26.9 C
Bengaluru
Saturday, January 25, 2025

ಬೆಂಗಳೂರನ್ನು ಹಾರ್ಟ್ -ಸ್ಮಾರ್ಟ್ ಸಿಟಿ ಮಾಡಲು ಮಣಿಪಾಲ್ ಹಾಸ್ಪಿಟಲ್ ಹಾಗೂ ಬೆಂಗಳೂರು ಸಂಚಾರ ಪೊಲೀಸರ ಸಮನ್ವಯತೆ

Date:

ಮಣಿಪಾಲ್ ಹಾಸ್ಪಿಟಲ್ ಮತ್ತು ಬೆಂಗಳೂರು ಸಂಚಾರ ಪೋಲೀಸ್‌ – ಸಹಕಾರದೊಂದಿಗೆ ಇಂದು ಸಂಚಾರ ಪೊಲೀಸರಿಗೆ ಸಿಪಿಆರ್ ಟೈನಿಂಗ್ ನೀಡುವುದರ ಮುಖೇನ `ಗಾರ್ಡಿಯನ್ ಆಫ್ ದಿ ಹಾರ್ಟ್ 20′ ಅಭಿಯಾನದ ಮೊದಲ ಹಂತಕ್ಕೆ ಚಾಲನೆ ನೀಡಲಾಯಿತು.
ಬೆಂಗಳೂರಿನ ಸುಮಾರು 40 ಟ್ರಾಫಿಕ್ ಸಿಗ್ನಲ್ಗಳಲ್ಲಿ ಹೃದಯದ ಆಕಾರದ ಚಿಹ್ನೆಗಳ ಜೊತೆಗೆ ಈ ಪ್ರತಿಯೊಂದು ಸಿಗ್ನಲ್ಗಳಲ್ಲಿ 5OS QR ಕೋಡ್ ಸೂಚನಾ ಫಲಕವನ್ನು ಅಳವಡಿಸುವುದರ ಮಹತ್ವವನ್ನು ಸಾರಲಾಯಿತು. ಈ ಕಾರ್ಯಕ್ರಮವನ್ನು ಶ್ರೀ ಎಂ.ಎನ್‌. ಅನುಚೇತ್, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು, ಸಂಚಾರ, ಬೆಂಗಳೂರು ನಗರ ರವರು ಉದ್ಘಾಟಿಸಿದರು ಸುಮಾರು 40 ಟ್ರಾಫಿಕ್ ಪೊಲೀಸ್‌ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ನೆರವನ್ನು ಸುಲಭವಾಗಿ ಪಡೆಯಲು SOS QR ಕೋಡ್ ಸ್ಟಿಕರ್ ಗಳೊಂದಿಗೆ CPR ತರಬೇತಿ ಮತ್ತು ಸರ್ಟಿಫಿಕೇಷನ್‌ ಗಳನ್ನು ಪಡೆದರು.

ಬೆಂಗಳೂರು ಸಿಟಿ ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಎಂ.ಎನ್. ಅನುಚೇತ್, ಐ.ಪಿ.ಎಸ್ ಅವರು ಮಾತನಾಡಿ, ಟ್ರಾಫಿಕ್ ಲೈಟ್ಗಳನ್ನು ಹೃದಯದ ಆಕಾರಗಳಿಗೆ ಬದಲಾಯಿಸಿರುವುದು ಸಾಂಕೇತಿಕವಾಗಿ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುವವರೆಗೆ ತಾಳ್ಮೆಯಿಂದ ಕಾಯಲು ಜನರನ್ನು ಪ್ರೋತ್ಸಾಹಿಸುವುದು ಮತ್ತು ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಂತಿರುವಾಗ ಬೇಕಾಗುವ ತಾಳ್ಮೆ ಮತ್ತು ಜವಾಬ್ದಾರಿಯುತ ನಡವಳಿಕೆಯ ಅಗತ್ಯದ ಅರಿವು ಮೂಡಿಸುವುದಾಗಿದೆ ಎಂದು ಒತ್ತಿ ಹೇಳಿದರು.

Read This Also: *ಬೆಂಗಳೂರು ಟ್ರಾಫಿಕ್ ಪೊಲೀಸರ ಸಾಮಾಜಿಕ ಕಳಕಳಿ*

ಬೆಂಗಳೂರಿನ ಎಲ್ಲಾ ಇತರ ಸ್ಥಳಗಳಲ್ಲಿ ತುರ್ತು ಸಂದರ್ಭದ ಸ್ಥಿತಿಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಲು ಸಹಾಯ ಮಾಡಲು ನಗರದ ಇತರ ಪ್ರಮುಖ ಸಿಗ್ನಲ್ಗಳಿಗೆ ಈ OR ಕೋಡ್. ಉಪಕ್ರಮವನ್ನು ವಿಸ್ತರಿಸಲು ಮಣಿಪಾಲ್ ಆಸ್ಪತ್ರೆಗಳಿಗೆ ಜಂಟಿ ಪೊಲೀಸ್ ಆಯುಕ್ತರು, ಸಂಚಾರವರು. ಸೂಚಿಸಿದರು. ಎಲ್ಲಾ ಪ್ರಮುಖ ಸಿಗ್ನಲ್‌ಗಳು ಈ ಕ್ಯೂಆರ್ ಕೋಡ್ ಅನ್ನು ಸ್ಥಾಪಿಸುವ ಮೂಲಕ ರಸ್ತೆಯಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಅಪಘಾತದಲ್ಲಿ ಆಂಬ್ಯುಲೆನ್ಸ್‌ ಅನ್ನು ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಡಾ ರಂಜನ್ ಶೆಟ್ಟಿ, ಹೆಚ್.ಓ.ಡಿ ಮತ್ತು ಕನ್ಸಸ್ಟೆಂಟ್ – ಇಂಟರ್ವೆನಲ್‌ ಕಾರ್ಡಿಯಾಲಜಿ, ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು, ಇವರು ಮಾತನಾಡಿ, “ಈ QR ಕೋಡ್: ಮಣಿಪಾಲ್ ಆಸ್ಪತ್ರೆಗಳ ಒಂದು ವಿಶಿಷ್ಟವಾದ ಉಪಕ್ರಮವಾಗಿದೆ ಮತ್ತು ಡಿಜಿಟಲೀಕರಣ ಮತ್ತು ಸುಧಾರಿತ ರಸ್ತೆ ಸುರಕ್ಷತೆಗೆ ಇದು ಉತ್ತಮ ಉದಾಹರಣೆಯಾಗಿದೆ. ನಾವು ಸಿಪಿಆರ್ ಬಗ್ಗೆ ಪ್ರತಿಯೊಬ್ಬ ಸಂಚಾರಿ ವಿಭಾಗದ ಅಧಿಕಾರಿಗಳಿಗೆ ಸಕ್ರೀಯವಾಗಿ ತರಬೇತಿ ನೀಡುತ್ತಿದ್ದೇವೆ. ಇದರಿಂದ ಅವರು ಈ ವಿಷಯದಲ್ಲಿ ಪರಿಣಿತರಾಗುತ್ತಿದ್ದಾರೆ.

Latest Stories

LEAVE A REPLY

Please enter your comment!
Please enter your name here