕೂಡಲೇ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ‘ಕಮ್ಯಾಂಡೋ ಸೆಂಟರ್ಗೆ’ ಕೂಡಲೇ ದೃಶ್ಯ ಸಹಿತ ಮಾಹಿತಿ ರವಾನೆಯಾಗುತ್ತದೆ, ಕಮ್ಯಾಂಡೋ ಸೆಂಟರ್ ನಲ್ಲಿ ದಿನದ 24ಗಂಟೆಯೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುತ್ತಾರೆ, ಮಾಹಿತಿ ದೊರೆತ ಕೂಡಲೇ ಕಾರ್ಯ ಪ್ರವೃತ್ತರಾಗುವ ಸಿಬ್ಬಂದಿಗಳು ದೌರ್ಜನ್ಯಕೊಳ್ಳಗಾದ ಮಹಿಳೆಯ ದೂರನ್ನು ವಿಚಾರಿಸಿ, ಸಮೀಪದ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುತ್ತಾರೆ, ಹಾಗೂ ಮಹಿಳೆಗೆ ನೆರವಾಗುತ್ತಾರೆ.
“ಎಲ್ಲಾ ಸುರಕ್ಷತಾ ದ್ವೀಪದ ಪಕ್ಕದಲ್ಲೇ ಸಿಸಿ ಕ್ಯಾಮೆರಾವನ್ನೂ ಸಹ ಅಳವಡಿಸಲಾಗಿದ್ದು , ಸಂತ್ರಸ್ತರ ಸ್ಥಿತಿಯನ್ನು ಕಮ್ಯಾಂಡೋ ಕೇಂದ್ರದಲ್ಲಿ ವೀಕ್ಷಣೆ ಮಾಡಲಾಗುತ್ತದೆ.
ಮಹಿಳೆಯರು ದೂರು ನೀಡಲು ಠಾಣೆಗೆ ತೆರಳುವಲ್ಲಿ ವಿಳಂಬವಾಗದಂತೆ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಮಯ ನೀಡದಂತೆ, ಎಲ್ಲಾ ಕಡೆಗಳಲ್ಲೂ ಸ್ಥಾಪಿತವಾಗಿರುವ ಈ ಸೇಫ್ಟಿ ಐ ಲ್ಯಾಂಡ್ ಗಳು ಮಹಿಳೆಯರಿಗೆ ಸಹಾಯಕವಾಗಲಿವೆ.
ಸಿಬ್ಬಂದಿಗಳ ಸಹಾಯದಿಂದ ಮಾತ್ರವಲ್ಲದೆ ತಂತ್ರಜ್ಞಾನದ ಸಹಾಯದಿಂದಲೂ ಆರೋಪಿಗಳ ಪತ್ತೆ ಹಾಗೂ ಅಪರಾಧ ತಡೆಗಟ್ಟುವಲ್ಲಿ ಸೇಫ್ಟಿ ಐ ಲ್ಯಾಂಡ್ ಗಳು ಅತ್ಯಂತ ಪರಿಣಾಮಕಾರಿಯಾಗಲಿವೆ.
ಮಹಿಳೆಯರ ರಕ್ಷಣೆಗೆ ನಮ್ಮ ಮೊದಲ ಆದ್ಯತೆಬೆಂಗಳೂರಿನಲ್ಲಿ ಸೇಫ್ಟಿ ಐ ಲ್ಯಾಂಡ್ಸ್
Date: