ಮಹಿಳೆಯರ ಹಿತ ಚಿಂತನೆ ನಡೆಸುವ ಸರ್ಕಾರ ಮಹಿಳೆಯರ ಮಾಸಿಕ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅತ್ಯವಶ್ಯಕ, ಅಂತಹ ಮುಟ್ಟಿನ ದಿನಗಳಲ್ಲಿ ಸರ್ಕಾರೀ ಹಾಗೂ ಅರೆ ಸರ್ಕಾರೀ ಮತ್ತು ಖಾಸಗೀ ವಲಯಗಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರು ಎಂತಹುದೇ ನೋವಿದ್ದರೂ ಕೆಲಸಕ್ಕೆ ಹಾಜರಾಗುವುದು ಕಡ್ಡಾಯ ವಾಗಿರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಅವಶ್ಯಕ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವ್ಯಕ್ತಪಡಿಸಿತ್ತು.
ಖಾಸಗೀ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕವಾಗಿ ಆರು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ನೀಡಲು ನೀತಿ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಹಾಗೂ ಕ್ರಮಕ್ಕೆ ಮುಂದಾಗಿದೆ.ಈಗಾಗಲೇ ಡಾ.ಸಪ್ನಾ ಮುಖರ್ಜಿ ನೇತೃತ್ವದಲ್ಲಿ ವರದಿ ಸಿದ್ಧಪಡಿಸಲು ತಂಡವನ್ನು ರಚಿಸಲಾಗಿತ್ತು, ಇದರಂತೆ ಈ ತಂಡವು ಈಗಾಗಲೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಈ ವರದಿಯ ಹಿನ್ನೆಲೆ ಎಲ್ಲಾ ಇಲಾಖೆಯ ಮುಖ್ಯಸ್ತರುಗಳೊಂದಿಗೆ ಚರ್ಚಿಸಿ, ವರದಿಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ. ಈ ವರದಿಯ ಅನ್ವಯ ವೇತನ ಸಹಿತ ರಜೆ ನೀಡಿದರೆ ಅದು ಮಹಿಳಾ ಉದ್ಯೋಗಿಗಳಿಗೆ ಬಹು ಉಪಯುಕ್ತವಾಗಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಆದೇಶವನ್ನು ಮಹಿಳಾ ಉದ್ಯೋಗಿಗಳು ತುಂಬು ಹೃದಯದಿಂದ ಸ್ವಾಗತಿಸುತ್ತಾರೆ.
ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಮಾತನಾಡಿ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಖಾಸಗೀ ವಲಯಕ್ಕೆ ಮುಟ್ಟಿನ ರಜೆ ನೀತಿ ಪರಿಚಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಾಗಿ ಹಾಗೂ ಪೂರ್ಣ ಪ್ರಮಾಣದ ನೀತಿ ರೂಪಿಸಿದ ನಂತರ ಸರ್ಕಾರೀ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ, ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.