25.5 C
Bengaluru
Monday, September 1, 2025

ರಿಯಾಲಿಟಿ ಶೋಗಳ ಮೂಲಕ ಖ್ಯಾತಿಯಾಗಿದ್ದ ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಆರೋಪ…

Date:

ರಿಯಾಲಿಟಿ ಶೋಗಳ ಮೂಲಕ ಖ್ಯಾತಿಯಾಗಿದ್ದ ಹುಲಿ ಕಾರ್ತಿಕ್‌ ಗೆ ಇದೀಗ ಸಂಕಷ್ಟ ಎದುರಾಗಿದೆ. ಹುಲಿ ಕಾರ್ತಿಕ್‌ ವಿರುದ್ಧ ಜಾತಿ ನಿಂದನೆ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಅವರ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.ಕನ್ನಡದ ಹೆಸರಾಂತ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿʼಯಲ್ಲಿ ಹುಲಿ ಕಾರ್ತಿಕ್‌ ಹೆಸರು ಮಾಡಿದ್ದಲ್ಲದೆ, ಈ ಶೋನ ವಿನ್ನರ್ ಆಗಿಯೂ ಇತ್ತೀಚೆಗೆ ಹೊರಹೊಮ್ಮಿದ್ದರು. ಈ ಸಾಧನೆಯಿಂದ ಮಿಂಚುತ್ತಿರುವ ಹೊತ್ತಲ್ಲೇ ಕಾರ್ತಿಕ್‌ ಗೆ ಕೇಸ್‌ ಸುತ್ತಿಕೊಂಡಿದೆ.

ಸದ್ಯ ಕಾರ್ತಿಕ್‌ ಅವರಿಗೆ ಪೊಲೀಸ್‌ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದಿದೆ.ರಿಯಾಲಿಟಿ ಶೋ ವೇದಿಕೆಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಕಾರ್ತಿಕ್‌, ಯಾವುದೋ ರೋಡ್‌ನಲ್ಲಿ ಬಿದ್ದಿರೋ ವಡ್ಡನ ತರ ಇದ್ದೀಯʼ ಎಂದು ಹೇಳಿದ್ದರು ಎನ್ನಲಾಗಿದೆ. ಖಾಸಗಿ ವಾಹಿನಿಯ ಅವಾರ್ಡ್‌ ಕಾರ್ಯಕ್ರಮದಲ್ಲಿ ಕಾರ್ತಿಕ್‌ ಈ ರೀತಿ ಹೇಳಿದ್ದು, ಇದರ ವಿರುದ್ಧ ಬೋವಿ ಜನಾಂಗ ಸಿಡಿದೆದ್ದಿದೆ. ನಮ್ಮ ಸಮುದಾಯದ ಬಗ್ಗೆ ಕಾರ್ತಿಕ್‌ ವೇದಿಕೆಯಲ್ಲೇ ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಎಫ್.ಐ.ಆರ್ ದಾಖಲಾಗಿದೆ.ಕಾರ್ತಿಕ್‌ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅವರು ಒಂದು ಸಮುದಾಯದ ಬಗ್ಗೆ ಹೀಯಾಳಿಸುವ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ನಲ್ಲಿ ವಿಜಯಶಾಲಿಯಾಗಿದ್ದ ಕಾರ್ತಿಕ್‌, ಹಿರಿತೆರೆಯಲ್ಲೂ ತಮ್ಮ ಅಭಿನಯದ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದೇ ವೇಳೆ ಅವರಿಗೆ ಜಾತಿ ನಿಂದನೆ ಕೇಸ್‌ ಸುತ್ತಿಕೊಂಡಿದೆ.

Latest Stories

LEAVE A REPLY

Please enter your comment!
Please enter your name here