ಅದೊಂದು ಪ್ರತಿಷ್ಠಿತ ಬ್ರಾಂಡ್‌ನ ಐಸ್‌ಕ್ರೀಂ.. ಹೆಸರು ಅರಿಕೋ ಕೆಫೆ ಐಸ್‌ಕ್ರೀಮ್ ಪಾರ್ಲರ್ (Ariko Cafe Ice cream Parlour).. ಹೈದರಾಬಾದ್‌ನಲ್ಲಿರುವ ಈ ಕೆಫೆ ತುಂಬಾನೇ ಫೇಮಸ್.. ಆದ್ರೆ ಈ ಐಸ್‌ಕ್ರೀಮ್ ಕೆಫೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಇಟ್ಟಿದ್ದರು.. ಆಗ ಅವರಿಗೆ ಕಾಣಿಸಿದ ದೃಶ್ಯ ಅವರನ್ನೇ ದಂಗುಬಡಿಸಿತ್ತು.
ಈ ಕೆಫೆಯಲ್ಲಿ ಐಸ್‌ಕ್ರೀಂನಲ್ಲಿ ವಿಸ್ಕಿ ಬೆರೆಸಿ ಮಾರಾಟ ಮಾಡುತ್ತಿದ್ದುದು ಕಂಡುಬಂದಿದೆ.. ಇದನ್ನು ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳು ಶಾಕ್ ಆಗಿದ್ದಾರೆ.. ಹಲವಾರು ಬಗೆಯ ಐಸ್‌ಕ್ರೀಮ್‌ಗಳಿಗೆ ಅಂಗಡಿ ಮಾಲೀಕರು ವಿಸ್ಕಿ ಬೆರೆಸಿ ಮಾರಾಟ ಮಾಡುತ್ತಿದ್ದರು.. ಇದು ಕಾನೂನು ಬಾಹಿರವಾಗಿದೆ. ಜೊತೆಗೆ ಇದನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ವಿಸ್ಕಿ ಬೆರೆಸಿದ್ದ ಸುಮಾರು 23 ಬಗೆಯ ಐಸ್‌ಕ್ರೀಮ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.. ಅದನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.. ಮಾಲೀಕನ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.. ಒಂದು ಕಿಲೋ ಐಸ್‌ಕ್ರೀಮ್‌ಗೆ 60 ಎಂಎಲ್ ವಿಸ್ಕಿ ಬೆರೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.