ಪೊಲೀಸ್ ಇಲಾಖೆ ಎಂದರೆ ಬಹಳ ಶಿಸ್ತಿನ ಇಲಾಖೆ. ಇಲಾಖೆಯಲ್ಲಿ ಕೆಲಸ ಮಾಡುವವರೆಲ್ಲರೂ ಶಿಸ್ತಾಗಿರುವುದು ಸಹಜ ಹಾಗೂ ಕಡ್ಡಾಯ. ಇವರ ಕಡ್ಡಾಯತೆಯಿಂದಾಗಿ ಇವರ ನಡವಳಿಕೆಯು ಬಹಳ ನಿಷ್ಟೂರ ವಾಗಿರುತ್ತದೆ ಅದು ಸಾಮಾನ್ಯ, ಅದರಿಂದಾಗಿಯೇ ಅತಿ ಹೆಚ್ಚು ದೂರು, ನಿಕೃಷ್ಟತೆ, ಕಠೋರತೆ.
ಆದರೆ ಹಾಗೆಂದು ಇವರು ಮಾನವೀಯತೆಯೇ ಇಲ್ಲದ, ಮನುಷ್ಯತ್ವ ಮರೆತವರಲ್ಲ. ಅದನ್ನು ಈಗಾಗಲೇ ಅನೇಕರು ರುಜುವಾತು ಪಡಿಸಿದ್ದಾರೆ. ಅತೀ ಹೆಚ್ಚು ಮಾನವೀಯ ಗುಣಗಳುಳ್ಳ, ಸಮಾಜಮುಖಿ ಕಾರ್ಯಗಳನ್ನು ಮಾಡುವವರು ಈ ನಮ್ಮ ಪೊಲೀಸರೇ ಅದಕ್ಕೆ ಮತ್ತೊಂದು ಮಾದರಿ, ಉದಾಹರಣೆ ಎಚ್. ಡಿ . ಕೋಟೆ ಸಿಪಿಐ ಶಬ್ಬೀರ್ ಹುಸೇನ್.
ಹೆಚ್.ಡಿ.ಕೋಟೆ ವ್ಯಾಪ್ತಿಯ ಕಲ್ಲುಕಟ್ಟೆ ಗ್ರಾಮದಲ್ಲಿ ಹುಲಿ ದಾಳಿಗೆ ಬಾಲಕನೊಬ್ಬ ಬಲಿಯಾಗುತ್ತಾನೆ. ಈ ಘಟನೆಯಿಂದ ಗ್ರಾಮಸ್ಥರು ಕೆರಳಿದ್ದರು, ಅರಣ್ಯ ಇಲಾಖೆಯ ವಿರುದ್ಧ ಸಿಡಿದೆದ್ದಿದರು, ಸ್ಥಳದಲ್ಲಿ ಭಿಗುವಿನ ವಾತಾವರಣ ಸೃಷ್ಟಿಯಾಗಿತ್ತು .ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಹೆಚ್.ಡಿ. ಕೋಟೆಯ ಸಿಪಿಐ ಶಬೀರ್ ಹುಸೈನ್ ಕುಟುಂಬಸ್ಥರನ್ನು ಗ್ರಾಮಸ್ಥರನ್ನು ಸಂತೈಸಿ, ಶಾಸಕ ಚಿಕ್ಕ ಮಾಧು ರವರ ಮುಖೆನ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸುವ ಭರವಸೆಯೊಂದಿಗೆ ಪರಿಸ್ಥಿತಿ ತಿಳಿಗೊಳಿಸಿ ಮಗುವಿನ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಸುತ್ತಾರೆ. ಕರ್ತವ್ಯ ನಿಷ್ಠೆಯೊಂದಿಗೆ ಮಾನವೀಯ ಕಾರ್ಯಕ್ಕೆ ಸಿಪಿಐ ಕೈ ಜೋಡಿಸುತ್ತಾರೆ. ಖಾಕಿಯೊಳಗಿನ ಮಾನವೀಯತೆ ಕುಟುಂಬಸ್ಥರ ಆಕ್ರಂದನ ಕಂಡು ಮಮ್ಮಲ ಮರುಗಿದೆ, ತಮ್ಮ ಎಲ್ಲಾ ಕೆಲಸ ಬದಿಗಿಟ್ಟು ಕುಟುಂಬದ ಸಂಕಟದಲ್ಲಿ ಭಾಗಿಯಾಗಿದ್ದಲ್ಲದೆ, ತಾನು ಬಂದಿರುವುದು ಕೆಲಸ ನಿಮಿತ್ತ ಕೆಲಸ ಮುಗಿಸಿ ಹೊರಡುವ ಎಂಬ ಧಾವಂತ ತೋರದೆ ಕುಟುಂಬದ ಒಬ್ಬ ಸದಸ್ಯನಂತೆ, ಅವರ ಜೊತೆಯೇ ಇದ್ದುಕೊಂಡು ಅವರನ್ನು ಸಂತೈಸಿ ಮಗುವಿನ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
ಯಾವುದೇ ಜಾತಿ,ಮತ, ಕುಲ ಪರಿಗಣಿಸದೆ ಮಗುವಿನ ಅಂತ್ಯ ಕ್ರಿಯೆಯಲ್ಲಿ ತಮ್ಮ ಹೆಗಲು ಕೊಟ್ಟು ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಸಿಪಿಐರ ಈ ಮಾನವೀಯ ಗುಣಕ್ಕೆ ಗ್ರಾಮದ ಜನತೆ ಮೂಕ ವಿಸ್ಮಿತರಾಗಿದ್ದರೆ.
ಮತ್ತೊಂದು ಪ್ರಕರಣದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ದಿಂದಾಗಿ ರಸ್ತೆಗಳಲ್ಲಿ ಗುಂಡಿ ಬಿದ್ದು ವಾಹನ ಸವಾರರು ಅನೇಕರು ಗುಂಡಿಗಳಿಂದಾಗಿ ಬಿದ್ದು ಗಾಯ ಮಾಡಿಕೊಳ್ಳುತ್ತಿರುವುದು ಹೆಚ್ಚಾಗಿದ್ದು ಇದರಿಂದ ಯಾವುದೇ ಕ್ರಮ ವಹಿಸದ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಬಂದ ಗ್ರಾಮಸ್ಥರ ಮನ ಒಲಿಸಿ ಗ್ರಾಮದ ಯುವಕರ ಸಹಾಯದೊಂದಿಗೆ ತಾವೂ ಗ್ರಾಮಸ್ಥರ ಜೊತೆಗೂಡಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ್ದಲ್ಲದೆ, ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿ ಯಾಗಿದ್ದಾರೆ.
Read More: ಪೊಲೀಸ್ ಇಲಾಖೆಯಲ್ಲಿ ಲೇಡಿ ಸಿಂಗಂ ನಂತೆ ಕಾರ್ಯ ನಿರ್ವಹಿಸಿದ್ದ ಧೈರ್ಯವಂತೆ ಕಾವ್ಯ ಇನ್ನಿಲ್ಲ.
ಸಿಪಿಐ ರ ಈ ಕಾರ್ಯವೈಖರಿಯನ್ನು ಗ್ರಾಮಸ್ಥರು ತುಂಬು ಹೃದಯದಿಂದ ಹೊಗಳಿ ಹಾರೈಸಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯ ಮೌಲ್ಯಗಳ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.