ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಬಿಹಾರ ಮೂಲದ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಪ್ರಯಾಣಿಸುತ್ತಿದ್ದ ಕಾರು ಹಾಸನ ಬಳಿ ಅಪಘಾತಕೀಡಾಗಿದ್ದು, ಐಪಿಎಸ್ ಅಧಿಕಾರಿ ಹರ್ಷಬರ್ಧನ್ ರವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಬೇರೆ ಆಸ್ಪತ್ರೆಗೆ ಸಾಗಿಸಲೂ ಸಹ ಸಾದ್ಯವಾಗುತ್ತಿಲ್ಲವೆಂದು ಮಾಹಿತಿ ಲಭ್ಯವಾಗಿದ್ದು , ಐಪಿಎಸ್ ಅಧಿಕಾರಿ ಹರ್ಷವರ್ಧನ್ ರವರನ್ನು ದಾಖಲು ಮಾಡಲಾಗಿರುವ ಆಸ್ಪತ್ರೆ ಯಲ್ಲೇ ಹಾಸನ ಎಸ್ಪಿ ಮೊಹಮ್ಮದ್ ಸುಜಿತಾ ಖುದ್ದು ಹಾಜರಿದ್ದು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.
ಈಗ್ಗೆ ಕೆಲವು ಗಂಟೆಗಳ ಕೆಳಗೆ ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ರವರು ಆಸ್ಪತ್ರೆಗೆ ಭೇಟಿ ನೀಡಿ ಹರ್ಷವರ್ಧನ್ ರವರ ಆರೋಗ್ಯದ ಮಾಹಿತಿ ಪಡೆಯುತ್ತಿದ್ದಾರೆ.
ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕಾರು ಚಾಲಕ ಮಂಜೇಗೌಡಗೂ ಮುಂದುವರೆದ ಚಿಕಿತ್ಸೆ.
ಗಂಭೀರವಾಗಿ ಗಾಯಗೊಂಡಿರುವ ಹರ್ಷಬರ್ಧನ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದಾಗಿ ವೈದ್ಯರಿಂದ ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ರವರಿಗೆ ಮಾಹಿತಿ.
ಹಾಸನ ಎಸ್ಪಿಮೊಹಮ್ಮದ್ ಸುಜಿತಾ ಖುದ್ದು ಹಾಜರಿದ್ದು ಐಪಿಎಸ್ ಅಧಿಕಾರಿಯ ಆರೋಗ್ಯದ ವಿವರ ಪಡೆಯುತ್ತಿದ್ದು, ಐಪಿಎಸ್ ಅಧಿಕಾರಿ ಹರ್ಷಬರ್ದನ್ ಮೈಸೂರಿನಲ್ಲಿ ಐಜಿಪಿ ಭೇಟಿಯಾಗಿ ವಾಪಾಸ್ ಹಾಸನ ಕಡೆಯಿಂದ ಪ್ರಯಾಣಿಸುತ್ತಿದ್ದಾಗ ಕಾರು ಅಪಘಾತ ಎಂದು ಮೂಲಗಳಿಂದ ಮಾಹಿತಿ
ಬಿಹಾರ ಮೂಲದ ಐಪಿಎಸ್ ಅಧಿಕಾರಿ ಕಾರು ಅಪಘಾತದಲ್ಲಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳಿದಿದ್ದಾರೆ.
ಒಂದೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡಿದ್ದ 26ವರ್ಷದ ಯುವ ಐಪಿಎಸ್ ಅಧಿಕಾರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳಿದಿದ್ದಾರೆ.
ಯುವ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕಾರು ಅಪಘಾತದಲ್ಲಿ ದುರ್ಮರಣ
Date: