27.6 C
Bengaluru
Wednesday, December 6, 2023

ಕುರುಡು ಶ್ವಾನಕ್ಕೆ ಕಣ್ಣಾದ ಇನ್ಸ್ಪೆಕ್ಟರ್

Date:

ಬಂದೋಬಸ್ತ್ ವ್ಯವಸ್ಥೆನಾ ಪೊಲೀಸ್,
ರಕ್ಷಣೆಯ ಹೊಣೇನ ಪೊಲೀಸ್ ,
ವಿವಿಐಪಿ ಭದ್ರತೆನಾ ಪೊಲೀಸ್
ಸೆಲೆಬ್ರಿಟಿಗಳ ರಕ್ಷಣೇನಾ ಪೊಲೀಸ್

ಹೌದು ನಮ್ಮ ಜೀವನದಲ್ಲಿ ನಾವು ಯಾವುದೇ ಸಹಾಯ ಅಪೇಕ್ಷಿಸಿದರೂ ನಾವು ಅದಕ್ಕೆ ಮೊದಲು ಯೋಚಿಸುವುದೇ ಪೊಲೀಸರಿಗೆ ಕರೆ ಮಾಡಲು, ಅದೇ ರೀತಿ ಶಿವಾಜಿನಗರ ನಿವಾಸಿಯಾಗಿರುವ ರಮ್ಯಾರವರು ತಮ್ಮ ಶ್ವಾನವೊಂದು ಇದ್ದಕ್ಕಿದ್ದಂತೆ ಕಾಣೆಯಾದಾಗ ಮೊದಲು ದೂರು ನೀಡಲು ಬಂದಿದ್ದು ಕಮರ್ಷಿಯಲ್ ಠಾಣೆಗೆ. ಮನುಷ್ಯ ಕಾಣೆಯಾದರೆ ದೂರು ನೀಡುವುದು ಸಹಜ , ಆದರೆ ಶ್ವಾನ ಪತ್ತೆಗೂ ಪೊಲೀಸರ ಮೊರೆ ಹೋಗೋದಾ ಅಂದ್ರೆ ಹೌದು.

ಶ್ವಾನ ಪ್ರೀತಿ ಅದೊಂದು ಮನುಷ್ಯನೊಡನೆ ಶ್ವಾನಕ್ಕಿರುವ ಅವಿನಾಭಾವ ಸಂಬಂಧವನ್ನು ಸೂಚಿಸುತ್ತೆ.
ಮನೆಯ ಮಗುವಿನಂತೆ ರಮ್ಯಾರವರು ತಮ್ಮ ಮನೆಯಲ್ಲಿ ಹಸ್ಕಿ ಜಾತಿಗೆ ಸೇರಿದ ಶ್ವಾನವನ್ನು ಸಾಕಿಕೊಂಡಿದ್ದರು. ತಮ್ಮ ಕುಟುಂಬ ಸದಸ್ಯನೊಬ್ಬ ಕಾಣೆಯಾದಂತೆ ಗಾಬರಿಯಿಂದ ಠಾಣೆಗೆ ದೂರು ನೀಡಲು ಬಂದಿದ್ದರು, ಕಮರ್ಷಿಯಲ್ ಠಾಣೆಯ ಇನ್ಸ್ಪೆಕ್ಟರ್ ಆಗಿರುವಂತ ಚೌಧರಿ ಯವರು ಇದು ನಮ್ಮ ಕಾರ್ಯವಲ್ಲ, ಇದು ನಮ್ಮಿಂದ ಸಾಧ್ಯವಿಲ್ಲ ಎಂದು ಎಂದು ದೂರುದಾರರನ್ನು ನಿರಾಶೆಗೊಳಿಸದೆ ಅವರ ದೂರನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿತ್ತಾರೆ ಆಗ ದೂರುದಾರರಾದ ರಮ್ಯಾರವರು ನಮ್ಮ ಶ್ವಾನ ಕಾಣೆಯಾಗಿದ್ದು ಅದಕ್ಕೆ ಕಣ್ಣು ಕಾಣುವುದಿಲ್ಲ, ದಯಮಾಡಿ ಅದನ್ನು ಹುಡುಕಿ ಕೊಡಿ ಎಂದು ಕೇಳಿಕೊಳ್ಳುತ್ತಾರೆ, ಅದನ್ನು ಕೇಳಿದ ಇನ್ಸ್ಪೆಕ್ಟರ್ ಕಣ್ಣಿಲ್ಲದ ಶ್ವಾನದ ಸ್ಥಿತಿಯನ್ನು ಅವಲೋಕಿಸಿ, ಅದನ್ನು ಹುಡುಕುವ ನಿರ್ಧಾರ ಮಾಡುತ್ತಾರೆ, ಕೇವಲ ನಿರ್ಧಾರ ಮಾಡದೆಯೇ ಅದಕ್ಕೆ ಬೇಕಾದ ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಾರೆ. ಶ್ವಾನದ ಪತ್ತೆಗಾಗಿ ಬರೋಬ್ಬರಿ 75 ಸಿಸಿ ಕ್ಯಾಮೆರಾ ಗಳ ಪರಿಶೀಲನೆ ನಡೆಸಿ ಸತತ ಪರಿಶ್ರಮ ಹಾಗೂ ಕಾಳಜಿಯಿಂದ ಅಂdaಶ್ವಾನವನ್ನು ಪತ್ತೆಹಚ್ಚುವಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಯಶ್ವಸಿಯಾಗಿದ್ದರೆ. ತಮ್ಮ ಶ್ವಾನವನ್ನು ಮರುಕಳಿಸಿ ಹುಡುಕಿಕೊಟ್ಟ ಪೊಲೀಸರಿಗೆ ದೂರುದಾರರು ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

Read This As well: ಮರಣ ಸಮಯದಿ ಹೆಗಲು ಕೊಡುವಾತ ಬಂಧು

ಜನರ ಮಾನ ಪ್ರಾಣ ರಕ್ಷಣೆಯ ಹೊಣೆಯ ಜೊತೆಗೆ ಶ್ವಾನದ ರಕ್ಷಣೆಯು ನಮ್ಮ ಹೊಣೆ ಎಂಬಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನಡೆದುಕೊಂಡಿದ್ದಾರೆ. ಕುರುಡು ಶ್ವಾನಕ್ಕೆ ಮರಳಿ ತನ್ನ ವಾರಸುದಾರರನ್ನು ದೊರಕಿಸಿಕೊಡುವ ಮುಖೆನ ಅಂದ ಶ್ವಾನಕ್ಕೆ ಕಣ್ಣಾಗಿದ್ದಾರೆ ಇನ್ಸ್ಪೆಕ್ಟರ್ ಚೌಧರಿ ಯವರು.

Latest Stories

LEAVE A REPLY

Please enter your comment!
Please enter your name here