28.7 C
Bengaluru
Tuesday, October 8, 2024

ಸೈಬರ್ ವಿಕ್ಟಿಮ್ ಡೇ

Date:

ಸೈಬರ್ ವಿಕ್ಟಿಮ್ ಡೇ
ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚಕರ ಕೈ ಚಳಕ ಬಹಳ ಜೋರಾಗಿರೋದನ್ನ ಅರಿತ ಪೊಲೀಸರು ಅವರ ವಿರುದ್ಧ ಸಮರ ಸಾರಿದ್ದಾರೆ.
ಕಳೆದ 8 ತಿಂಗಳಲ್ಲಿ ಸೈಬರ್ ವಂಚಕರು ವಂಚಿಸಿರೋದು ಬರೊಬ್ಬರಿ 100 ಕೋಟಿಗೂ ಅಧಿಕ. ಇದು ಇಡೀ ರಾಜ್ಯದ ಅಥವಾ ದೇಶದ ಗಣತಿಯಲ್ಲ ,ಇದು ಕೇವಲ ಬೆಂಗಳೂರು ಆಗ್ನೇಯ ವಿಭಾಗದ ಲೆಕ್ಕ ಅಷ್ಟೇ.
ಬೆಂಗಳೂರು ಆಗ್ನೇಯ ವಿಭಾಗದಲ್ಲಿ ದಾಖಲಾದ ಸೈಬರ್ ಪ್ರಕರಣಗಳ ಸಂಖ್ಯೆ ಬರೊಬ್ಬರಿ ಎರಡು ಸಾವಿರ,
ಇದು 2023 ನೇ ಸಾಲಿನ ಕಳೆದ ಎಂಟು ತಿಂಗಳಿನಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಾಗಿದ್ದು , ಈ ಎರಡು ಸಾವಿರ ಪ್ರಕರಣಗಳಲ್ಲಿ ನೂರು ಕೋಟಿಗೂ ಅಧಿಕ ಹಣ ವಂಚನೆಯಾಗಿರುವುದು ವರದಿಯಾಗಿದೆ.
ಹಾಗಾದರೆ ಆಗ್ನೇಯ ವಿಭಾಗದ ಒಂದರಲ್ಲೇ ಇಷ್ಟ‍ಾದ್ರೆ ಒಟ್ಟಾರೆ ಬೆಂಗಳೂರಿನ ಲೆಕ್ಕವೆಷ್ಟಿರಬಹುದು, ಅಂದಾಜಿಸಿದರೆ ನಿಜವಾಗಲೂ ಭಯಾನಕ ಸತ್ಯ ಇದಾಗಿರುತ್ತದೆ.
ಈ ರೀತಿ ವಂಚನೆಗೊಳಗಾದವರಲ್ಲಿ ಅತೀ ಹೆಚ್ಚು ವಿದ್ಯಾವಂತರೇ ಇರೋದು ನಿಜಕ್ಕೂ ವಿಪರ್ಯಾಸ ಎನ್ನಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ಹನಿಟ್ರ್ಯಾಪ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡೋ ಪ್ರಕರಣಗಳೇ ಅತಿ ಹೆಚ್ಚು ವರದಿಯಾಗ್ತಿದೆ ಈ ಹೊಸ ಹೊಸ ತಂತ್ರಗಳನ್ನ ಬಳಸಿ ವಂಚನೆ ಮಾಡೋ ಖದೀಮರು
ದೇಶದ ಮೂಲೇ ಮೂಲೆಗಳಲ್ಲಿ ಕುಳಿತು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗ್ತಿದ್ದಾರೆ ಎಂಬ ಮಾಹಿತಿ ಇದೆ.
ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಸೈಬರ್ ವಂಚನೆ ತಡೆಯಲು ಹೊಸ ತಂತ್ರವೊಂದನ್ನು ರೂಪಿಸಿದ್ದಾರೆ.
ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ರವರು ಈ ವಿನೂತನ ಕಾರ್ಯರೂಪಕ್ಕೆ ಮುನ್ನುಡಿ ಬರೆದಿದ್ದಾರೆ.
ಸೈಬರ್ ವಂಚನೆಗೊಳಗಾದವರಿಗಾಗಿ ಸೈಬರ್ ವಿಕ್ಟಿಮ್ ಡೇ ಎಂದು ಆಯೋಜಿಸಿದ್ದು,
ವಾರದಲ್ಲಿ ಒಂದು ದಿನ ಸೈಬರ್ ವಂಚನೆಗೊಳಗಾದವರ ಜೊತೆ ಚರ್ಚೆ ನಡೆಸಿ ವಂಚನೆಯ ಬಗ್ಗೆ ಸಂಕ್ಷಿಪ್ತ ವಿವರವನ್ನು ಕಲೆ ಹಾಕಿ , ಇವರುಗಳೊಂದಿಗೊಂದು ವಾಟ್ಸಾಪ್ ಗ್ರೂಪ್ ಮೂಲಕ ಹಲವು ಮಾಹಿತಿಗಳನ್ನು ವಿನಿಮಯ ಮಾಡಿಕೊಂಡು,ನ್ಯಾಯಾಲಯದಿಂದ ಹಣ ವಾಪಸ್ಸು ಪಡೆಯುವ ಕುರಿತು ಮಾಹಿತಿಯನ್ನು ಪೊಲೀಸರು ನೀಡಲಿದ್ದಾರೆ.
ಇದರಿಂದಾಗಿ ವಂಚನೆಗೊಳಗಾದವರು ಪೊಲೀಸ್ ಠಾಣೆ ಅಲೆಯೋದು ತಪ್ಪುತ್ತೆ ಹಾಗೂ ನಮ್ಮೊಂದಿಗೆ ಪೊಲೀಸರಿದ್ದಾರೆ ಎಂಬ ಧೈರ್ಯ ಮೂಡುತ್ತದೆ, ನ್ಯಾಯದ ನೀರಿಕ್ಷೆಯಲ್ಲಿರುವವರಿಗೊಂದು ಸಾಂತ್ವನ ದೊರೆತಂತಾಗುತ್ತದೆ.
ಸದ್ಯ 70 ಮಂದಿ ವಂಚನೆಗೊಳಗಾದವರ ಜೊತೆ ಸಭೆ ನಡೆಸಿರುವ ಪೊಲೀಸರು ಇವರುಗಳಿಂದ ಮಾಹಿತಿ ಕಲೆ ಹಾಕಿ ಸೈಬರ್ ವಂಚನೆ ತಪ್ಪಿಸುವ ಪ್ರಯತ್ನದೆಡೆಗೆ, ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

Latest Stories

LEAVE A REPLY

Please enter your comment!
Please enter your name here