ಪೊಲೀಸರಿಗಾಗಿ ಹೆಲ್ಮೆಟ್ ಬೇಡ ನಿಮಗಾಗಿ ಧರಿಸಿ
ಪ್ರತೀ ವರ್ಷ ರೋಗರುಜಿನಗಳಿಗೆ ತುತ್ತಾಗಿ ಬಲಿಯಾಗುವವರ ಸಂಖ್ಯೆಗಿಂತ ರಸ್ತೆ ಅಪಘಾತಗಳಲ್ಲಿ ಬಲಿಯಾದವರ ಸಂಖ್ಯೆಯೇ ಅಧಿಕ. ಹೌದು ಆಶ್ಚರ್ಯಕರವಾದ ಸಂಗತಿಯಾದರೂ ಸತ್ಯ.
ರಸ್ತೆ ಅಪಘಾತವಾದಾಗ ನಾಲ್ಕು ಚಕ್ರದ ವಾಹನಗಳ್ಳಲ್ಲಿ ಸಂಚರಿಸುವವವರು ಅಪಘಾತಕ್ಕೀಡಾಗಿ ಮೃತಪಡುವುದು ಬೆರಳೆಣಿಕೆಯಷ್ಟು ಮಾತ್ರ, ಆದರೆ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಡುವುದೇ ಹೆಚ್ಚು.
ಹೆಚ್ಚಿನವರು ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿಯೇ ಮೃತ ಪಟ್ಟಿದ್ದಾರೆ ಎಂಬುದು ವೈದ್ಯರ ಅಭಿಪ್ರಾಯ.
ಮನುಷ್ಯನ ತಲೆ ಭಾಗಕ್ಕೆ ಪೆಟ್ಟಾದಾಗ ಸೂಕ್ಷ್ಮ ಪದರಕ್ಕೆ ಬಲವಾದ ಹೊಡೆತ ತಗುಲಿ ಮೆದುಳು ನಿಷ್ಕ್ರಿಯಗೊಂಡು, ಮೆದುಲಿನಲ್ಲಿ ರಕ್ತಸ್ರಾವವಾಗಿ, ಕೆಲವೊಮ್ಮೆ ಕೋಮಾ ಸ್ಥಿತಿಗೆ ತೆರಳಿದವರು ಮತ್ತೆ ಚೇತರಿಸಿಕೊಳ್ಳಲಾಗದೆ ಜೀವಂತ ಶವವಾದ ಉದಾಹರಣೆಗಳು ಇವೆ ಎಂಬುದು ವೈದ್ಯರ ಮಾತು.
ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿಲ್ಲವೆಂದರೆ ಫೈನ್ ಹಾಕುತ್ತಾರೆ ಎಂದು ಹೆದರಿಯಾದರು ನಿಮ್ಮ ಜೀವ ಉಳಿಸಿಕೊಳ್ಳಿ ಎಂಬುದು ಟ್ರಾಫಿಕ್ ಪೊಲೀಸರ ಸಲಹೆ.
ಟ್ರಾಫಿಕ್ ಪೊಲೀಸರೇ ಹೇಳುವಂತೆ ನಮಗೆ ಹೆದರಿಯಾದರು, ನಮನ್ನು ಬದ್ದ ವೈರಿಗಳೆಂದು ಭಾವಿಸಿದರು ತೊಂದರೆ ಇಲ್ಲವಾಹನ ಸವಾರರು ಹೆಲ್ಮೆಟ್ ಧರಿಸಿದರೆ ಸಾಕು ಎಂಬುದು ಅವರ ವಾದ.
ಸಾರ್ವಜನಿಕರ ಸುರಕ್ಷತೆಯ ಹೊಣೆ ನಮ್ಮದು,ಅವರ ಪ್ರಾಣ ರಕ್ಷಣೆಯ ಗುರಿ ಹೊಂದಿದ್ದೇವೆ ಎನ್ನುತ್ತಾರೆ.
ಆದರೆ ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಟ್ರಾಫಿಕ್ ಪೊಲೀಸರಿಗಾಗಿಯೇ ಹೆಲ್ಮೆಟ್ ದರಿಸುತ್ತಿರುವ ಅನೇಕರು ನಾಮಕಾವಸ್ಥೆಗೆ ಹೆಲ್ಮೆಟ್ ಧರಿಸುತ್ತಿದ್ದಾರೆ .
ಅಂತಹ ಅರ್ಧ ಬರ್ದ ತಲೆಯನ್ನು ಪೋಷಿಸುವ ಹೆಲ್ಮೆಟ್ ನಿಂದ ಯಾವುದೇ ಉಪಯೋಗವಿಲ್ಲ.
ಮೊದಲೇ ಹೇಳಿದಂತೆ ಪೊಲೀಸರಿಗಾಗಿ ಹೆಲ್ಮೆಟ್ ಧರಿಸಿದಂತೆ ಕಾಣುತ್ತದೆ . ಆ ನಿಮ್ಮ ಅರ್ಧ ಹೆಲ್ಮೆಟ್ ನಿಮ್ಮ ತಲೆಯನ್ನಾಗಲಿ, ನಿಮ್ಮ ಪ್ರಣವನ್ನಾಗಲಿ ರಕ್ಷಿಡುವುದಿಲ್ಲ, ಅದು ಕೇವಲ ನಾಮ್ಕಾವಾಸ್ತೆಯ ಹೆಲ್ಮೆಟ್ .
ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಪ್ರತಿಯೊಬ್ಬ ವಾಹನ ಸವಾರ ಗಡಿ ಓಡಿಸುವಾಗ ಅವನು ಹೊಂದಿರುವ ಏಕೈಕ ಆತ್ಮ ವಿಶ್ವಾಸ ನಾನು ಗಡಿ ಓಡಿಸುವುದರಲ್ಲಿ ಅತ್ಯಂತ ನಿಪುಣ, ನಾನು ಆಕ್ಸಿಡೆಂಟ್ ಆಗದ ಹಾಗೆ ನೋಡಿಕೊಳ್ಳಬಲ್ಲೆ, ನಿಜ ಖಂಡಿತ ಒಪ್ಪುವಂತ ಮಾತೇ ಆದರೆ ರಸ್ತೆಯಲ್ಲಿ ಗಾಡಿ ಚಲಾಯಿಸುವವರೆಲ್ಲ ನಿಮ್ಮಂತೆ ನಿಪುಣ ರಾಗಿರಬೇಕಲ್ಲವೇ ? ಆದ ಕಾರಣ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. ಪೊಲೀಸರಿಗಾಗಿ ಧರಿಸುವ ಹೆಲ್ಮೆಟ್ ಬೇಡ ನಿಮ್ಮಗಾಗಿ ನಿಮ್ಮಜೀವ ರಕ್ಷಣೆಗಾಗಿ , ನಿಮ್ಮನ್ನೇ ನಂಬಿರುವ ಕುಟುಂಬದವರಿಗಾಗಿ ಪೂರ್ತಿ ಹೆಲ್ಮೆಟ್ ಧರಿಸಿ ಎಂಬುದು ಟ್ರಾಫಿಕ್ ಪೊಲೀಸರ ಕಿವಿಮಾತು.
ನಿಮ್ಮಿಂದ ಹಣ ಸಂಗ್ರಹಣೆಗಾಗಿ ಸರ್ಕಾರ ಅವರಿಗೆ ಸಂಬಳ ಕೊಟ್ಟು ನೇಮಿಸಿಲ್ಲ ನಿಮ್ಮ ಸುರಕ್ಷತೆಯ ಜವಾಬ್ದಾರಿಯ ಹೊಣೆ ಹೊತ್ತವರು ಟ್ರಾಫಿಕ್ ಪೊಲೀಸರು.
ಅಪಘಾತವಾದಾಗ ಪೂರ್ಣ ಪ್ರಮಾಣದ ರಕ್ಷಣೆ ನೀಡುವ, ಐಎಸ್ಐ ಮಾರ್ಕ್ ಹೊಂದಿರುವ ಹೆಲ್ಮೆಟ್ ಗಳು ನಿಮ್ಮ ಜೀವ ರಕ್ಷಕಗಳು ಅಂತಹ ಹೆಲ್ಮೆಟ್ ಗಳನ್ನೇ ಧರಿಸಿ ವಾಹನ ಚಲಾಯಿಸಿ ಹಾಗೂ ನಿಮ್ಮ ಹಿಂಬದಿ ಸವಾರರಿಗೂ ಅಂತಹುದೇ ಪೂರ್ಣ ಹೆಲ್ಮೆಟ್ ಧರಿಸಿ ಪ್ರಯಾಣ ಆರಂಭಿಸಿ,ನಿಮ್ಮ ಪ್ರಯಾಣ ಸುರಕ್ಷಿತವಾಗಿರಲಿ ಎಂಬ ಅರಿವು ಮೂಡಿಸುವ ಕಾರ್ಯವನ್ನು ಈಗಾಗಲೇ ಟ್ರಾಫಿಕ್ ಪೊಲೀಸರು ಆರಂಭಿಸಿದ್ದಾರೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತು ಪೂರ್ಣ ಹೆಲ್ಮೆಟ್ ನ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಇನ್ನು ಕೆಲವೇ ತಿಂಗಳು ಗಳಲ್ಲಿ ಪೂರ್ಣ ಐಎಸ್ಐ ಹೆಲ್ಮೆಟ್ ಕಡ್ಡಾಯ ಎಂಬ ಆದೇಶವು ಬರಬಹುದು.
ಇದೆಲ್ಲವೂ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಸುರಕ್ಷತೆಗಾಗಿ ಎಂಬುದನ್ನು ಮನಗಂಡು ಯಾವುದೇ ಆದೇಶಕ್ಕಾಗಿ ಕಾಯದೆ, ಪೊಲೀಸರಿಗಾಗಿ ಹೆಲ್ಮೆಟ್ ಧರಿಸದೇ ನಮ್ಮ ಸುರಕ್ಷತೆಯ ಜವಾಬ್ದಾರಿಯನ್ನರಿತು ನಡೆಯೋಣ.