ಆತ್ಮಹತ್ಯೆ ಜೀವನದಲ್ಲಿ ಎಲ್ಲಾ ಮುಗಿಯಿತು, ಇನ್ನು ಬದುಕಲು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬಹುಬೇಗ ಬರುತ್ತಿರುವುದು ನಮ್ಮ ಯುವ ಪೀಳಿಗೆಯ ಹೇಡಿತನವನ್ನು ತೋರಿಸುತ್ತದೆ. ಏನೇ ಕಷ್ಟ ಬರಲಿ ಎದುರಿಸಿ ನಿಲ್ಲುತ್ತೇವೆ ಎನ್ನುತ್ತಿದ್ದ ಕಾಲ ಹೋಗಿ ಸಣ್ಣ ಪುಟ್ಟ ಮನಸ್ತಾಪ, ಕೀಳಿರಿಮೆ, ಸೋಲು, ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ ಎಂದರೆ ಅದು ಆತ್ಮ ಹತ್ಯೆ ಎಂದು ಭಾವಿಸಿರುವುದು ದುರದೃಷ್ಟ ಹಾಗೂ ಹೇಡಿತನವಲ್ಲದೇ ಮತ್ತೇನು? *ಏನೇ ಬರಲಿ ಎದುರಿಸಿ ನಿಲ್ಲುವ ಮನಸ್ಥೈರ್ಯ ಒಂದಿರಲಿ*ಸಿದ್ದಾರ್ಥ್ ಈ ಮನಸ್ಥೈರ್ಯ ವಿಲ್ಲದೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯ ವಿವರ: ಇಂದು ಎಂದಿನಂತೆ ಮೆಟ್ರೋ ಸಂಚಾರ ಸುಲಲಿತವಾಗಿ ಜಾರಿಯಲ್ಲಿತ್ತು. ಆದರೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಮದ್ಯಾಹ್ನದ ಸುಮಾರಿಗೆ ಬಂದ ಸುಮಾರು 35ವರ್ಷದ ವ್ಯಕ್ತಿ ಏಕಾಏಕಿ ಮೆಟ್ರೋ ರೈಲಿನಡಿ ಮೆಟ್ರೋ ಹಳಿಯ ಮೇಲೆ ಜಿಗಿದಿದ್ದಾನೆ. ಆದರೆ ಆತನ ಅದೃಷ್ಟ ಚೆನ್ನಾಗಿತ್ತು.ಮೆಟ್ರೋ ವಿಭಾಗದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಶ್ಮಿ ಆತನ ಜೀವ ಉಳಿಸಿದ್ದಾರೆ.
ಬಿಹಾರ ಮೂಲದ ಸಿದ್ದಾರ್ಥ್(35)ಮೆಟ್ರೋ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮೆಟ್ರೋ ನಿಲ್ದಾಣಕ್ಕೆ ಬಂದವನೇ ಮೆಟ್ರೋ ಹಳಿಯ ಮೇಲೆ ಜಿಗಿದಿದ್ದಾನೆ, ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ರಶ್ಮಿ ಹಿಂದುಮುಂದು ನೋಡದೆ, ಮೆಟ್ರೋ ಸ್ಟೇಷನನ್ನಲಿದ್ದ (ETS)ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಅನ್ನು ಆಫ್ ಮಾಡಿದ್ದಾರೆ, ಈ ಗಟ್ಟಿಗಿತ್ತಿ ಜೀವ ಉಳಿಸುವ ನಿಟ್ಟಿನಲ್ಲಿ ETS ಬಾಕ್ಸ್ಗೆ ಅಳವಡಿಸಿದ್ದ ಗ್ಲಾಸ್ ಹೊಡೆಯಲು ಸುತ್ತಿಗೆಯನ್ನೂ ಸಹ ಬಳಸದೇ ಅದನ್ನು ಹುಡುಕಾಡಲು ಸಮಯ ವ್ಯರ್ಥ ಮಾಡದೇ ಜೀವ ಉಳಿಸುವ ಧಾವಂತದಲ್ಲಿ ಕೈನಲ್ಲಿಯೇ ಗ್ಲಾಸ್ ಬಾಕ್ಸ್ ಹೊಡೆದು ಹಾಕಿ ವ್ಯಕ್ತಿಯ ಜೀವ ತಕ್ಷಣೆ ಮಾಡಿದ್ದಾರೆ.
ಕೈ ನಲ್ಲಿ ಬಾಕ್ಸ್ ಹೊಡೆದಿದ್ದರಿಂದ ರಶ್ಮಿ ಕೈಗೆ ರಕ್ತ ಗಾಯವಾಗಿದೆ ಆದರೆ ಆಕೆಯ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ಒಂದು ಜೀವ ಉಳಿದಿದೆ. ಈ ಗಟ್ಟಿಗಿತ್ತಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಹೆಣ್ಮಕ್ಕಳೇ ಸ್ಟ್ರಾಂಗು ಗುರು ಎಂದು ಸಾಬೀತು ಪಡಿಸಿದ್ದಾರೆ.