28.7 C
Bengaluru
Tuesday, October 8, 2024

ಬೆಂಗಳೂರು ಪೊಲೀಸರಿಂದ ವಿಶೇಷ ಪ್ರಯತ್ನ :- ವಾರದ ವರದಿ ಸಂಕೇತ ಭಾಷೆಗೆ ಭಾಷಾಂತರ!

Date:

ಪೊಲೀಸರು ಎಂದರೆ ಕೇವಲ ರಕ್ಷಕರಲ್ಲ,ಎಲ್ಲಾ ವಿವಿಧ ಮಾಹಿತಿಗಳನ್ನು ಸಾಮಾನ್ಯ ಮತ್ತು ದೇಶದ ಕೊನೆಯ ಪ್ರಜೆಗೂ ಮುಟ್ಟಿಸುವ ಸಂದೇಶಗಾರರೂ ಹೌದು. ಇದನ್ನು ಬೆಂಗಳೂರು ಪೊಲೀಸ್ ಆಯುಕ್ತರು ನಿರೂಪಿಸಿದ್ದಾರೆ. ಪ್ರತಿ ವರ್ಷ ಸಪ್ಟೆಂಬರ್ 23ನೇ ದಿನವನ್ನು ಅಂತರಾಷ್ಟ್ರೀಯ ಸನ್ನೆ ದಿನವನ್ನಾಗಿ ಆಚರಿಸಲಾಗುತ್ತದೆ. ಇದರಂತೆ ಪೊಲೀಸ್ ಇಲಾಖೆಯು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಕೇತ ಭಾಷೆಯನ್ನು ಬಳಸಿದ್ದಾರೆ.

ಇದರಿಂದಾಗಿ ಕಿವಿ ಕೇಳದ ಎಲ್ಲಾ ಪ್ರಜೆಗಳಿಗೂ ಮಾಹಿತಿಯನ್ನು ನೀಡುವುದರೊಂದಿಗೆ ಸಾಮಾನ್ಯ ವರ್ಗದವರಿಗೂ ಸಹಕಾರಿಯಾಗಿದೆ ಎಂಬುವ ಸಂದೇಶವನ್ನು ರವಾನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಪಾರದರ್ಶಕವಾಗಿ, ಸಕಲ ಪ್ರಜೆಗಳಿಗೂ ಸಲ್ಲಬೇಕು ಎಂಬುವ ಜವಾಬ್ಧಾರಿಯನ್ನು ಮೆರೆದಿದ್ದಾರೆ.

ಅಂದಹಾಗೆ ಇಂದಿನ ಮಾಧ್ಯಮಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರಾದ ಬಿ ದಯಾನಂದರವರು ನಗರದ ವಿವಿಧ ಠಾಣೆಗಳಲ್ಲಿ ಬಗೆಹರಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದು, ಅವರೊಂದಿಗೆ ವಿ – ಶೇಷ್ ಎನ್‌.ಜಿ.ಓ ಸಂಸ್ಥೆಯ ಮೋಕ್ಷ ಕುಮಾರಿಯವರು ಸಂಕೇತ ಭಾಷೆಗೆ ಭಾಷಾಂತರಿಸಿ ಗಮನ ಸೆಳೆದಿದ್ದಾರೆ. ಪ್ರತಿ ವಾರದಂತೆ ಈ ವಾರವೂ ಇಲಾಖೆಯ ವತಿಯಿಂದ ಮಾಧ್ಯಮಗೋಷ್ಠಿಗೆ ಆಹ್ವಾನಿಸಿದ್ದು, ಮಂಗಳವಾರದ ಬದಲಿಗೆ ಅಂತರರಾಷ್ಟ್ರೀಯ ಸನ್ನೆ ದಿನದ ಆಚರಣೆ ಮತ್ತು ಜಾಗೃತಿಗಾಗಿ ಇಂದೇ ಅರ್ಥಾತ್ 23ನೇ ಸೆಪ್ಟೆಂಬರ್ ಸೋಮವಾರದಂದು ಆಯೋಜಿಸಲಾಗಿತ್ತು.

ವಿವಿಧ ಪ್ರಕರಣಗಳ ವರದಿಗಳನ್ನು ನೀಡುವ ಜೊತೆಗೆ ಇಲಾಖೆಯಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಕಾರ್ಯಗಾರದ ಕುರಿತು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಇಲಾಖೆಯ ಎಲ್ಲಾ ಡಿಸಿಪಿ ಹಂತದ ಅಧಿಕಾರಿಗಳಿಗೆ ಸನ್ನೆ ಭಾಷೆಯ ಬಳಕೆ ಮತ್ತು ಇಂತಹ ವ್ಯಕ್ತಿಗಳ ಸಂವಹನಕ್ಕೆ ಇರುವ ಆತಂಕಗಳ ಬಗ್ಗೆ ವಿ – ಶೇಷ್ ಸಂಸ್ಥೆಯಿಂದ ಕಾರ್ಯಗಾರದಲ್ಲಿ ವಿವರಿಸಲಾಗುತ್ತದೆ.

” ಸೈನ್ ಅಪ್ ಫಾರ್ ಸೈನ್ ಲಾಂಗ್ವೇಜ್ ರೈಟ್ಸ್ ” ಎಂಬ ಘೋಷ ವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು, ನಗರದ ಪೊಲೀಸರು ಎಲ್ಲ ಜನಾಂಗ, ಸಮುದಾಯ, ವರ್ಗದವರ ರಕ್ಷಣೆ ಮತ್ತು ಭದ್ರತೆಗೆ ಬದ್ಧರಾಗಿದ್ದಾರೆ. ಇದರ ದ್ಯೋತಕವಾಗಿ ಅಂತರಾಷ್ಟ್ರೀಯ ಸನ್ನೆ ದಿನದಂದು ಮಾಹಿತಿಗಳನ್ನು ಸಂಕೇತ ಭಾಷೆಯಲ್ಲಿಯೇ ಸಾರ್ವಜನಿಕರಿಗೆ ತಿಳಿಸುವ ಸದುದ್ದೇಶದಿಂದಾಗಿ ಇಂದಿನ ಪತ್ರಿಕಾಗೋಷ್ಠಿಯು ವಿಶೇಷವಾಗಿದೆ ಎಂದು ನಗರದ ಪೊಲೀಸ್ ಆಯುಕ್ತರಾದ ಬಿ ದಯಾನಂದರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವರದಿ : ಆಂಟೋನಿ ಬೇಗೂರು

Latest Stories

LEAVE A REPLY

Please enter your comment!
Please enter your name here