ಆನೇಕಲ್ : ಕನ್ನಡೇತರರು ಹಿಂದಿ ಮಾತನಾಡು ವಂತೆ ಕನ್ನಡಿಗನಿಗೆ ಕಾಟ ಕೊಟ್ಟಿದ್ದಲ್ಲದೆ, ಆತನ ಮೇಲೆ ಮಾರಣಾಂತಿಕ ಹಲ್ಲೆ ಕೂಡಾ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಕಾರ್ಮಿಕನ ಮೇಲೆ ಉತ್ತರಪ್ರದೇಶದ ಕಾರ್ಮಿಕರು ದಾಳಿ ಮಾಡಿದ್ದಾರೆ. ಘಟನೆ : ಸುಮಾರು ಎರಡು ಮೂರು ತಿಂಗಳಿಂದ ಕೃಷ್ಣ ಮೂರ್ತಿ ಎಂಬುವ ಕನ್ನಡಿಗಯುಪಿ ಮೂಲದ ಹಿಂದಿವಾಲಗಳ ಬಳಿ ಹೊಟ್ಟೆ ಪಾಡಿಗಾಗಿ ಕೆಲಸ ಮಾಡಿಕೊಂಡಿದ್ದು, ಪದೇ ಪದೇ ಹಿಂದಿ ಕಲಿಯುವಂತೆ ಹೇಳುತ್ತಾ ಬಂದಿರುತ್ತಾರೆ.
ಆದರೆ ಕನ್ನಡಿಗನಾದ ಕೃಷ್ಣಮೂರ್ತಿಗೆ ಹಿಂದಿ ಮಾತಾಡೋದು ಕಷ್ಟವಾಗಿರುತ್ತದೆ , ಎಷ್ಟು ಹೇಳಿದರೂ ಹಿಂದಿ ಕಲಿಯದ ಕೃಷ್ಣಮೂರ್ತಿ ಮೇಲೆ ಈ ಹಿಂದಿವಾಲಗಳು ಹಿಂದಿ ಕಲಿಯುವಂತೆ ಎಷ್ಟು ಹೇಳಿದರೂ ನೀನು ಕಲಿಯಲಿಲ್ಲ , ನಮಗೆ ನೀನು ಕನ್ನಡ ಮಾತಾಡಿದರೆ ಕೋಪ ಬರುತ್ತೆ ಎಂದು ಜಗಳ ಶುರು ಮಾಡಿ ನೆನ್ನೆ ಯಾವುದೋ ಕೋಪದಲ್ಲಿ ಕೃಷ್ಣ ಮೂರ್ತಿ ಯನ್ನು ಮೇಲೆ ಹಲ್ಲೆ ನಡೆಸಿದ್ದಾರೆ.ಆನೇಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಯುಪಿ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಗ್ಗದ ಕೆಲಸ ಮಾಡುತ್ತಿದ್ದ ಕೃಷ್ಣ ಮೂರ್ತಿ ಹಲ್ಲೆಗೊಳಗಾದ ವ್ಯಕ್ತಿ.. ಇವರಿಗೆ ಹಿಂದಿ ಬರುವುದಿಲ್ಲ. ಕನ್ನಡ ಮಾತ್ರ ಮಾತನಾಡಿದ್ದಾರೆ.. ಆದ್ರೆ ಅಲ್ಲೇ ಕೆಲಸ ಮಾಡುವ ಉತ್ತರಪ್ರದೇಶದ ಕಾರ್ಮಿಕರು ಹಿಂದಿ ಮಾತನಾಡುವಂತೆ ತಾಕೀತು ಮಾಡಿದ್ದಾರೆ.ಆದರೆ ಕೃಷ್ಣ ಮೂರ್ತಿ ಕನ್ನಡ ಮಾತನಾಡಿದ್ದಕ್ಕೆ ಕಬ್ಬಿಣದ ರಾಡ್, ಮಗ್ಗದ ವಸ್ತುಗಳಿಂದ ಆತನ ಮೇಲೆ ಹಲ್ಲೆ ಮಾಡಲಾಗಿದೆ.
ತಲೆ, ಕಿವಿಭಾಗಕ್ಕೆ ಗಾಯಗಳಾಗಿವೆ. ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,ಬಳಿಕ ಹೆಚ್ನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಗಾಯಾಳು ಕೃಷ್ಣ ಮೂರ್ತಿಯನ್ನು ಶಿಫ್ಟ್ ಮಾಡಲಾಗಿದೆ. ಈ ಪ್ರಕರಣ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಅಪರಾಧಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.