ಇಡೀ ವಿಶ್ವವೇ ಒಂದು ಕುಟುಂಬ ಎಂಬ ಅರ್ಥವನ್ನು ನೀಡುತ್ತದೆ. ಇದೊಂದು ಸುಂದರ ಅರ್ಥವನ್ನು ನೀಡುವ ಈ ಸಂದೇಶ ವಿಶ್ವ ಮಾನವ ಸಂದೇಶ ರವಾನಿಸುತ್ತದೆ. ನಾವು ಕೆಲಸ ಮಾಡುವ ಸ್ಥಳ ನಮಗೆ ಪ್ರಶಾಂತತೆಯ ವಾತಾವರಣ ನೀಡಬೇಕು, ಆಗ ಮಾತ್ರ ಕೆಲಸ ಮಾಡಲು ಹುಮ್ಮಸ್ಸು, ಉತ್ಸಾಹ, ಪ್ರೇರಣೆ ದೊರೆಯುತ್ತದೆ.
ಪೊಲೀಸ್ ಎಂದರೆ ಯಾವುದೇ ಮತ ಜಾತಿ ವರ್ಣ ಭೇದವಿಲ್ಲದೆ ನ್ಯಾಯಾಂಗದ ರಕ್ಷಣೆಗಾಗಿ, ನ್ಯಾಯದ ನಿರೀಕ್ಷೆ ಹೊತ್ತು ಬಂದವರ ರಕ್ಷಣೆಗೆ ಸದಾ ಸಿದ್ದ ಎಂಬ ನಿಯಮಕೋಲಪಟ್ಟವರು, ನಾವೆಲ್ಲರೂ ಒಂದಾಗಿ ಸಮಾಜದ ಜನರ ಮಾನ ಪ್ರಾಣ ರಕ್ಷಣೆಗೆ ಕಟಿ ಬದ್ಧರಾಗಿರೋಣ ಎಂಬ ಬದ್ಧತೆಗೆ ಒಳಪಟ್ಟವರು ಪೊಲೀಸರು. ಪೊಲೀಸ್ ಇಲಾಖೆ ಎಂದರೆ ಇದೊಂದು ತುಂಬು ಕುಟುಂಬ ಎಂಬ ಸಂದೇಶ ರವಾನಿಸಿರುವವವರು ಹನುಮಂತನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿನೋದ್ ಭಟ್ ರವರು .ಪೊಲೀಸ್ ಸಿಬ್ಬಂದಿಗಳಿಗೂ ಕುಟುಂಬದ ಭಾವನೆ ಮೂಡಿಸಿ, ಅವರಲ್ಲಿನ ಆತ್ಮ ವಿಶ್ವಾಸ ಹೆಚ್ಚಳಕ್ಕೆ ಇನ್ಸ್ಪೆಕ್ಟರ್ ಸಾತ್ ನೀಡಿದವರು ವಿವಿಪುರಂ ಸಬ್ ಡಿವಿಷನ್ ಎಸಿಪಿ ನಾಗರಾಜ್ ರವರು.
ಹನುಮಂತ ನಗರ ಠಾಣೆಯ ಇನ್ಸ್ಪೆಕ್ಟರ್ ವಿನೋದ್ ಭಟ್ ರವರು ತಮ್ಮ ಠಾಣೆಯ ಇಬ್ಬರು ಮಹಿಳಾ ಸಿಬ್ಬಂದಿಯವರ ಸೀಮಂತ ಶಾಸ್ತ್ರವನ್ನು ಅವರೂ ನಮ್ಮ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳು ಅವರಿಗೆ ಒಳಿತಾಗಲಿ ಎಂದು ಹರಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿ, ಸಿಬ್ಬಂದಿಗಳಾದ ಶ್ರೀ ಮತಿ ನೀಲವ್ವ ಹಾಗೂ ಶ್ರೀಮತಿ ಪ್ರಿಯಾಂಕಾ ಪಾಟೀಲ್ ರವರಿಗೆ ಎಸಿಪಿ ನಾಗರಾಜ್ರವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
Read This Aswell: ಪೊಲೀಸ್ ಇನ್ಸ್ಪೆಕ್ಟರ್ ಇಂದ ಪುನರ್ಜನ್ಮ
ತಮಗಿರುವ ಒತ್ತಡದ ಕೆಲಸದ ನಡುವೆಯೂ ಸಿಬ್ಬಂದಿಗಳ ಒಳಿತನ್ನು ಶ್ರೇಯೋಭಿಲಾಷೆಯನ್ನು ಬಯಸುವುದನ್ನು ಇನ್ಸ್ಪೆಕ್ಟರ್ ಮರೆಯಲಿಲ್ಲ. ಮಹಿಳಾ ಸಿಬ್ಬಂದಿಗೆ ಹಾಗೂ ಅವರ ಗರ್ಭ ದೊಳಗಿನ ಮಗುವಿಗೆ ಒಳಿತಾಗಲಿ ಎಂದು ಹಾರೈಸಿ ಆಶೀರ್ವದಿಸಿ ಸೀಮಂತ ಕಾರ್ಯವನ್ನು ಸಿಬ್ಬಂದಿಗಳೊಡಗೂಡಿ ನಡೆಸಿದ್ದಾರೆ.ಈ ಕಾರ್ಯದಲ್ಲಿ ಹನುಮಂತ ನಗರ ಠಾಣೆಯ ಸಿಬ್ಬಂದಿಗಳೆಲ್ಲ ಒಟ್ಟಾಗಿ ನೆರವೇರಿಸಿದ್ದಾರೆ.