28.7 C
Bengaluru
Tuesday, October 8, 2024

ನೋವು ನಿವಾರಕ ಮಾತ್ರೆಗಳು ಮಾದಕ ದ್ರವ್ಯಗಳಾಗುತ್ತಿವೆ : ಗೃಹಮಂತ್ರಿ ಜಿ.ಪರಮೇಶ್ವರ್

Date:

ಮಾದಕ ದ್ರವ್ಯ ನಿಗ್ರಹಕ್ಕಾಗಿ ಸರ್ಕಾರ ಈಗಾಗಲೇ ಹತ್ತು ಹಲವು ಯೋಜನೆಗಳನ್ನು ಹಾಗೂ ಕಾನೂನು ಕುಣಿಕೆಯನ್ನು ಬಿಗಿಯಾಗಿಸುತ್ತಲೇ ಬಂದಿದೆ.ಆದರೆ ಈ ಡ್ರಗ್ಸ್ ದಂದೆಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ.


ಈಗಾಗಲೇ ಸರ್ಕಾರದ ಹಾಗೂ ಪೊಲೀಸರ ಕಠಿಣ ಕ್ರಮ ಮತ್ತು ಪರಿಶ್ರಮದಿಂದ ರಾಜ್ಯದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳ ನಿಯಂತ್ರಣ ಸಾಧ್ಯವಾಗುತ್ತಿದೆ. ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ ಡ್ರಗ್ಸ್ ದಂದೆ ನಿಯಂತ್ರಣಕ್ಕೆ ಬಂದಿದೆ.


ಆದರೆ ಇಂದು ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ರವರು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ ಅಚ್ಚರಿಯ ಸುದ್ದಿಯೊಂದನ್ನು ತಿಳಿಸಿದ್ದಾರೆ, ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ತಂದಿರುವುದು ಅತುತ್ತಮ ಬೆಳವಣಿಗೆಯ ವಿಷಯವೇ ಆಗಿದ್ದರೂ ಈಗ ಮೆಡಿಕಲ್ ಶಾಪ್ ಗಳಲ್ಲಿ ಸಿಗುವ ನೋವು ನಿವಾರಕ ಮಾತ್ರೆ ಗಳಿಂದ ತಯಾರು ಮಾಡಲಾಗುತ್ತಿದೆ ಎಂಬ ಆತಂಕಕಾರಿ ವಿಷಯ ತಿಳಿದು ಬಂದಿದೆ.

ಇಂತಹ ಪೆಯಿನ್ ಕಿಲ್ಲರ್ ಮಾತ್ರೆಗಳನ್ನು ಮೆಡಿಸಿನ್ ಎಂಬ ಕಾರಣದಿಂದ ಮಾರಾಟ ಮಾಡಲಾಗುತ್ತಿದೆ, ಇದನ್ನೇ ಬಂಡವಾಳವಾಗಿಸಿಕೊಂಡಿರುವ ದುರುಳರು ಇದನ್ನು ಸುಲಭವಾಗಿ ಮೆಡಿಕಲ್ ಸ್ಟೋರ್ ಗಳಿಂದ ಖರೀದಿ ಮಾಡುತ್ತಿದ್ದಾರೆ ಹಾಗೂ ಇದು ಎಲ್ಲರಿಗೂ ಸುಲಭವಾಗಿ ದೊರೆಯುತ್ತಿದೆ ಇದು ಕಳವಳಕಾರಿ ಅಂಶವಾಗಿದ್ದು ಇದನ್ನು ಯಾವ ರೀತಿ ನಿಯಂತ್ರಿಸಬೇಕೆಂಬ ಬಗ್ಗೆ ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ, ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.


ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಇದನ್ನೂ ಹತೋಟಿಗೆ ತರಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕಠಿಣ ಕಾನೂನು ಕ್ರಮಕ್ಕೆ ಚಿಂತನೆ ನಡೆಸುವುದಾಗಿ ಗೃಹ ಮಂತ್ರಿಗಳು ತಿಳಿಸಿದ್ದಾರೆ.


ಈಗಾಗಲೇ ಯಾವುದೇ ಡಾಕ್ಟರ್ ಗಳು ಸೂಚಿಸದೆ ಇರುವ ಮಾತ್ರಗಳನ್ನು ನೀಡಬಾರದೆಂಬ ಸೂಚನೆ ಇದೆ, ಡಾಕ್ಟರ್ ಪ್ರಿಸ್ಕ್ರೈಬ್ ಮಾಡದಿರುವ ಪ್ರಿಸ್ಕ್ರಿಪ್ಷನ್ ಇಲ್ಲದ ಮಾತ್ರೆ ಗಳನ್ನು ನೀಡದಂತೆ ಕ್ರಮ ವಹಿಸಿದರೆ ಇದಕ್ಕೂ ಕಡಿವಾಣ ಹಾಕುವುದರಲ್ಲಿ ಅನುಮಾನವೇ ಇಲ್ಲ.

ಇದು ಏಲ್ಲೆಡೆ ಪಾಲನೆಯಾಗಬೇಕು, ಯಾವುದೇ ಕಾನೂನು ರೂಪಿತವಾದಲ್ಲಿ ಅದನ್ನು ಪ್ರತಿಯೊಬ್ಬ ಸಾರ್ವಜನಿಕರು ಪರಿ ಪಾಲನೆ ಮಾಡಿದ್ದಲ್ಲಿ ಮಾತ್ರ ಕಾನೂನು ಸುಲಲಿತ ಜಾರಿಗೆ ಸಹಕಾರಿ.

Latest Stories

LEAVE A REPLY

Please enter your comment!
Please enter your name here