21 C
Bengaluru
Thursday, November 7, 2024

ಆಸ್ಪತ್ರೆಯ ನಿರ್ಲಕ್ಷ ಗರ್ಭಿಣಿ ಸಾವು!

Date:

ಬೆಳಗಾವಿಯ ಆದರ್ಶ್ ಖಾಸಗಿ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಜಿಲ್ಲೆಯ ಕಂಗ್ರಾಳ ಗಲ್ಲಿಯ ನಿವಾಸಿ ಆರತಿ ಅನಿಲ್ ಚವ್ಹಾಣ (30) ಎಂದು ಗುರುತಿಸಲಾಗಿದೆ. ದುಡ್ಡು ಕಟ್ಟಿಲ್ಲ ಎಂದು ಚಿಕಿತ್ಸೆ ನೀಡದ್ದಕ್ಕೆ ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಹೊಟ್ಟೆನೋವು ಎಂದು ಜಿಲ್ಲೆಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಬಂದು ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ 30 ಸಾವಿರ ರೂ. ಹಣ ಕಟ್ಟುವಂತೆ ವೈದ್ಯರು ತಿಳಿಸಿದ್ದು, ಸದ್ಯಕ್ಕೆ 10 ಸಾವಿರ ರೂ. ಹಣವನ್ನು ಕಟ್ಟಿ, ಉಳಿದ ಹಣವನ್ನು ಆಮೇಲೆ ಕಟ್ಟುವುದಾಗಿ ಕುಟುಂಬಸ್ಥರು ಹೇಳಿದ್ದರು.

ಬಾಕಿ ಹಣ ಕಟ್ಟದೇ ಇರುವ ಕಾರಣ ಗರ್ಭಿಣಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಆದ್ದರಿಂದ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಠಾಣೆಯಲ್ಲಿ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕಿದ್ದು, ಸದ್ಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Latest Stories

LEAVE A REPLY

Please enter your comment!
Please enter your name here