ಹೌದು ಬೆಂಗಳೂರು ನಗರ ಪೊಲೀಸರು ಇತ್ತೀಚಿಗೆ ಹೆಚ್ಚಾಗಿರುವ ರಸ್ತೆ ಜಗಳಕ್ಕೆ ಬ್ರೇಕ್ ಹಾಕುವಂತೆ ತಿಳಿಸಿದ್ದಾರೆ ಹಾಗೂ ಇಂತಹ ಸಂದರ್ಭದಲ್ಲಿ ನೀವು ಸಿಲುಕಿ ಕೊಂಡಿದ್ದರೆ ಅಥವಾ ಇಂತಹ ಘಟನೆಯಲ್ಲಿ ನೀವು ಸಾಕ್ಷಿ ಯಾಗಿದ್ದರೆ ಸಹಾಯಕ್ಕಾಗಿ 112ಗೆ ಕರೆ ಮಾಡುವಂತೆ ಕೋರಿದ್ದಾರೆ.ಆದರೂ ಸಹ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಬೆಂಗಳೂರು ದಕ್ಷಿಣ ವಿಭಾಗದ ಕತ್ರಿಗುಪ್ಪೆ ಸಮೀಪ ಆಟೋ ಚಾಲಕನ ಮಿತಿ ಮೀರಿದ ವರ್ತನೆಯನ್ನು ವಿಡಿಯೋ ಸಮೇತ ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ವಿವರ: ಬೆಂಗಳೂರಿನ ಕತ್ರಿಗುಪ್ಪೆ ರಸ್ತೆಯಲ್ಲಿ ಈ ಘಟನೆ ನಡೆದಿದೆ.ಈ ಬಗ್ಗೆ ಮಹಿಳೆಯೊಬ್ಬಳು ರೆಡ್ಡಿಟ್‌ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದಾಳೆ.. ಆಟೋಗೆ ಹಾರ್ನ್ ಮಾಡಿದ್ದಕ್ಕೆ ಸಿಗ್ನಲ್‌ನಲ್ಲಿ ನಮ್ಮ ಕಾರು ನಿಂತಿದ್ದಾಗ ಅಲ್ಲಿಗೆ ಬಂದ ಯುವಕ ಕೆಟ್ಟ ಮಾತುಗಳಲ್ಲಿ ಬೈದು ನಿಂದಿಸಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ..ಆಟೋ ಚಾಲಕನೊಬ್ಬ ಹುಚ್ಚನಂತೆ ಆಟೋ ಓಡಿಸುತ್ತಿದ್ದ,
ಈ ವೇಳೆ ಆತ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದ, ಆದರೂ ಕೂಡಾ ಆತನ ಜೊತೆ ನಮಗೇಕೆ ಎಂದು ನಾನು ಮುಂದಕ್ಕೆ ಹೋದೆ.. ಆದ್ರೆ ಸಿಗ್ನಲ್‌ನಲ್ಲಿ ನಿಂತಿದ್ದಾಗ ಯುವಕನೊಬ್ಬ ಬಂದು ಗಲಾಟೆ ಮಾಡಿದ.. ಕಾರಿನ ಗಾಜು ಒಡೆಯಲು ಯತ್ನಿಸಿದ, ಡೋರ್ ತೆಗೆಯುವಂತೆ ಬೆದರಿಕೆ ಒಡ್ಡಿದ. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದ.. ನಾನು ವಿಡಿಯೋ ಮಾಡುತ್ತಿರುವುದು ನೋಡಿ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಮಹಿಳೆ ರೆಡ್ಡಿಟ್‌ನಲ್ಲಿ ಗೋಳು ತೋಡಿಕೊಂಡಿದ್ದಾಳೆ..
ಕಾರಿನಲ್ಲಿ ನನ್ನ ತಾಯಿ ಸೇರಿ ಇಡೀ ಕುಟುಂಬ ಇತ್ತು.. ಈ ವೇಳೆಯೇ ಆತ ಈ ರೀತಿಯ ಮಾತುಗಳನ್ನಾಡಿದ್ದಾನೆ.. ನೀವೆಲ್ಲಾ ವೇಶ್ಯೆಯರು ಎಂದು ಜರಿದಿದ್ದಾನೆ.. ನನಗೆ ಕನ್ನಡ ಬರುವುದಿಲ್ಲವೆಂದು ಅಂದುಕೊಂಡು ಆತ ಕೆಟ್ಟ ಮಾತುಗಳಲ್ಲೆಲ್ಲಾ ಬೈದಿದ್ದಾನೆ.. ಈ ಸಂದರ್ಭದಲ್ಲಿ ತುಂಬಾ ಜನ ನೋಡುತ್ತಿದ್ದರು.. ಆದ್ರೆ ಯಾರೂ ಕೂಡಾ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದರು.ಮಹಿಳೆ ವಿಡಿಯೋ ಹಂಚಿಕೊಂಡು ನೋವು ತೋಡಿಕೊಂಡ ಕೆಲವೇ ಘಂಟೆಗಳಲ್ಲೇ ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಶಿವಪ್ರಕಾಶ್ ದೇವರಾಜು ರವರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಪೊಲೀಸರ ಮೇಲಿರುವ ನಂಬಿಕೆಯನ್ನು ಇಮ್ಮಡಿ ಗೊಳಿಸಿದ್ದಾರೆ. ರಸ್ತೆಗಳಲ್ಲಿ ಪ್ರಯಾಣಿಸುವ ಸುರಕ್ಷಿತವಾಗಿ ಹಾಗೂ ಶಾಂತ ರೀತಿಯಲ್ಲಿ ವರ್ತಿಸುವುದು ಅತ್ಯವಶ್ಯಕ, ಕೆಲವೊಮ್ಮೆ ನಡೆಯುವ ಅಚಾನಕ್ ಘಟನೆಗಳಿಂದ ವಿಚಲಿತ ರಾಗದೆ ನಮ್ಮ 112ಗೆ ಕರೆ ಮಾಡಿ ಸಹಾಯಕ್ಕಾಗಿ ಎಂದು ತಿಳಿಸಿದ್ದಾರೆ.