ಬೆಂಗಳೂರಿನಲ್ಲಿ ಯುವನಕನೊಬ್ಬನ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆ.21ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಗೇಶ್ ಕೊಂಡ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಾಳು ಯುವಕನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗಾಯಾಳು ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ 2ನೇ ದಾಳಿಯಾಗಿದೆ. 2022ರಲ್ಲಿ ಹಾಡಹಗಲೇ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು.ಆರೋಪಿ ನಾಗ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆ ಆಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದರು. ಇದೇ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆ್ಯಸಿಡ್ ದಾಳಿ ನಡೆದಿರುವುದು ಜನರು ಮತ್ತಷ್ಟು ಆತಂಕಗೊಳಿಸಿದೆ.
ಗಾಯಾಳುವಾದ ಶ್ರೀ.ನಾಗೇಶ್ ಕೊಂಡಾ ಬಿನ್ ಹನುಮಂತ, 21 ವರ್ಷ, ವಾಸ ನಂ.718, 2ನೇ ಎ ಕ್ರಾಸ್, ಹೊನ್ನಾದೇವಿ ಮೆಡಿಕಲ್ ಸ್ಟೋರ್ ಹತ್ತಿರ, ವೃಷಭಾವತಿ ನಗರ, ಕಾಮಾಕ್ಷಿಪಾಳ್ಯ ಬೆಂಗಳೂರು ರವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ಸುಮಾರು ಒಂದು ವರ್ಷಗಳಿಂದ ವಾಸವಾಗಿದ್ದುಕೊಂಡು ವೃಷಭಾವತಿ ನಗರದಲ್ಲಿರುವ ದಿನೇಶ್ ಎಂಬುವವರ ಪೊಲೈನ್ ಇಂಡಸ್ಟ್ರೀಸ್ ಪ್ಯಾಕ್ಟರಿಯಲ್ಲಿ ಫಿಟ್ಟರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಸುಮಾರು 2 ವರ್ಷಗಳ ಹಿಂದೆ ವೈಟ್ ಫೀಲ್ಡ್ ನಲ್ಲಿ ಕೆಲಸ ಮಾಡಿಕೊಂಡಿದ್ದಾಗ ನಾನು ವಾಸವಿದ್ದ ಮನೆಯ ಬಳಿ ಲಕ್ಷ್ಮಿ ಎಂಬುವವಳು ಪರಿಚಯವಾಗಿದ್ದು ಇಬ್ಬರೂ ಪ್ರತಿದಿನ ಪೋನ್ನಲಲ್ಲಿ ಮಾತನಾಡುತ್ತಿದ್ದೇವು,
ಈ ದಿನ ದಿನಾಂಕ:22/09/2024 ರಂದು ಕೆಲಸಕ್ಕೆ ರಜೆ ಇದ್ದು ನಾನು ಮದ್ಯಾಹ್ನ ಸುಮಾರು 01-00 ಗಂಟೆಯ ಸಮಯದಲ್ಲಿ ಸುಮ್ಮನಹಳ್ಳಿಯ ಬಾಲಾಜಿ ಬಾರ್ನೆಲ್ಲಿ ಮದ್ಯಪಾನ ಮಾಡಿ ನಂತರ ಊಟ ಮಾಡಿಕೊಂಡು ಮನೆಗೆ ಹೋಗಲು ತೋಟದ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಾ ಲಕ್ಷ್ಮಿಯ ಮೊಬೈಲ್ ನಂಬರ್ ಯಿಂದ ಕರೆ ಬಂದಿದ್ದು ನಾನು ಮಾತನಾಡಿಕೊಂಡು ಹೋಗುತ್ತಿದ್ದೇನು. ಮದ್ಯಾಹ್ನ ಸುಮಾರು 02:00 ಗಂಟೆಯ ಸಮಯದಲ್ಲಿ ಅಪರಿಚಿತ ಆಸಾಮಿಯೊಬ್ಬ ಹಿಂದಿನಿಂದ ಬಂದು ಏಕಾಏಕಿ ತನ್ನ ಕೈಯಲ್ಲಿದ್ದ ಯಾವುದೋ ಕೆಮಿಕಲ್ ಅನ್ನು ಮುಖಕ್ಕೆ ಎರಚಿ ಅಲ್ಲಿಂದ ಓಡಿ ಹೋದನು.
ನನ್ನ ಮುಖ ಊರಿಯುತ್ತಿದ್ದು ಹೊಗೆ ಬಂದ ಹಾಗೆ ಆಗಿದ್ದರಿಂದ ನಾನು ಮನೆಗೆ ಹೋಗಿ ನನ್ನ ಜೊತೆ ವಾಸವಿದ್ದ ಅವಿನಾಶ್ಗೆ. ತಿಳಿಸಿದ್ದು ಅವರು ಈ ವಿಷಯವನ್ನು ನಮ್ಮ ಕಂಪನಿ ಮ್ಯಾನೇಜರ್ ಪಂಕಜ್ ರವರಿಗೆ ವಿಷಯ ತಿಳಿಸಿದಾಗ ಅವರು ರೂಮ್ ಬಳಿ ಬಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಸುಟ್ಟಗಾಯಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುವಂತೆ ತಿಳಿಸಿದ್ದರಿಂದ ಅಂಬುಲೆನ್ಸ್ನದಲ್ಲಿ ಪಂಕಜ್ ರವರು ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ.
ನನ್ನ ಎಡಕಣ್ಣು ಮತ್ತು ತುಟಿಗಳು ಊದಿಕೊಂಡಿದ್ದು ಮುಖದ ಎಡಭಾಗ ಸುಟ್ಟಂತಾಗಿದ್ದು ಎಡಕೈಯಲ್ಲೂ ಸುಟ್ಟಗಾಯದ ಕಲೆಗಳಾಗಿದ್ದು ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತೇನೆ. ಆದ್ದರಿಂದ ನನಗೆ ಯಾವುದೋ ಕೆಮಿಕಲ್ ಎರಚಿ ಗಾಯಗೊಳಿಸಿರುವ ಅಪರಿಚಿತ ಆಸಾಮಿಯನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಕೊಟ್ಟಿರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದೂರು ದಾಖಲಿಸಿಕೊಂಡು ಪ್ರಕರಣ ತನಿಖೆ ಮಾಡುತ್ತಿರುತ್ತಾರೆ.