ರಿಯಲ್ ಎಸ್ಟೇಟ್ ಕಂಪನಿಗಳು ಜನರಿಗೆ ಸೈಟ್ ಮನೆ ಕೊಡಿಸುವ ಆಮಿಷ ಒಡ್ಡಿ ಜನರಿಂದ ಹಣ ವಸೂಲಿ ಮಾಡಿ ಜನರಿಗೆ ಮೋಸ ಮಾಡಿರುವ ಹಲವು ಸುದ್ದಿಗಳನ್ನು ನಾವು ಕೇಳಿದ್ದೇವೆ ನೋಡಿದ್ದೇವೆ, ಆದರೆ ಇಲ್ಲಿ ರಿಯಲ್ ಎಸ್ಟೇಟ್ ಕಂಪನಿ ಯಲ್ಲಿ ಕೆಲಸ ಮಾಡುತಿದ್ದ ಉದ್ಯೋಗಿಗಳೇ ಕಂಪನಿ ಹಣವನ್ನು ದುರುಪಯೋಗ ಪಡಿಸಿಕೊಂಡು ಕಂಪನಿಗೇ ಪಂಗನಾಮ ಹಾಕಿರುವ ಘಟನೆ ವರದಿಯಾಗಿದೆ.
*ಘಟನೆಯ ವಿವರ* ರಿಯಲ್ ಎಸ್ಟೇಟ್ ಕಂಪನಿಯಲ್ಲಿ 17 ಕೋಟಿ ರೂಪಾಯಿ ವಂಚನೆ ಮಾಡಿದ್ದ ನಾಲ್ವರು ನೌಕರರನ್ನು ಬಂಧಿಸಲಾಗಿದೆ.. ಕಂಪನಿಗೆ ಸೇರಿದ 17 ಕೋಟಿ ರೂಪಾಯಿ ಹಣವನ್ನು ಬೇರೆ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಂಡು ಆರೋಪಿಗಳು ಕಂಪನಿಗೆ ದ್ರೋಹ ವೆಸಗಿದ್ದಾರೆ.ಬೇರೆ ಬೇರೆ ಸಮಯದಲ್ಲಿ ಹಣವನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಲಾಗಿದೆ ಎಂದು ತಿಳಿದುಬಂದಿದ್ದರಿಂದ ಕಂಪನಿ ಮಾಲೀಕರು ನೌಕರರ ವಿರುದ್ಧ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಈ ಹಣ ದುರುಪಯೋಗ ಆಗಿದೆ ಎಂಬ ಆರೋಪ ಕೇಳಿಬಂದಿದೆ.ಕಂಪನಿಯ ಅಕೌಂಟೆಂಟ್ ಹರಿಕೃಷ್ಣರೆಡ್ಡಿ, ಕರುಣಾನಿಧಿ ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು ಹೆಚ್ಚಿನ ತನಿಖೆಗಾಗಿ ಅವರನ್ನು ಬಂಧಿಸಲಾಗಿದೆ.ಹರಿಕೃಷ್ಣ ರೆಡ್ಡಿಯ ಹುಚ್ಚು ಹವ್ಯಾಸಗಳಾದ ಲೇಡಿಸ್ ಬಾರ್ ಹುಚ್ಚು ಹೆಚ್ಚಾಗಿದ್ದು, ಅದಕ್ಕಾಗಿ ಈ ಹಣವನ್ನು ಕದ್ದಿದ್ದ ಎನ್ನಲಾಗಿದೆ..
ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡು ಅಲ್ಲಿಂದ ಹಣವನ್ನು 190 ಪಬ್ ಮಾಲೀಕರು ಹಾಗೂ ಮ್ಯಾನೇಜರ್ಗಳಿಗೆ ಕಳುಹಿಸಲಾಗಿದೆ.ಈ ಬಗ್ಗೆ ಪ್ರಾಪ್ಕೇರ್ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾಲೀಕ ಮೆತುಕು ಶ್ರೀನಿವಾಸ್ ಅವರು ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಗೋವಾ, ಬಾಂಬೆ ಪಬ್‌ಗಳಿಗೆ ಈ ಹಣವನ್ನು ಸುರಿದಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಹರಿಕೃಷ್ಣಾರೆಡ್ಡಿ ಬಳಿಯಿಂದ 3 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನಾಭರಣ, ನಗದು ಹಾಗೂ ಎರಡು ಮನೆಗಳ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.