ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಎಂಬ ಮಾತಿದೆ ಆದರೆ ಇಂದಿನ ಪೀಳಿಗೆ ತಾಯಿಯ ಮಹತ್ವವನ್ನೇ ಮರೆತಂತಿದೆ, ಇದಕ್ಕೆ ಸಾಕ್ಷಿ ಎಂಬಂತೆ ನಡೆದುಕೊಂಡಿದ್ದಾಳೆ ಆರೋಪಿ ಪವಿತ್ರಾ. ತನ್ನ ಕ್ಷಣಿಕ ಸುಖದ ವ್ಯಾಮೋಹಕ್ಕೆ ಒಳಗಾದ ಪವಿತ್ರಾ ತನ್ನ ತಾಯಿಯನ್ನೇ ಬಲಿ ಪಡೆದಿದ್ದಾಳೆ.ಘಟನೆಯ ಹಿನ್ನೆಲೆ:ವಿವಾಹಿತೆಯಾಗಿದ್ದ ಪವಿತ್ರಾ ಯಾರೂ ಇಲ್ಲದ ಸಮಯದಲ್ಲಿ ತನ್ನ ಪ್ರಿಯಕರನಾದ ಲವಲೀಶ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಎರಡು ದಿನಗಳಿಂದ ಕಾರ್ಯ ನಿಮಿತ್ತ ಹೊರಹೋಗಿದ್ದ ತಾಯಿ ಜಯಲಕ್ಷ್ಮಿ ಮನೆಗೆ ಬಂದಿದ್ದಾರೆ, ಮನೆಯಲ್ಲಿ ತನ್ನ ವಿವಾಹಿತ ಮಗಳು ಯಾರೋ ಒಬ್ಬ ಅಪರಿಚಿತನ ಜೊತೆ ಇರುವುದನ್ನು ಕಂಡು ಕೆಂಡಮಾಡಲವಾಗಿದ್ದರೆ.ಮದುವೆಯಾಗಿದ್ದರೂ ಸಹ ಮಗಳು ಬೇರೊಬ್ಬನ ತೆಕ್ಕೆಯಲ್ಲಿರುವುದನ್ನು ಪ್ರಶ್ನಿಸಿದ್ದಾರೆ, ತನ್ನ ತಪ್ಪನ್ನು ತನಗೆ ಮನವರಿಕೆ ಮಾಡಿಕೊಡುತ್ತಿರುವ ತಾಯಿಯ ಮಾತು ಪವಿತ್ರಾಳ ಕ್ರೋಧಕ್ಕೆ ಕಾರಣವಾಗುತ್ತದೆ.
ತಾಯಿ ಮಗಳ ನಡುವಿನ ಜಗಳ ವಿಕೋಪಕ್ಕೆ ಹೋಗುತ್ತದೆ, ಕೋಪದ ಕೈಗೆ ಬುದ್ದಿ ಕೊಟ್ಟ ಪವಿತ್ರಾ ತನಗೆ ಬುದ್ದಿ ಹೇಳುತ್ತಿರುವುದು ತನ್ನ ತಾಯಿ ಎಂಬುದನ್ನೂ ಮರೆತು ತನ್ನ ಪ್ರಿಯಕರನೊಂದಿಗೆ ಸೇರಿ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ತನ್ನ ತಾಯಿಯನ್ನೇ ಮುಗಿಸಿಬಿಡುವ ನಿರ್ಧಾರ ಮಾಡುತ್ತಾಳೆ. ಕೂಡಲೇ ಪ್ರಿಯಕರ ಲವಲೀಶ್ ಜೊತೆಗೂಡಿ ತಾಯಿ ಜಯಲಕ್ಷ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.ತಾಯಿ ಸತ್ತ ನಂತರವೂ ಪವಿತ್ರಾಳ ಪಾಪ ಪ್ರಜ್ಞೆ ಆಕೆಯನ್ನು ಕಾಡುವುದಿಲ್ಲ.
ಈಗ ತನ್ನ ಪ್ರಿಯಕರನೊಂದಿಗೆ ಸುಖಕರವಾಗಿ ಜೀವನ ನಡೆಸಲು ಯಾವ ತೊಂದರೆಯೂ ಆಗದಂತೆ ತಾಯಿಯ ಶವ ಸಂಸ್ಕಾರ ಮಾಡಿ ಮುಗಿಸುವ ಯೋಜನೆಯೊಂದಿಗೆ, ತನ್ನ ತಾಯಿ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಮೃತಪಟ್ಟಿರುವುದಾಗಿ ಬೊಮ್ಮನಹಳ್ಳಿ ಪೊಲೀಸರಿಗೆ ತಿಳುಸುತ್ತಾಳೆ, ಮಗಳ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಶವ ವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುತ್ತಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರು ಕಟ್ಟಿ ಸಾವನ್ನಪ್ಪಿರುವ ಬಗ್ಗೆ ವರದಿ ಬಂದಿದ್ದು ಪೊಲೀಸರ ಅನುಮಾನ ನಿಜವಾಗುತ್ತದೆ.
ಪೊಲೀಸ್ ಭಾಷೆಯಲ್ಲಿ ನಡೆದ ತನಿಖೆಯಲ್ಲಿ ಆರೋಪಿ ಪವಿತ್ರಾ ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದ್ದಾಳೆ ಹಾಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಚಾಣಾಕ್ಷ ಪೊಲೀಸರ ಸೂಕ್ಷ್ಮ ಗ್ರಹಿಕೆ ಯಿಂದ ಆರೋಪಿಗಳು ಕಂಬಿ ಹಿಂದೆ ತಳ್ಳಲ್ಪಟ್ಟಿದ್ದಾರೆ. ಆರೋಪಿ ಪವಿತ್ರಾ ಹಾಗೂ ಆಕೆಯ ಪ್ರಿಯಕರ ಲವಲೀಶ ಮೇಲೆ ಬೊಮ್ಮನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.