ಅರೆ ಇದೇನು ಟಿಪ್ಪು ಸುಲ್ತಾನ್ ಎಂಬ ಕನ್ನಡಿಗನೇ ಎಂದು ಅಚ್ಚರಿಯಾಯ್ತೆ ಹೌದು, ಟಿಪ್ಪು ಸುಲ್ತಾನ್ ನಾಯಕ್ವಾಡಿ ನಮ್ಮ ಹೆಮ್ಮೆಯ ಕನ್ನಡಿಗ ಎಂದರೆ ಖಂಡಿತಾ ತಪ್ಪಾಗಲಾರದು, ಮುಸ್ಲಿಮನಾಗಿ ಹುಟ್ಟಿದರೂ ಉರ್ದು ಮಾತೃ ಭಾಷೆಯಾಗಿದ್ದರೂ ಇವರಿಗೆ ಕನ್ನಡದ ಮೇಲಿರುವ ಪ್ರೇಮ ಅಪಾರ. ಅದು ಹೇಗೆ ಅಂದ್ರಾ!ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಮಾತನಾಡಲು ಕನ್ನಡ ಮಾದ್ಯಮದಲ್ಲಿ ಕಲಿಯಲು ಹಿಂದೇಟು ಹಾಕುವ ಹಲವರ ನಡುವೆ, ಕನ್ನಡ ಮಾದ್ಯಮದಲ್ಲೇ ಎರೆಡೆರಡು ಮಾಸ್ಟರ್ ಡಿಗ್ರಿ ಪಡೆದುಕೊಂಡಿರುವ ಟಿಪ್ಪು ಸುಲ್ತಾನ್ ಗಾಯಕವಾಡಿ ನಿಜವಾದ ಕನ್ನಡಿಗ, ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ರಾಜಕೀಯ ವಿಜ್ಞಾನ ದಲ್ಲಿ ಎಂ.ಎ ಪದವಿ ಪಡೆದಿರುವ ಟಿಪ್ಪು ಸುಲ್ತಾನ್ ಗಾಯಕ್ವಾಡಿ ಯವರು ಪ್ರಸ್ತುತ ಕಮ್ಯಾಂಡ್ ಸೆಂಟರ್ ನಲ್ಲಿ ಸೋಶಿಯಲ್ ಮೀಡಿಯಾ ಇಂಚಾರ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನವರಾದ ಇವರು ಚಿಕ್ಕಂದಿನಿಂದಲೂ ಸಾಕಷ್ಟು ಕನ್ನಡಾಭಿಮಾನವನ್ನ ಹೊಂದಿದ್ದವರು , 41 ನೇ ಬ್ಯಾಚ್ನ ಪಿಎಸ್ಐ ಆಗಿ ಆಯ್ಕೆಯಾದ ಇವರು ಆಲ್ ರೌಂಡರ್ ಆಗಿ ಸಿಎಂ ಖಡ್ಗ ಪಡೆದುಕೊಂಡವರು. ಮಾನವ ಹಕ್ಕುಗಳು, ಭಾರತ ಸಂವಿಧಾನ, ಸಾಮಾಜಿಕ ನ್ಯಾಯ, ಸ್ಥಳೀಯ ಮತ್ತು ವಿಶೇಷ ಕಾಯ್ದೆಗಳು ಇವುಗಳ ಬಗ್ಗೆ ಸಂಪನ್ಮೂಲ ತಜ್ನ್ಯ ನಾಗಿ ಕೆಎಎಸ್, ಎಸಿ,ಬಿಇಸಿ, ಹುದ್ದೆಗಳ ಅಧಿಕಾರಿಗಳಿಗೆ ಈ ಸಣ್ಣ ವಯಸ್ಸಿನ ಪ್ರಬುದ್ಧ ವ್ಯಕ್ತಿತ್ವ ಹಾಗೂ ಭಾಷಾ ಜ್ಞಾನ ವಿರುವ ಟಿಪ್ಪು ಸುಲ್ತಾನ ರವರು ಪಾಠ ಮಾಡುತ್ತಾರೆ ಅಂದರೆ ಇವರ ಅಗಾಧ ಜ್ಞಾನ ಶಕ್ತಿಯನ್ನು ಪ್ರಶಂಸಿಸಲೇ ಬೇಕು, ಸಾಮಾಜಿಕ ಕಳಕಳಿಯನ್ನು ಹೊಂದಿರುವ ಈ ಪಿಎಸ್ಐ ತಮ್ಮ ಬಿಡುವಿನ ಸಮಯದಲ್ಲಿ ಕಾನ್ಸ್ಟೇಬಲ್ಗಳಿಗೆ ಪಾಠ ಮಾಡಿ ಆ ಕಾನ್ಸ್ಟೇಬಲ್ಗಳು ಪಿಎಸ್ಐ ಆಗಿ ಬಡ್ತಿ ಹೊಂದಲು ಸಹಕಾರಿಯಾಗಿದ್ದಾರೆ. ಇವರ ಬಳಿ ಪಾಠ ಕಲಿತ 15-20ಜನ ಪಿಎಸ್ಐ ಆಗಿ ಆಯ್ಕೆಯಾಗಿರುವುದು ಇವರಿಗೊಂದು ಹೆಮ್ಮೆಯ ಗರಿ.
ಅಪರಿಮಿತ ಕನ್ನಡಾಭಿಮಾನವನ್ನು ಹೊಂದಿರುವ ಟಿಪ್ಪು ಸುಲ್ತಾನ್ ರವರು ಯಂಗ್ ವಿಷನ್ ಎಂಬ NGO ಸ್ಥಾಪಿಸಿ ಅದರ ಮುಖೆನ ಹಲವು ಕವಿಗೋಷ್ಠಿಗಳನ್ನು ಆಯೋಜನೆ ಮಾಡಿದ್ದಾರೆ, ngo ಮುಕೇನ ಕನ್ನಡ ವೈಚಾರಿಕತೆ ಬೆಳೆಸುವ ಹಾಗೂ ಇದರ ಮುಖೆನ ಹಲವು ಶಾಲಾ ಮಕ್ಕಳಿಗೆ, ಶ್ರಮಿಕ ವರ್ಗದವರಿಗೆ, ಬಡವರಿಗೆ ನೆರವಾಗಿದ್ದಾರೆ.
Read This:ವಸುದೈವ ಕುಟುಂಬಕಂ
ಹೆಣ್ಣಿನ ಮೇಲಿನ ಶೋಷಣೆ, ತಾಯಿಯ ಕುರಿತ ವಿಶೇಷ ಕವನ ಸಂಕಲನ ಗರ್ಭ ಗೋರಿ ಬಿಡುಗಡೆಗೆ ಸಜ್ಜಾಗಿದೆ. ಇವರ ಈ ಕನ್ನಡಾಭಿಮಾನ ಇವರ ಮನೆಯಿಂದಲೇ ನಡೆದು ಬಂದದ್ದು ಎಂದರೆ ನಂಬಲೇಬೇಕಾದ ಸಂಗತಿ ಇವರ ಕುಟುಂಬದ ಪ್ರತಿಯೊಬ್ಬರೂ ಸ್ಪಷ್ಟವಾಗಿ ಕನ್ನಡ ಮಾತನಾಡುವ ಕನ್ನಡಾಭಿಮಾನಿಗಳು, ಇವರ ಕುಟುಂಬದ ಇನ್ನೊಂದು ವಿಶೇಷವೆಂದರೆ ಇವರ ತಾತ ಮುತ್ತಾತರ ಕಾಲದಿಂದಲೂ ಅಂದರೆ ಬ್ರಿಟಿಷ್ ಆಡಳಿತ ವ್ಯವಸ್ಥೆಯ ಕಾಲದಿಂದಲೂ ಇವರ ಪರಿವಾರ ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಇವರ ತಂದೆ, ತಾತ, ಮುತ್ತಾತ ಎಲ್ಲರು ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸಿ ನಿವೃತ್ತರಾದವರೇ, ಪ್ರಸ್ತುತ ಇವರ ಸಹೋದರಿ ಹಾಗೂ ಇವರು ಪೊಲೀಸ್ ಇಲಾಖೆಗೆ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಹೋದರಿ ಅಭಕಾರಿ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದಾರೆ. ಇವರು ಪ್ರಸ್ತುತ ಪಿಎಸ್ಐ ಆಗಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಅಪ್ರತಿಮ ಜ್ಞಾನ ಕೌಶಲ್ಯದ, ಅಪ್ಪಟ ಕನ್ನಡಾಭಿಮಾನಿ, ಹೆಮ್ಮೆಯ ಕನ್ನಡಿಗ ಟಿಪ್ಪುಎಸುಲ್ತಾನ್ ಗಾಯಕ್ವಾಡ್. ಈ ಹೆಮ್ಮೆಯ ಕನ್ನಡಿಗನಿಗೆ ನಮ್ಮದೊಂದು ಸಲ್ಯೂಟ್.