28.7 C
Bengaluru
Tuesday, October 8, 2024

ಸಾರ್ವಜನಿಕರಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು : ಉನ್ನತ ನ್ಯಾಯಾಲಯ

Date:

ರಾಜ್ಯದಲ್ಲಿ ಎಚ್​ಎಸ್​ಆರ್​ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿತ್ತು.HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ, ಎಂದು ತಿಳಿಸಲಾಗಿತ್ತು, ಆದರೆ ಈ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆಗೆ ಗಡುವನ್ನು ಮತ್ತೆ ವಿಸ್ತರಿಸಿರಾಜ್ಯ ಉನ್ನತ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಹಿಂದೆ ಸರ್ಕಾರವು ತನ್ನ ಆದೇಶವನ್ನು ಮೂರು ಬಾರಿ ಕೊನೆಯ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು.

ಏನಿದು ಎಚ್ಎಸ್ಆರ್ ಪಿ (HSRP ಏನಿದರ ಉಪಯೋಗ)

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿತ್ತು.

  • ನಿಮ್ಮ ವಾಹನವನ್ನ ಕಳ್ಳತನ ಮಾಡಿ ಅದರ ನಂಬರ್ ಪ್ಲೇಟ್ ತೆಗೆದು ಹಾಕಿ ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳೋದನ್ನೂ ಎಚ್‌ಎಸ್‌ಆರ್‌ಪಿ ಪ್ಲೇಟ್ ಮೂಲಕ ತಡೆಗಟ್ಟಬಹುದು.
  • ವಾಹನಗಳ ಸುರಕ್ಷತೆ ಜೊತೆಯಲ್ಲೇ ರಾಷ್ಟ್ರೀಯ ಭದ್ರತೆಗೂ ಈ ಪ್ಲೇಟ್ ಸಹಕಾರಿ
  • ಇದರಿಂದ ಹಳೆಯ ವಾಹನಗಳ ನೋಂದಣಿ ಮತ್ತು ಪತ್ತೆ ಹಚ್ಚುವಿಕೆಯ ಕಾರ್ಯಕ್ಕೆ ಸಹಕಾರಿಯಾಗಿರುತ್ತದೆ.
  • ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸರ್ಕಾರವು ಸೆಪ್ಟೆಂಬರ್‌ 15ರವರೆಗೆ ಗಡುವು ವಿಸ್ತರಿಸಲಾಗಿತ್ತು.2019ರ ಏಪ್ರಿಲ್‌ 1ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯ.
  • ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಸರ್ಕಾರ ನಿರ್ಧರಿಸಲಾಗಿದೆ.

ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸಲಿದೆ ಎಂದು ಹೇಳಲಾಗಿದೆ.


ಆನ್‌ಲೈನ್ ಮೂಲಕ ಅಳವಡಿಕೆ ಹೇಗೆ?

ಮೈ ಎಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ ವಾಹನದ ಹಾಗೂ ಮಾಲೀಕರ ಸ್ವವಿವರವನ್ನು ನೀಡುವ ಮುಖೆನ ಆನ್ಲೈನ್ ನಲ್ಲಿಯೇ ಹೊಸ HSRP ನಂಬರ್ ಪ್ಲೇಟ್ ಪಡೆದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಆದರೆ ಎಚ್ಚರ ಈ ಆನ್ಲೈನ್ ವೆಬ್ಸೈಟ್ ಗಳಲ್ಲೂ ಸಹ ಮೋಸ ಹೋಗುವ ಸಂಭವವಿದೆ, ಜಾಗರೂಕರಾಗಿ ಆನ್ಲೈನ್ ವೆಬ್ಸೈಟ್ ಆರಿಸಿಕೊಳ್ಳಬೇಕಾಗುತ್ತದೆ.

  • ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ
  • ನಂಬರ್ ಪ್ಲೇಟ್ ಅಳವಡಿಕೆಗೆ ನಿಮಗೆ ಹತ್ತಿರವಾಗುವ ಸ್ಥಳ ಆಯ್ದುಕೊಳ್ಳುವ ಅವಕಾಶ ಒದಗಿಸಲಾಗಿದೆ.
    2019ರ ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು.
  • 2019 ರ ನಂತರದ ವಾಹನಗಳು ಹೊಸ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನೊಂದಿಗೇ ಬರುವುದರಿಂದ ಹೊಸ ವಾಹನಗಳಿಗೆ HSRP ಅಪ್ಲೈ ಮಾಡುವ ಅವಶ್ಯಕತೆ ಇರುವುದಿಲ್ಲ.

ಈಗ ಉನ್ನತ ನ್ಯಾಯಾಲಯವು ನವೆಂಬರ್20ರವರೆಗೆ ಸಾರ್ವಜನಿಕರಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಿಸಿದೆ.
ಕೊನೆಯ ಕ್ಷಣದ ಗಡಿಬಿಡಿ ಮಾಡಿಕೊಳ್ಳದೆ ಕೊಟ್ಟಿರುವ ಸದಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಸರ್ಕಾರದ ಯೋಜನೆಗಳ ಜೊತೆ ಕೈಜೋಡಿಸಿ ನಾವು ಸುರಕ್ಷ ವಾಗುವುದರ ಜೊತೆ ನಮ್ಮ ದೇಶದ ಸುರಕ್ಷತೆಗೆ ಕೈ ಜೋಡಿಸೋಣ

Latest Stories

LEAVE A REPLY

Please enter your comment!
Please enter your name here