ಕೇಂದ್ರ ಗೃಹ ಸಚಿವ ಪದಕ ಪುರಸ್ಕೃತರಲ್ಲಿ ಒಬ್ಬರು ಇನ್ಸ್ಪೆಕ್ಟರ್ ಸುರೇಶ್.ಪಿ ರವರು ಪ್ರಸ್ತುತ ಬೆಂಗಳೂರು ನಗರದ ಆರ್.ಎಮ್. ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಪೊಲೀಸ್ ಇಲಾಖೆಗೆ ಸೇರಿದಾಗಿನಿಂದ ಕರ್ತವ್ಯ ಬದ್ಧತೆ ಮತ್ತು ಸಮರ್ಪಣೆಯ ಅನುಕರಣೀಯ ಗುಣಗಳನ್ನು ತೋರಿಸಿದ್ದಾರೆ.
ಇವರು ಹಾಸನ ಜಿಲ್ಲೆಯ ಶಾಂತಿಗ್ರಾಮ ವೃತ್ತದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುವ ಅವಧಿಯಲ್ಲಿ ಅತೀ ಸಂವೇದನಾಶೀಲವಾದ ಕೊಲೆ ಪ್ರಕರಣದಲ್ಲಿ ನಿಜವಾದ ಕೊಲೆ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮತ್ತು ತನಿಖೆಯಲ್ಲಿ ಅಸಾಧಾರಣ ಕೌಶಲ್ಯವನ್ನು ತೋರಿಸಿದ್ದಾರೆ.
ಸದರಿ ಪ್ರಕರಣವು ಸಂವೇದನಾಶೀಲ ಪ್ರಕರಣವಾಗಿದ್ದು, ಮೃತಳು ಸೇವಾನಿರತ ಸೈನಿಕರ ತಾಯಿಯಾಗಿರುತ್ತಾರೆ. ಕಾಣೆಯಾದ ಮಹಿಳೆ ಪತ್ತೆಯಾಗದ ಕಾರಣ, ಕರ್ನಾಟಕ ಮಾಜಿ ಸೈನಿಕರ ಸಂಘದವರು ಪತ್ರಿಕಾ ಗೋಷ್ಟಿ ನಡೆಸಿದ್ದರು.
ಪ್ರಕರಣದ ತನಿಖಾಧಿಕಾರಿಯಾದ ಶ್ರೀ ಸುರೇಶ್ ಪಿ, ಪೊಲೀಸ್ ಇನ್ಸಪೆಕ್ಟರ್ ರವರು ವಿಶೇಷವಾಗಿ ಸಿ.ಡಿ.ಆರ್ ಅನಾಲಿಸಿಸ್‌ನಲ್ಲಿ ಅತ್ಯುತ್ತಮವಾದ ಕೆಲಸವನ್ನು ತೋರಿಸಿದ್ದಾರೆ. ಇದರ ಪರಿಣಾಮವಾಗಿ ಈ ಸಂವೇದನಾಶೀಲ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಮತ್ತು ಚಾರ್ಜ್‌ಶೀಟ್ ಅನ್ನು ಪರಿಣಾಮಕಾರಿಯಾಗಿ ಸಲ್ಲಿಸಲಾಗಿದೆ, ಎಫ್.ಐ.ಆರ್ ನಲ್ಲಿ ಸಂಶಯ ವ್ಯಕ್ತಪಡಿಸಿ ಹೆಸರಿಸಲಾದ ಮಹೇಶ್‌ನನ್ನು ಎಷ್ಟೇ ಒತ್ತಡವಿದ್ದರೂ
ದಸ್ತಗಿರಿ ಮಾಡದೇ ನಿಜವಾದ ‘ಆರೋಪಿಯನ್ನು ಪತ್ತೆಮಾಡಿ ದಸ್ತಗಿರಿ ಮಾಡುವಲ್ಲಿ ಅಸಾಧಾರಣ ಕೌಶಲ್ಯವನ್ನು ಮೆರೆದು ಇಲಾಖೆಯ ಘನತೆಯನ್ನು ಹೆಚ್ಚಿಸಿದ್ದಾರೆ, ಮೇಲಾಧಿಕಾರಿಗಳು ಇವರ ಉತ್ಸಾಹ, ಕಾರ್ಯ, ತತ್ಪರತೆ, ಕರ್ತವ್ಯ ನಿಷ್ಠೆಗಳನ್ನು ಮೆಚ್ಚಿ ಸದರಿ ಪ್ರಕರಣದಲ್ಲಿ ತನಿಖಾ ತಂಡಕ್ಕೆ ರೂ.25,000- ನಗದು ಬಹುಮಾನ ಘೋಷಿಸಿದ್ದಾರೆ. ಇವರ ನಿಷ್ಟಾವಂತ ಮತ್ತು ಶ್ಲಾಘನೀಯ ಸೇವೆಯನ್ನು ಗುರುತಿಸಿ, 2023ರ ವರ್ಷದ ಕೇಂದ್ರ ಗೃಹ ಸಚಿವರ ಎಕ್ಸಲೆನ್ಸ್ ಇನ್ ಇನ್ವೆಸ್ಟಿಗೇಷನ್’ ಪ್ರಶಸ್ತಿಗೆ ಇವರಿಗೆ ನೀಡಿ ಗೌರವಿಸಲಾಗಿದೆ.
ಕೇಂದ್ರ ಗೃಹ ಸಚಿವ ಪದಕ ಪುರಸ್ಕೃತ ಇನ್ಸ್ ಪೆಕ್ಟರ್ ಸುರೇಶ್ .ಪಿ.
Date: