ಈ ಸಾವು ನ್ಯಾಯವೇ?
ಸಾಯುವ ವಯಸ್ಸು ಎಷ್ಟು?
ಆಘಾತಕಾರಿ ಬೆಳವಣಿಗೆ:
ಹೌದು ಆಕಸ್ಮಿಕವೋ, ಆಘಾತಕಾರಿ ಬೆಳವಣಿಗೆಯೋ ತಿಳಿಯುತ್ತಿಲ್ಲ, ಅತೀ ಚಿಕ್ಕ ಮಕ್ಕಳಲ್ಲಿ ಲೋ ಬಿಪಿ, ಹಾರ್ಟ್ ಅಟ್ಯಾಕ್ ಸಮಸ್ಯೆಗಳು ಕಂಡುಬರುತ್ತಿರುವುದು, ಅದೂ ಸಹ ಒಂದು ಸಣ್ಣ ಮುನ್ಸೂಚನೆಯೂ ಸಿಗದೇ ಮಕ್ಕಳು ಕ್ಷಣ ಮಾತ್ರದಲ್ಲಿ ಜೀವ ಬಿಡುತ್ತಿರುವುದು ನಿಜಕ್ಕೂ ನಂಬಲಸಾಧ್ಯವಾದ ಆದರೆ ನಂಬಲೇ ಬೇಕಾದಂತಹ ಆತಂಕಕಾರಿ ಬೆಳವಣಿಗೆ.
ಈ ಸಣ್ಣ ವಯಸ್ಸಿನಲ್ಲೇ ಮಕ್ಕಳು ಹೆತ್ತವರ ಕಣ್ಮುಂದೆ ಉಸಿರು ಚೆಲ್ಲುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ.
ಮೊನ್ನೆಯಷ್ಟೇ 14ವರ್ಷದ ಚೇತನ್ ಹೃದಯಾಘತದಿಂದ ಮೃತಪಟ್ಟಿದ್ದ.
ಈ ಘಟನೆ ಮಾಸುವ ಮುನ್ನವೇ ಇಂದು ದೇವದುರ್ಗದ ಗಬ್ಬೂರ್ ಗ್ರಾಮದ 5ನೇ ತರಗತಿ ವಿದ್ಯಾರ್ಥಿ ಶಿವಕುಮಾರ್ ಲೋ ಬಿಪಿ ಯಿಂದಾಗಿ ತರಗತಿಯಲ್ಲೇ ಕುಸಿದು ಬಿದ್ದಿದ್ದಾನೆ.
ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೂ ಮಾರ್ಗ ಮಧ್ಯೆ ಶಿವಪ್ರಸಾದ್ ಜೀವ ಬಿಟ್ಟಿದ್ದಾನೆ.
ಒಂದರ ಹಿಂದರಂತೆ ಉಂಟಾಗುತ್ತಿರುವ ವಿದ್ಯಾರ್ಥಿಗಳ ಸಾವು ನಿಜಕ್ಕೂ ಪೋಷಕರಲ್ಲಿ ಆತಂಕ ಉಂಟು ಮಾಡುತ್ತಿದೆ.
ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಗ್ರಾಮೀಣ ಭಾಗಗಳಲ್ಲಿ ಶಾಲಾ ಮಕ್ಕಳ ಮಾಸಿಕ ಅರೋಗ್ಯ ತಪಾಸಣಾ ಕಾರ್ಯಕ್ಕೆ ಮುಂದಾಗಬೇಕಿದೆ.
prevention is better than cure ಅನ್ನುವ ಹಾಗೆ ಸರ್ಕಾರ ಮೊದಲೇ ಎಚ್ಚೆತ್ತು ಕೊಂಡು ವಿದ್ಯಾರ್ಥಿಗಳ ಕಡ್ಡಾಯ ಅರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.
ಜವಾಬ್ದಾರಿಯುತ ಮಾಧ್ಯಮವಾಗಿ ಇದು ನಮ್ಮ ಕಳಕಳಿಯ ಮನವಿ ಇದನ್ನು ಸರ್ಕಾರದ ಗಮನಕ್ಕೆ ತರಬೇಕಾಗಿರುವುದು ನಮ್ಮ ಕರ್ತವ್ಯ ಕೂಡ
ಈ ಸಾವು ನ್ಯಾಯವೇ?ಸಾವಿನ ವಯಸ್ಸೆಷ್ಟು ?
Date: