ಸಮಾಜ ಸೇವೆ ಆಹಾ! ಶೀರ್ಷಿಕೆ ಎಷ್ಟು ರೋಮಾಂಚನವನ್ನುಂಟು ಮಾಡುತ್ತೆ ಅಲ್ವಾ ? ಆದರೆ ಎಲ್ಲರೂ ಸಮಾಜ ಸೇವಕರು ಎಂದು ಕರೆಸಿಕೊಳ್ಳಲು ಎಷ್ಟು ಅರ್ಹರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಯಾರು ಎಷ್ಟೇ ಸಮಾಜಮುಖಿಯಾಗಿದ್ದರೂ ಮೊದಲಿಗೆ ತಾನು, ತನ್ನ ಕುಟುಂಬ, ಎಂಬ ಚೌಕಟ್ಟನ್ನು ಹೊಂದಿರುತ್ತಾರೆ. ಇದರಾಚೆಗೆ ಯೋಚಿಸಿ ಸಮಾಜಮುಖಿ ಕಾರ್ಯ ದಲ್ಲಿ ಕೈ ಜೋಡಿಸುವವರು ಅತೀ ವಿರಳ.
ಅದರಲ್ಲೂ ನಮ್ಮ ಜೀವವನ್ನೇ ಪಣಕ್ಕಿಟ್ಟು ಅನ್ಯರ ಜೀವ ರಕ್ಷಿಸಲು ಮುಂದಾಗುವವರು ಕೆಲವೇ ಕೆಲವು ವಿರಳಾತೀ ವಿರಳ ಜೀವಿಗಳು. ತಮ್ಮ ಪ್ರಾಣ ಮುಡಿಪಾಗಿಟ್ಟು ಜೀವ ರಕ್ಷಣೆಗೆ ಮುಂದಾಗಿರುವವರು ನಮ್ಮ ಸೈನಿಕರು ಮಾತ್ರ ಅದಕ್ಕೆ ಅವರೆಂದರೆ ಅಪಾರ ಗೌರವ,ಹೆಮ್ಮೆ ಪ್ರತಿಯೊಬ್ಬರಿಗೂ . ಆದರೆ ಇಲ್ಲೊಬ್ಬ ಹೆಣ್ಣು ಮಗಳು ತನ್ನ ಪ್ರಾಣ ಪಣಕ್ಕಿಟ್ಟು, ಬೇರೊಬ್ಬರ ವ್ಯಕ್ತಿಯ ರಕ್ಷಣೆಗೆ ಮುಂದಾಗಿ ಕಡೆಗೆ ಈ ಹೋರಾಟದಲ್ಲೇ ಅಸುನೀಗಿದ್ದಾಳೆ.
ಘಟನೆಯ ವಿವರ : ಮಂಗಳೂರಿನ ಮುದ್ದಾದ ಕುಟುಂಬದ ಅತೀ ಸುಂದರ ಮನಸ್ಸು ಹಾಗೂ ಮುಖಚರ್ಯೆ ಯನ್ನು ಹೊಂದಿದ್ದ ಈ ಹೆಣ್ಣುಮಗಳ ಹೆಸರು ಅರ್ಚನಾ, ವಯಸ್ಸು ಇನ್ನೂ 34. ಮುದ್ದಾದ ನಾಲ್ಕು ವರ್ಷದ ಮಗು ಅತೀ ಹೆಚ್ಚು ಪ್ರೀತಿ ಮಾಡುವ ಗಂಡ, ಒಟ್ಟಿನಲ್ಲಿ ಸುಂದರ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ ಅರ್ಚನಾರಿಗೆ, ಸಮಾಜಮುಖಿ ಕಾರ್ಯಗಳಲ್ಲಿ ತುಂಬಾನೇ ಆಸಕ್ತಿ, ಯಾರಾದರೂ ಅವರ ಬಳಿ ತಮ್ಮ ನೋವನ್ನು ಹೇಳಿಕೊಂಡರು ಮಮ್ಮಲ ಮರುಗುವ ಮನಸ್ಸು ಹಾಗೂ ಹೇಗಾದರೂ ನೊಂದವರಿಗೆ ಸಹಾಯ ಮಾಡು ತಾಯಿ ಹೃದಯ.
ಅದರಂತೆ ಯಕೃತ್ತಿಗೆ ಸಂಬಂದಿಸಿದ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ತನ್ನ ಯಕೃತ್ತನ್ನೇ ದಾನ ಮಾಡುವ ವಿಶಾಲ ಹೃದಯೀ ಈ ಕರುಣಾಮಯೀ, ಅದರಂತೆ ಯಕೃತ್ತಿನ ಕಸಿಗಾಗಿ ತನ್ನ ಯಕೃತನ್ನೇ ದಾನ ಮಾಡಿದ್ದರು, ಅದೇನು ವಿಧಿ ವಿಪರ್ಯಾಸವೋ ಸ್ವತಃ ಅರ್ಚನಾ ಯಕೃತ್ತಿನ ಸೋಂಕಿಗೆ ಒಳಪಟ್ಟು ತನ್ನ ಪ್ರಾಣವನ್ನೇ ಬಿಟ್ಟಿದ್ದಾರೆ. ಸುಂದರ ಕುಟುಂಬ ಮುದ್ದಾದ ಮಗು ಪ್ರಾಣ ಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತಿ ಎಲ್ಲವನ್ನೂ ಬಿಟ್ಟು ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಕರುಣಾಮಯೀ ಅರ್ಚನಾ.