28.7 C
Bengaluru
Tuesday, October 8, 2024

ವರನ ಸೋಗಿನಲ್ಲಿ ಬಂದು ಕಳ್ಳತನಕ್ಕೆ ಯತ್ನ !

Date:

ಮದುವೆ ಮಾಡಿಕೊಳ್ಳಲು ಹುಡುಗಿ ನೋಡಲು ಬಂದಿದ್ದ ಯುವಕನೊಬ್ಬ ಘನಂಧಾರಿ ಕೆಲಸ ಮಾಡಿದ್ದಾನೆ. ಮಾಡಿದ ತಪ್ಪಿಗಾಗಿ ಈಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ತೆಲಂಗಾಣದ ಪಾರ್ವತಿಪುರಂ ಮಂಡಲ್‌ ಬೋಡಂಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ.ಬೋಡಂಪಲ್ಲಿ ಗ್ರಾಮದ ಮಣಮ್ಮ ಎಂಬುವವರಿಗೆ ಒಬ್ಬ ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಮಣಮ್ಮ ಮಗಳನ್ನು ನೋಡೋದಕ್ಕೆ ದೂರದ ಸಂಬಂಧಿಗಳಾಗಿರುವ ದೇವಬತ್ತುಲ ಧನಲಕ್ಷ್ಮೀ ಕುಟುಂಬದವರು ಬಂದಿದ್ದರು. ಧನಲಕ್ಷ್ಮೀ ಅವರು ತನ್ನ ಮಗ ಲಕ್ಷ್ಮಣನಿಗಾಗಿ ಹೆಣ್ಣು ನೋಡುತ್ತಿದ್ದರು.

ದೂರದ ಸಂಬಂಧಿಯಾಗಿ ಮಣಮ್ಮ ಅವರ ಮಗಳು ಇದ್ದಾಳೆ ಎಂದು ಗೊತ್ತಾಗಿ ಧನಲಕ್ಷ್ಮೀ, ಅವರ ಇಬ್ಬರು ಗಂಡು ಮಕ್ಕಳಾದ ಲಕ್ಷ್ಮಣ, ನಾಗ ಮಹೇಶ್‌ ಹಾಗೂ ಮಗಳು ದೇವಿ ಬಂದಿದ್ದರು. ರಾಜಮಂಡ್ರಿಯಿಂದ ಇಲ್ಲಿಗೆ ಬಂದಿದ್ದರು.ದೂರದ ಸಂಬಂಧಿಗಳಾಗಿದ್ದರಿಂದ ಮಣಮ್ಮ ತುಂಬಾ ಚೆನ್ನಾಗಿ ಅವರಿಗೆ ಸತ್ಕರಿಸಿದ್ದಾರೆ. ದೂರದಿಂದ ಬಂದಿದ್ದರಿಂದ ಅವರು ರಾತ್ರಿ ಅಲ್ಲಿಯೇ ಸಂಬಂಧಿ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಮಣಮ್ಮನ ಮನೆಯಲ್ಲೇ ಸ್ನಾನ ಮುಗಿಸಿಕೊಂಡು ಉಪಹಾರ ಸೇವಿಸಿ ಹೊರಟಿದ್ದಾರೆ.

ಆದ್ರೆ ಹಿಂದಿನ ದಿನ ಹುಡುಗಿ ನೋಡೋ ಶಾಸ್ತ್ರ ಸಂದರ್ಭದಲ್ಲಿ ಮಣಮ್ಮ ತನ್ನ ಮಗಳ ಮದುವೆಗಾಗಿ ಖರೀದಿಸಿದ್ದ ಚಿನ್ನಾಭರಣಗಳನ್ನು ತೋರಿಸಿದ್ದರು. ನಂತರ ಒಂದು ಡ್ರಾಯರ್‌ನಲ್ಲಿ ಅದನ್ನು ಇಟ್ಟಿದ್ದರು. ಇದನ್ನು ನೋಡಿದ್ದ ಮದುಮಗನಾಗಬೇಕಿದ್ದ ಲಕ್ಷ್ಮಣ ಮಾರನೇ ದಿನ ಹೋಗುವಾಗ ಅದನ್ನು ಎಗರಿಸಿಕೊಂಡು ಹೋಗಿದ್ದಾನೆ. ಇದರ ಜೊತೆಗೆ ಹಣವನ್ನೂ ಕದ್ದಿದ್ದಾನೆ.ಸಂಬಂಧಿಕರು ಹೋದ ಮೇಲೆ ಮಣಮ್ಮ ಡ್ರಾಯರ್‌ ತೆಗೆದು ನೋಡಿದಾಗ ಚಿನ್ನಾಭರಣ ಹಾಗೂ ಹಣ ಕಾಣಿಸಿಲ್ಲ. ಕೂಡಲೇ ಆಕೆ ಗಾಬರಿಯಿಂದ ಲಕ್ಷ್ಮಣನಿಗೆ ಕರೆ ಮಾಡಿ ಕೇಳಿದ್ದಾಳೆ.

ಆದ್ರೆ ತಮಗೇನೂ ಗೊತ್ತಿಲ್ಲ ಎಂದು ಆತ ಹೇಳಿದ್ದಾನೆ. ಇದರಿಂದಾಗಿ ಮಣಮ್ಮ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಪೊಲೀಸರು ಆರೋಪಿಯನ್ನು ಹಿಡಿದು ವಿಚಾರಿಸಿದಾಗ ಕದ್ದಿರುವುದು ಒಪ್ಪಿಕೊಂಡಿದ್ದಾನೆ.ಚಿನ್ನಾಭರಣ ಹಾಗೂ ಹಣವನ್ನು ಜಪ್ತಿ ಮಾಡಲಾಗಿದೆ. ಆರೋಪಿ ರಾಜಮಂಡ್ರಿಯಲ್ಲಿ ಈಗಾಗಲೇ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಜೊತೆಗೆ ಕಳ್ಳತನದ ವೇಳೆ ಓರ್ವನ ಕೊಲೆ ಕೂಡಾ ಮಾಡಿದ್ದ ಎಂದು ಗೊತ್ತಾಗಿದೆ.

Latest Stories

LEAVE A REPLY

Please enter your comment!
Please enter your name here