28.7 C
Bengaluru
Tuesday, October 8, 2024

ಶಿಕ್ಷಕರ ನಿರ್ಲಕ್ಷ್ಯದಿಂದಲೇ ವಿದ್ಯಾರ್ಥಿ ಸಾವು ಎದೆನೋವು ಎಂದರೆ ಗದರಿದ ಶಿಕ್ಷಕ; ಕುಸಿದುಬಿದ್ದು ವಿದ್ಯಾರ್ಥಿ ಸಾವು!

Date:

ಯಾದಗಿರಿ ಬ್ರೇಕಿಂಗ್ ತರಗತಿಯಲ್ಲಿ ಕುಳಿತಿದ್ದಾಗ ಹಠಾತ್ತನೇ ಕುಸಿದು ಬಿದ್ದು 10ನೇ ಬಾಲಕನೊಬ್ಬ ಮೃತಪಟ್ಟ ಆಘಾತಕಾರಿ ಘಟನೆ ಇಲ್ಲಿನ ಶಹಾಪುರ ಪ್ರತಿಷ್ಠಿತ ಡಿ.ದೇವರಾಜ್‌ ಅರಸ್ (ಡಿಡಿಯು) ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಬುಧವಾರ ಜರುಗಿದೆ. ಬಾಲಕನನನ್ನು ಕರ್ಕಳ್ಳಿ ತಾಂಡಾ ರಾಮುಲು ರಾಠೋಡ್ ಅವರ ಪುತ್ರ ಚೇತನ್ ಎಂದು ಗುರುತಿಸಲಾಗಿದೆ.ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೈಕ್ ಮೇಲೆ ಬಾಲಕನನ್ನು ಕರೆದುಕೊಂಡು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.

ಆದರೆ, ತಮ್ಮ ಪುತ್ರ ಅಸ್ವಸ್ಥಗೊಂಡಾಗ ಆಸ್ಪತ್ರೆ ಗೆ ಕರೆದೊಯ್ಯುವಲ್ಲಿ ಶಾಲಾಡಳಿತ ಮಂಡಳಿ-ಶಿಕ್ಷಕರು ನಿರ್ಲಕ್ಷ್ಯ ಮಾಡಿದ್ದಾರೆಂದು ಪಾಲಕರು ಗಂಭೀರವಾಗಿ ಆರಪಿಸಿದ್ದಾರೆ ಪುತ್ರನ ಆಗಲಿಕೆಗೆ ಕಣ್ಣೀರು ಸುರಿಸಿದ್ದಾರೆ. ತರಗತಿಯಲ್ಲಿದ್ದಾಗ ಅಸ್ವಸ್ಥಗೊಂಡಿದ್ದ ಬಾಲಕ ಚೇತನ್ ಒಂದೆರಡು ಹೊರಗಡೆ ಬಂದು ವಾಂತಿ ಮಾಡುತ್ತಿದ್ದನ್ನು ಕಂಡ, ಇದೇ ಶಾಲೆಯಲ್ಲಿ ಓದು ತ್ತಿದ್ದ ಬಾಲಕನ ತಂಗಿ ಶಿಕ್ಷಕರ ಗಮನಕ್ಕೆ ತಂದಿದ್ದಾಳೆ.

ಅಣ್ಣ ಅಸ್ವಸ್ಥತೆ ಬಗ್ಗೆ ಮೊಬೈಲ್ ಮೂಲಕ ಕರೆ ಮಾಡಿ ತಂದೆ ಕರೆಸುವುದಾಗಿ ಹೇಳಿದ್ದರೂ, ಮೊಬೈಲ್ ಕೊಡದೆ ಶಿಕ್ಷಕರು ಲೋಪಸಿಗಿದ್ದಾರೆ. ಬೆಂಚಿನ ಮೇಲೆ ಬಾಲಕನ ಮಲಗಿಸಿ ಎಲ್ಲವೂ ಸರಿಯಾಗುತ್ತದೆ ಎಂದು ಸಾಗ ಹಾಕಿದ್ದಾರೆ. ಆ ವೇಳೆ, ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗುವ ಅಥವಾ ಅಂಬ್ಯುಲೆನ್ಸ್‌ಗೆ ಕರೆ ಮಾಡುವ ಗೋಜಿಗೆ ಹೋಗದೆ, ಬೈಕಿನಲ್ಲಿ ಆತನನ್ನು ಕರೆದೊಯ್ಯಲಾಯಿತು. ತುರ್ತು ಚಿಕಿತ್ಸೆ ಸಿಕ್ಕಿದ್ದರೆ ಅಣ್ಣ ಬದುಕುಳಿಯುತ್ತಿದ್ದ ಎಂದು ತಂಗಿ ಕಣ್ಣೀರಿಟ್ಟಳು.

ತಮ್ಮ ಮಗನ ಸಾವಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರೇ ಕಾರಣ ಎಂದುದೂರಿರುವ ಚೇತನ್ ತಂದೆ ರಾಮುಲು, ತಕ್ಷಣ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ ನನ್ನ ಮಗ ಜೀವಂತವಾಗಿ ಇರುತ್ತಿದ್ದ. ನನ್ನ ಮಗನಿಗೆ ಆದ ಗತಿ ಬೇರೆ ಮಕ್ಕಳಿಗೆ ಆಗಬಾರದು. ಆ ಶಾಲೆ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಆಡಳಿತಮಂಡಳಿಯವರು ನನ್ನ ಮಗನಿಗೆ ಮೈಯಲ್ಲಿ ಹುಷಾರಿರಲಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಹುಷಾರಿಲ್ಲದಿದ್ದರೆ ನಾವು ಶಾಲೆಗೆ ಹೇಗೆ ಕಳಿಸುತ್ತೇವೆ.

ನಮ್ಮ ಮಕ್ಕಳ ಬಗ್ಗೆ ನಮಗೆ ಕಾಳಜಿ ಇಲ್ಲವೇ? ಶಾಲೆಯವರ ನಿರ್ಲಕ್ಷ್ಯದಿಂದ ನನ್ನ ಮಗ ಸತ್ತಿದ್ದಾನೆ ಎಂದು ಮೃತ ಚೇತನ್ ತಂದೆ ರಾಮು ಗಂಭೀರವಾಗಿ ಆರೋಪ ಮಾಡಿದ್ದಾರೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶಹಾಪುರ ಮತಕ್ಷೇತ್ರದ ಶಾಸಕರಾದ ಶರಣಬಸಪ್ಪ ಗೌಡ ದರ್ಶನಾಪುರವರು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವರದಿ :- ಸಿದ್ದು ಪಟ್ಟೇದಾರ್

Latest Stories

LEAVE A REPLY

Please enter your comment!
Please enter your name here