ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದಾರೆ ಬೆಂಗಳೂರು ಪೊಲೀಸರು.ಪುಡಿ ರೌಡಿ ಒಬ್ಬ ಯುವಕನನ್ನು ಥಳಿಸಿ ಬೆತ್ತಲೆಗೊಳಿಸಿ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ಹೀರೋಹಿಸಂ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ .ಘಟನೆ ವೈರಲ್ ಆದ ಕೆಲವೇ ಘಂಟೆಗಳಲ್ಲಿ ಆರೋಪಿ ಬಂಧನವಾಗಿದ್ದು *ಬೆಂಗಳೂರು ಪೊಲೀಸರಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
*ಹೌದು ಬೆಂಗಳೂರಿನ ಸುಂಕದಕಟ್ಟೆಯ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಗ್ಯಾಂಗ್ ನಿಂದ ಯುವಕನ ಮೇಲೆ ಹಲ್ಲೆ ನಡೆದಿದ್ದು ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಅಟ್ಟಾಡಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ರೌಡಿಶೀಟರ್ ನಡೆಸಿರುವ ಈ ಹಲ್ಲೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ರೌಡಿ ಶೀಟರ್ ಪವನ್, ವೀಡಿಯೋ ಹರಿಬಿಟ್ಟ ಕೆಲವೇ ಘಂಟೆಗಳಲ್ಲಿ ರೌಡಿ ಶೀಟರ್ ಪವನ್ ಗೆ ಬಲೆ ಬೀಸಿದ್ದ ಪೊಲೀಸರು ರಾಕೆಟ್ ವೇಗದಲ್ಲಿ ಕಾರ್ಯಾಚರಣೆ ನಡೆಸಿ ಪವನ್ ನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ಘಟನೆಯ ವಿವರ : ಹಲ್ಲೆ ಘಟನೆ ವೈರಲ್ ಆದ ಕೆಲ ಗಂಟೆಗಳಲ್ಲೇ ರೌಡಿಶೀಟರ್ ಪವನ್ ತನ್ನ ಇಮೇಜು ಹೆಚ್ಚಿಸಿಕೊಳ್ಳಲು ಘಟನೆಯ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ರೌಡಿ ಇಮೇಜ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಆದರೆ ಆಗಿದ್ದೇ ಬೇರೆ ಬೆಂಗಳೂರು ಪೊಲೀಸರ ಮುಂದೆ ಯಾವ ರೌಡಿಸಂ ನಡೆಯುವುದಿಲ್ಲ ಎಂಬುದನ್ನು ಬೆಂಗಳೂರು ಪೊಲೀಸರು ಮತ್ತೊಮ್ಮೆ ದೃಢ ಪಡಿಸಿದ್ದಾರೆ.
ಬೆಂಗಳೂರು ಪೊಲೀಸರ ಹದ್ದಿನ ಕಣ್ಣು ಸೋಶಿಯಲ್ ಮೀಡಿಯಾವನ್ನು ಕಾಯುತ್ತಿದೆ.ವಿಡಿಯೋ ಹರಿ ಬಿಟ್ಟ ಕೆಲವೇ ಘಂಟೆಗಳಲ್ಲಿ ರೌಡಿ ಪವನ್ ನ ಹೆಡೆ ಮುರಿ ಕಟ್ಟಿದ್ದಾರೆ. ಗೋವಿಂದರಾಜ್ ನಗರ ಪೊಲೀಸ್ ಇನ್ಸ್ಪೆಕ್ಟರ್ ಸುಬ್ರಮಣಿ ರೌಡಿ ಶೀಟರ್ ಪವನ್ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಪವನ್ ನನ್ನ ಬಂಧಿಸಲು ತೆರಳಿದ್ದ ಇನ್ಸ್ಪೆಕ್ಟರ್ ಮೇಲೆ ಪವನ್ ಹಲ್ಲೆಗೆ ಮುಂದಾಗಿದ್ದು ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಸುಬ್ರಮಣಿ ರೌಡಿ ಪವನ್ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಜುನ್‌ನನ್ನು ಬೆತ್ತಲೆಗೊಳಿಸಿ, ಹೊಡೆದು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪವನ್ ಹಾಗೂ ಆತನ ಸ್ನೇಹಿತರ ನಡುವೆಯೇ ಸಮಸ್ಯೆ ಉಂಟಾಗಿ, ಹಳೆಯ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ. ಹಾಗೂ ವಿಡಿಯೋದಲ್ಲಿ ಹಲ್ಲೆಗೊಳಗಾಗಿರುವ ಅರ್ಜುನ್ ಕೂಡ ನಾಪತ್ತೆಯಾಗಿದ್ದಾನೆ. ಒಂದು ತಿಂಗಳ ಹಿಂದೆ ಘಟನೆ ನಡೆದರೂ, ಆತ ಕೂಡ ಯಾವುದೇ ದೂರು ನೀಡಿಲ್ಲ. ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದರು ಅದರಂತೆ ರೌಡಿ ಪವನ್ ನನ್ನು ಬಂಧಿಸಿದ್ದಾರೆ .ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.