ಬದುಕಿನ ಬಂಡಿ ಎಳೆಯುವ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರನ್ನೇ ಅರಸಿ ಬಂದವರು ಅದೆಷ್ಟೋ ಮಂದಿ ಈರೀತಿ ಬದುಕ ಕಟ್ಟಿಕೊಳ್ಳಲು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದವರೂ ಅನೇಕರು. ಜನಸಂಖ್ಯೆ ಹೆಚ್ಚಿದಂತೆಲ್ಲಾ ಅಪರಾಧ ಪ್ರಕರಣಗಳೂ ಹೆಚ್ಚುತ್ತಲೇ ಇವೆ. ಆದರೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪಣತೊಟ್ಟವರು ನಮ್ಮ ಬೆಂಗಳೂರು ಪೊಲೀಸರು.
ವಿವಿಧ ಸಂಸ್ಕೃತಿ,ಭಾಷೆ , ಜನಾಂಗದ ವಿಭಿನ್ನ ಮನಸ್ಥಿತಿಯ ಜನರಿದ್ದರೂ ಅವರೆಲ್ಲರೂ ಸಾಮರಸ್ಯದಿಂದ ಶಾಂತಿಯುತವಾಗಿ ಜೀವನ ನಡೆಸಲು ಪರೋಕ್ಷವಾಗಿ ಕಾರಣೀಬೂತರು ನಮ್ಮ ಪೊಲೀಸ್. ಹೌದು ಎಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೋ ಅಲ್ಲಿ ಶಾಂತಿಯ ವಾತಾವರಣ ಅಪೇಕ್ಷಿಸುವುದು ಅಸಾಧ್ಯ. ಕಾನೂನು ಸುವ್ಯವಸ್ಥೆ ಹದಗೆಡದಂತೆ ಜನರ ಶಾಂತಿ, ರಕ್ಷಣೆಗೆ ಭಂಗವಾಗದಂತೆ ಎಚ್ಚರವಹಿಸಿರುವುದೇ ಪೊಲೀಸ್ ವ್ಯವಸ್ಥೆ.
ಇಂತಹ ಅಪರಾಧ ಪ್ರಕರಣಗಳ ನಡುವೆಯೂ ನಾವೇ ಅಜಾಗರೂಕತೆಯಿಂದ ಕಳೆದುಕೊಂಡ ಹಣ ಮತ್ತು ಬೆಲೆಬಾಳುವ ಮೊಬೈಲ್ ಹಾಗೂ ಮುಖ್ಯವಾದ ದಾಖಲಾತಿಗಳಿದ್ದ ಬ್ಯಾಗ್ ಮತ್ತೆ ನಮ್ಮ ಕೈ ಸೇರುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಅದಕ್ಕೆ ನೈಜ ಉದಾಹರಣೆ ಕಬ್ಬನ್ ಪಾರ್ಕ್ ವಿಭಾಗದಲ್ಲಿ ನಡೆದ ಘಟನೆ.
ಘಟನೆಯ ವಿವರ : ಬಿಎಂಟಿಸಿ ಬಸ್ ಕಂಡಕ್ಟರ್ ಆಗಿರುವಂತ ಲತಾರವರು ಕೆಲಸಕ್ಕೆ ಕೆಲಸಕ್ಕೆ ಹೋಗುವ ಧಾವಂತದಲ್ಲಿ ಬೆಲೆಬಾಳುವ ಎರಡು ಮೊಬೈಲ್ ಫೋನ್ಗಳು, ಹಣ ಹಾಗೂ ಅತ್ಯಂತ ಮುಖ್ಯವಾದಂತ ಒರಿಜಿನಲ್ ದಾಖಲಾತಿಗಳಿದ್ದ ಬ್ಯಾಗ್ ಅನ್ನು ಕಬ್ಬನ್ ಪಾರ್ಕ್ ಜಂಕ್ಷನ್ನಲ್ಲಿ ಬೀಳಿಸಿಕೊಂಡು ಹೋಗಿರುತ್ತಾರೆ.ಅಲ್ಲಿಯೇ ಕರ್ತವ್ಯದಲ್ಲಿದ್ದ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಹೆಚ್ ಸಿ ಮಂಜುನಾಥ ಅನಾಥವಾಗಿ ಬಿದ್ದಿದ್ದ ಬ್ಯಾಗ್ ಅನ್ನು ಓಪನ್ ಮಾಡಿ ನೋಡಿದಾಗ ಅದರಲ್ಲೇ ಇದ್ದ ನಂಬರ್ ಗೆ ಕರೆ ಮಾಡಿದ್ದರು ಆದರೆ ಅವರು ಕರೆ ಮಾಡಿದ್ದ ನಂಬರ್ನ ಮೊಬೈಲ್ಗಳು ಅದೇ ಬ್ಯಾಗ್ ನಲ್ಲಿಯೇ ಇದ್ದುದ್ದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ, ನಂತರ ಅದೇ ನಂಬರ್ಗೆ ಬಂದ ಕರೆಯನ್ನು ಸ್ವೀಕರಿಸಿ, ಈ ರೀತಿ ಬ್ಯಾಗ ಅನ್ನು ಬೀಳಿಸಿಕೊಂಡಿದ್ದು ಅವರಿಗೆ ತಿಳಿಸಲು ಬೇರೆ ಮಾರ್ಗ ಕೇಳಲಾಗಿ ಅವರ ಸಂಬಂಧಿಯಾಗಿದ್ದ ವ್ಯಕ್ತಿ ಅವರಿಗೆ ವಿಷಯ ತಿಳಿಸಿ ಮಂಜುನಾಥ ರವರನ್ನು ಸಂಪರ್ಕಿಸಿ ಬ್ಯಾಗನ್ನು ಪಡೆದು ಕೊಂಡಿದ್ದಾರೆ.
ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಹೆಡ್ ಕಾನ್ಸ್ ಟೇಬಲ್ ಮಂಜುನಾಥ ಗೆ ಕಂಡಕ್ಟ್ರ್ ತುಂಬು ಹೃದಯದ ಧನ್ಯವಾದವನ್ನು ತಿಳಿಸಿದ್ದಾರೆ.ಅತ್ಯಂತ ಬೆಲೆ ಬಾಳುವ ಮೊಬೈಲ್ ಹಾಗೂ ಮುಖ್ಯವಾದಂತ ದಾಖಲಾತಿಗಳಿದ್ದ ಬ್ಯಾಗ್ ಅನ್ನು ಅಷ್ಟೇ ಜಾಗರೂಕತೆಯಿಂದ ತಾವು ಬರುವವರೆಗೂ ಕಾಯ್ದಿರಿಸಿ ತಮಗೆ ಹಿಂದಿರುಗಿಸಿದ ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ್ ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಹಾಗೂ ಇವರ ಕಾರ್ಯದಿಂದ ಪೊಲೀಸರ ಮೇಲಿದ್ದ ನಂಬಿಕೆ ದುಪ್ಪಟ್ಟಾಯಿತೆಂದು ಕಂಡಕ್ಟರ್ ಲತಾರವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಪ್ರಾಮಾಣಿಕತೆಗೆ, ನಿಷ್ಠೆಗೆ ಮತ್ತೊಂದು ಹೆಸರು ಪೊಲೀಸ್ ಇಲಾಖೆ ಎಂದು ಮತ್ತೊಮ್ಮೆ ದೃಢ ಪಡಿಸಿದ್ದಾರೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಹೆಚ್. ಸಿ ಮಂಜುನಾಥ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.