ಬೈಕ್ ರಿಪೇರಿ ಮಾಡದ್ದಕ್ಕೆ ಕೋಪ; ಷೋರೂಮ್ ಗೆ ಬೆಂಕಿ ಇಟ್ಟ ಭೂಪ!

0
153

ಕೆಟ್ಟಿದ್ದ ಬೈಕ್ ಸರಿಯಾಗಿ ರಿಪೇರಿ ಮಾಡಿಕೊಡದೆ ಇದ್ದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಬೈಕ್ ಷೋರೂಮ್ ಗೇ ಬೆಂಕಿ ಇಟ್ಟಿದ್ದಾನೆ. ಕಲಬುರಗಿ ನಗರದ ಹುಮನಾಬಾದ್ ಮುಖ್ಯ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಷೋರೂಮ್ ನಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಹಲವು ಬೈಕ್ ಗಳು, ವಸ್ತುಗಳು ಸುಟ್ಟು ಭಸ್ಮವಾಗಿವೆ. ಮಹಮದ್ ನದೀಮ್ ಎಂಬಾತನೇ ಈ ಕೃತ್ಯ ಎಸಗಿರುವಾತ.. ಓಲಾ ಷೋರೂಮ್ ನಲ್ಲಿ ನದೀಮ್ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿದ್ದ.. ಅದೂ ದುರಸ್ತಿಗೆ ಬಂದಿತ್ತು.

ಷೋರೂಮ್ ನವರು ಸರಿಯಾಗಿ ಸ್ಪಂದನೆ ಮಾಡಿಲ್ಲವಂತೆ.. ಹೀಗಾಗಿ ಮಂಗಳವಾರ ಬಂದು ಜಗಳ ತೆಗೆದಿದ್ದಾನೆ.. ಈ ವೇಳೆ ಕೋಪ ನೆತ್ತಿಗೀರಿ ಪೆಟ್ರೋಲ್ ಸುರಿದು ಷೋರೂಮ್ ಗೆ ಬೆಂಕಿ ಹಚ್ಚಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ವೆಂಕಿ ನಂದಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here