ನೇಪಾಳಿ ಸುಂದರಿಯ ದೇಹ ತುಂಡುಗಳಾಗಿ ಫ್ರಿಡ್ಜ್ನಲ್ಲಿ ಪತ್ತೆ
ಇಂದು ಪತ್ತೆಯಾದ ಯುವತಿಯ ಶವ ಒಂದು ಕ್ಷಣ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಂತೂ ನಿಜ.
ವೈಯ್ಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಯುವತಿಯ ಶವ ಫ್ರಿಡ್ಜ್ ನಲ್ಲಿ ಪತ್ತೆಯಾಗಿತ್ತು.
ಹೌದು ಯುವತಿಯ ಶವ ಫ್ರಿಡ್ಜ್ ನಲ್ಲಿ ಹೇಗೆ ಅಂದ್ರಾ?
ಹೌದು ಈ ನೇಪಾಳಿ ಸುಂದರಿಯ ಶವ ಫ್ರಿಡ್ಜ್ ನಲ್ಲಿ ಬರೋಬ್ಬರಿ 35ತುಂಡುಗಳಾಗಿ ಪತ್ತೆಯಾಗಿರುವುದು ಎಲ್ಲರ ಎದೆಯಲ್ಲಿ ನಡುಕ ಉಂಟುಮಾಡಿತ್ತು. ಯುವತಿಯ ಶವದ ತುಂಡುಗಳು ಆರೋಪಿಯ ಕ್ರೂರತೆ ಹಾಗೂ ವಿಕೃತತೆಗೆ ಸಾಕ್ಷಿಯಾಗಿತ್ತು.
ಬೆಂಗಳೂರಿನ ವೈಯ್ಯಾಲಿಕಾವಲ್ ವ್ಯಾಪ್ತಿಯ ಮನೆಯೊಂದರಲ್ಲಿ ಯುವತಿಯ ಶವ ಇರುವುದಾಗಿ ಬಂದ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರಿಗೆ ಹಾಗೂ ನೆರೆದಿದ್ದ ಸ್ಥಳೀಕರಿಗೆ ಅಲ್ಲಿ ಇದ್ದಂತಹ ದೃಶ್ಯ ಬೆಚ್ಚಿಬೀಳಿಸುವಂತಿತ್ತು.
ಘಟನೆಯ ವಿವರ:
ಶವವಾಗಿ ಪತ್ತೆಯಾದ ಯುವತಿಯ ಹೆಸರು ಮಹಾಲಕ್ಷ್ಮಿ(29). ಈಕೆ ಮೂಲತಃ ನೇಪಾಳದ ಹುಡುಗಿ.ಈಕೆ ಕೆಲವು ವರ್ಷಗಳ ಕೆಳಗೆ ಹೇಮಂತ್ ದಾಸ್ ಎಂಬುವವರನ್ನು ವಿವಾಹವಾಗಿ ನೆಲಮಂಗಲದಲ್ಲಿ ವಾಸವಾಗಿದ್ದರು ನಾಲ್ಕು ವರ್ಷದ ಗಂಡು ಮಗುವಿದ್ದು, ದಂಪತಿಗಳ ನಡುವೆ ಉಂಟಾದ ಮನಸ್ತಾಪದಿಂದ ಬೇಸತ್ತು ಮಹಾಲಕ್ಷ್ಮಿ ಗಂಡನೊಂದಿಗೇ ಮಗುವನ್ನು ಬಿಟ್ಟು ಒಬ್ಬಳೇ ವೈಯ್ಯಾಲಿಕಾವಲ್ ನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಮಹಾಲಕ್ಷ್ಮಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಾ ಈ ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದಳು ಎಂದು ತಿಳಿದು ಬಂದಿದೆ.
ಆದರೆ ಈಕೆಗೆ ಒಬ್ಬ ಸ್ನೇಹಿತನಿದ್ದು ಆತ ಈಕೆಯನ್ನು ಪಿಕಪ್ ಅಂಡ್ ಡ್ರಾಪ್ ಮಾಡಲು ಆಗಾಗ ಮನೆಗೆ ಬರುತ್ತಿದ್ದ ಎನ್ನಲಾಗಿದೆ.
ಆದರೆ ಕೆಲವು ದಿನಗಳಿಂದ ಮಹಾಲಕ್ಷ್ಮಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ, ಆದರೆ ಆಕೆಯ ಮನೆಯಿಂದ ಬಹಳ ಕೆಟ್ಟ ದುರ್ನಾತ ಬರುತಿದ್ದ ಕಾರಣ ಅಕ್ಕಪಕ್ಕದವರು ಆಕೆಯ ಸಂಬಂಧಿಕರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದು,
ಅದರಂತೆ ಆಕೆಯ ಗಂಡ ಹೇಮಂತ್ ದಾಸ್ ಮನೆಯ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿ ಯನ್ನು ಸಾಯಿಸಿದ್ದು ಮಾತ್ರವಲ್ಲದೇ,ಆಕೆಯ ಶವವನ್ನು ಮುವ್ವತ್ತಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ, ಫ್ರಿಡ್ಜ್ ನಲ್ಲಿ ಇಡಲಾಗಿದೆ.
ಸ್ಥಳಕ್ಕೆ ಎಫ್ಎಸ್ಎಲ್,ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇಂತಹ ವಿಕೃತ ಮನಸ್ಸಿನ, ಕ್ರೂರತೆ ಮೆರೆದ ಆರೋಪಿಯ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನೇಪಾಳಿ ಸುಂದರಿಯ ಶವ ಫ್ರಿಡ್ಜ್ ನಲ್ಲಿ
Date: