24.3 C
Bengaluru
Friday, April 25, 2025

ಪಾರಿವಾಳಗಳಿಂದ ‘ಅಸ್ತಮಾ’ ಭೀತಿ!

Date:

ಸಾಮಾನ್ಯವಾಗಿ ಪಾರಿವಾಳಗಳು ಕಾಳು ಕಡಿಗಳನ್ನು ಹುಡುಕಿಕೊಂಡು ಹೋಗುತ್ತವೆ.ಆದರೆ ಬೆಂಗಳೂರಿನ ವಿವಿ ಪುರಂ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾರಿವಾಳಗಳು ವಾಸ ಮಾಡುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ.ಉಸಿರಾಟದ ತೊಂದರೆ ಹಾಗೂ ಅಸ್ತಮಾ ಕಾಯಿಲೆಗಳು ಎದುರಾಗುತ್ತಿರುವ ಹಿನ್ನಲೆಯಲ್ಲಿ ಜನರು ಭೀತಿಯಿಂದ ಓಡಾಡುತ್ತಿದ್ದಾರೆ.ಹೌದು ವಿವಿ ಪುರಂ ನಿವಾಸಿಗಳಿಗೆ ಪಾರಿವಾಳಗಳಿಂದ ಸಂಕಷ್ಟ ಎದುರಾಗಿದೆ.

ಅನೇಕರು ಕಾಳು ಹಾಕುತ್ತಿರುವುದರಿಂದ ಸಾವಿರಾರು ಪಾರಿಗಳು ವಾಸ ಮಾಡುತ್ತಿವೆ. ಮನೆಗಳ ಬಳಿ ಪಕ್ಷಿಗಳ ಪುಕ್ಕ ಹಿಕ್ಕೆಯಿಂದ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಅಕ್ಕಪಕ್ಕದ ಮನೆಗಳಿಗೆ ಪಾರಿವಾಳಗಳಿಂದ ಇದೀಗ ಸಮಸ್ಯೆ ಎದುರಾಗಿದೆ. ಪಾರಿವಾಳಗಳ ಹಿಕ್ಕಿನಿಂದ ಅಸ್ತಮಾ ಹಾಗೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ.

ಸ್ಥಳೀಯ ನಿವಾಸಿಗಳಾದ ವೆಂಕಟೇಶ್ ಅವರು, ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಸಹ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನಮಗೆ ಪಾರಿವಾಳ ಪುಕ್ಕಗಳು ಹಾಗೂ ಹಿಕ್ಕೆಯಿಂದ ನಮಗೆ ಉಸಿರಾಟದ ತೊಂದರೆ ಉಂಟಾಗುತ್ತಿದ್ದು. ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಸಹ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು.

ಈ ಒಂದು ರಸ್ತೆಯನ್ನು ವಿಐಪಿ ಹಾಗು, ದೊಡ್ಡ ದೊಡ್ಡ ರಾಜಕಾರಣಿಗಳು ಓಡಾಡುವ ರಸ್ತೆ ಎಂದು ಹೇಳುತ್ತಾರೆ. ಆದರೆ ಇದೇ ರಸ್ತೆಯಲ್ಲಿ ಈ ಒಂದು ಪಾರಿವಾಳಗಳು ಇಷ್ಟು ಸಂಖ್ಯೆಯಲ್ಲಿ ಇದ್ದಿದ್ದನ್ನು ನೋಡಿ ಇಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈಗಾಗಲೇ ದಿನಕ್ಕೆ ಎರಡರಿಂದ ಮೂರು ಪಾರಿವಾಳಗಳು ಸಾಯುತ್ತವೆ ಅಲ್ಲದೆ ಇದರ ದುರ್ನಾಥ ದಿಂದ ಈ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಓಡಾಡೋಕು ಆಗುತ್ತಿಲ್ಲ. ಎಂದು ಇನ್ನೊಬ್ಬ ನಿವಾಸಿ ಅಂಬರೀಶ್ ಆರೋಪಿಸಿದರು.

Latest Stories

LEAVE A REPLY

Please enter your comment!
Please enter your name here